Ad image

ಹದಗೆಟ್ಟ ರಸ್ತೆ ತಗ್ಗು ಗುಂಡಿಗಳ ಮಧ್ಯ ರೈಲು ನಿಲ್ದಾಣ 

Vijayanagara Vani
ಹದಗೆಟ್ಟ ರಸ್ತೆ ತಗ್ಗು ಗುಂಡಿಗಳ ಮಧ್ಯ ರೈಲು ನಿಲ್ದಾಣ 
ಕೊಟ್ಟೂರು: ನಾಡಿನ ಆರಾಧ್ಯ ದೈವನಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಪುಣ್ಯ ಕ್ಷೇತ್ರವಾದ ಕೊಟ್ಟೂರಿಗೆ ಪ್ರತಿದಿನ ನೂರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಜನಸಾಮಾನ್ಯರ ಮಧ್ಯಮ ವರ್ಗದ ಜನರ ಜೀವನಾಡಿ ಎಂದರೆ ಅದುವೇ ರೈಲು ಸಂಚಾರವಾಗಿದೆ. ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ಬಂದರೆ ಪ್ರಯಾಣಿಕರನ್ನು ಹದಗೆಟ್ಟಿರುವ ರಸ್ತೆಗಳು ಸ್ವಾಗತಿಸುತ್ತದೆ.
ಕೊಟ್ಟೂರಿಗೆ ರೈಲು ನಿಲ್ದಾಣ ಆಗಬೇಕೆಂದು ಈ ಭಾಗದ ಜನರ ಬಹುದಿನದ ಬೇಡಿಕೆ ಹಾಗೂ ಕೊಟ್ಟೂರು ರೈಲ್ವೆ ಸಮಿತಿ ಹೋರಾಟಗಾರರ ಶ್ರಮದ ಪ್ರತಿಫಲವೇ ಇಂದು ಕೊಟ್ಟೂರಿನಲ್ಲಿ ರೈಲು ನಿಲ್ದಾಣವಾಗಿದೆ. 
ರೈಲು ನಿಲ್ದಾಣಕ್ಕೆ ಬಂದು ಇಳಿದರೆ ಪ್ರಯಾಣಿಕರನ್ನು ಹದಗೆಟ್ಟಿರುವ ರಸ್ತೆಗಳು ಸ್ವಾಗತಿಸುತ್ತದೆ. ಈ ರಸ್ತೆಯಲ್ಲಿ ಬರುವ ಪ್ರಯಾಣಿಕರು, ಭಕ್ತರು , ಬೈಕ್ ಸವಾರರು ವಿದ್ಯಾರ್ಥಿಗಳು, ಈ ಮಾರ್ಗದಲ್ಲಿ ಬರುವ ಗ್ರಾಮದ ರೈತರು ಈ ಹದಗೆಟ್ಟಿರುವ ರಸ್ತೆಗಳ ಗುಂಡಿಗೆ ಬಿದ್ದು ಕೈ ಕಾಲು ಮುರಿದು ಕೊಂಡಿರುವ ಎಷ್ಟೋ ಪ್ರಸಂಗಗಳು ನಡೆದಿದೆ ಎಂದು ಬೈಕ್ ಸವಾರ ಪ್ರವೀಣ್ ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ವೇಳೆ ರೈಲ್ವೆ ಸ್ಟೇಷನ್ ಗೆ ಹೋಗಬೇಕಾದರೆ ಒಂದು ಕ್ಷಣ ಭಯ ಉಂಟಾಗುತ್ತದೆ. ಯಾಕೆ ಎಂದರೆ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲ ಬರುವ ಭಕ್ತಾದಿಗಳು ಕತ್ತಲನಲ್ಲೇ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. 
ದಿನನಿತ್ಯ ಈ ಮಾರ್ಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತದೆ ಆದರೆ ಪಕ್ಕದಲ್ಲಿರುವ ಮಾಳಿಗೆಗಳ ಅಂಗಡಿ ಮಾಲೀಕರಿಗೆ ಪ್ರತಿದಿನ ಧೂಳನ್ನು ಕುಡಿಯುತ್ತಿದ್ದಾರೆ .ಇದರಿಂದ ಎಷ್ಟು ಸಲ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದು ಉಂಟು ಇದರ ಬಗ್ಗೆ ಸಂಬಂಧಪಟ್ಟ ಲೋಕುಪಯೋಗಿ ಇಲಾಖೆ ಅಧಿಕಾರಿಗಳು ನಮಗೂ ಈ ರಸ್ತೆಗೂ ಯಾವುದೇ ರೀತಿ ಸಂಬಂಧವಿಲ್ಲ ಎಂಬುವಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ರಸ್ತೆಯನ್ನು ದುರಸ್ತಿ ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರಾದ ಅಂಜಿನಿ, ದುರುಗೇಶ, ಕೊಟ್ರೇಶ್, ಪತ್ರಿಕೆ ಮೂಲಕ ಆಗ್ರಹಿಸಿದರು.
 ರೈಲ್ವೆ ಸ್ಟೇಷನ್‌ಗೆ ತೆರಳಬೇಕೆಂದರೆ ತಗ್ಗು, ಗುಂಡಿಗಳಿಂದ ಕೂಡಿರುವ ರಸ್ತೆ ಮದ್ಯೆ ಭಯದಿಂದಲೇ ಚಲಿಸಬೇಕು, ರಾತ್ರಿ ಸಮಯದಲ್ಲಿ ರೈಲ್ವೆ ಸ್ಟೇಷನ್‌ಗೆ ಹೋಗಬೇಕೆಂದರೆ ಅದರಲ್ಲೂ ಮಳೆ ಬಂದರೆ ದಾರಿ ಎಲ್ಲಿದೆ ಎಂದು ಹುಡುಕಬೇಕು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕು.ಮತ್ತು ಯಾವೊಬ್ಬ ಅಧಿಕಾರಿಗಳು ತಲೆ ಇತ್ತ ಹಾಕುವುದಿಲ್ಲ..ಎಂದು ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಪತ್ರಿಕೆಗೆ ತಿಳಿಸಿದರು.

Share This Article
error: Content is protected !!
";