ಬಳ್ಳಾರಿ,ಏ.09.
ಹಾವೇರಿ ಜಿಲ್ಲೆ ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆಯಲ್ಲಿ ಏ. 10 ಮತ್ತು 14 ರಂದು ಯಾವುದೇ ವಹಿವಾಟು ಇರುವುದಿಲ್ಲ.
ಏ.10 ರಂದು ಮಹಾವೀರ ಜಯಂತಿ ಹಾಗೂ ಏ.14 ರಂದು ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇರುವುದರಿಂದ ಬ್ಯಾಡಗಿ ವರ್ತಕರ ಸಂಘದಿAದ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈ ದಿನಗಳಂದು ಒಣಮೆಣಸಿನಕಾಯಿ ವ್ಯಾಪಾರ ವಹಿವಾಟು ಇರುವುದಿಲ್ಲ ಹಾಗೂ ಎಂದಿನAತೆ ಏ.11 ಮತ್ತು ಏ. 15 ರಂದು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ವಹಿವಾಟು ನಡೆಯುತ್ತದೆ ಎಂದು ಬಳ್ಳಾರಿ ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ