ಪತ್ರಿಕೆ ಮತ್ತು ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ನಮ್ಮಲ್ಲಿ ಬೆಳೆಯಬೇಕು, ಆಗ ಮಾತ್ರ ಪತ್ರಿಕೆಗಳು ಉನ್ನತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೆ ಪುಸ್ತಕಗಳನ್ನು ಕೊಂಡು ಓದುವುದರಿಂದ ಲೇಖಕರಿಗೆ ಆರ್ಥಿಕವಾಗಿ ಅನುಕೂಲವಾಗಲಿದ್ದು, ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ಬರೆದು ಪ್ರಕಟಿಸಲು ಅನುಕೂಲವಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರುಸ್ಕೃತ ಮಂಜಮ್ಮ ವಿ ಜೋಗತಿ ತಿಳಿಸಿದರು.
ತಾಲೂಕಿನ ತೆಕ್ಕಲಕೋಟೆಯ ಶ್ರೀಮತಿ ಹೊನ್ನೂರಮ್ಮ ದಿವಂಗತ ಎಂ.ಸಿದ್ದಪ್ಪ ಸರ್ಕಾರಿಪ್ರಥಮದರ್ಜೆ ಕಾಲೇಜಿನ ಬಯಲು ರಂಗಮ0ದಿರದಲ್ಲಿ ಯುವ ಕವಿ ನಿಟ್ರುವಟ್ಟಿ ಲಕ್ಷö್ಮಣ ಅವರ ಬಾಲಶತಕ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ನಮ್ಮಲ್ಲಿ ಇಂದಿಗೂ ಪತ್ರಿಕೆಗಳನ್ನು ಕೊಂಡು ಓದುವ ಸಂಸ್ಕೃತಿ ಹೆಚ್ಚಾಗುತ್ತಿಲ್ಲ. ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು, ಪ್ರತಿಯೊಬ್ಬರು ಪತ್ರಿಕೆ ಮತ್ತು ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡುಕೊಳ್ಳಬೇಕೆ0ದು ಕರೆ ನೀಡಿದರು.
ನಾನು ಈ ಮಟ್ಟಕ್ಕೆ ಬೆಳೆಯಲು ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಲು ಪತ್ರಿಕೆಗಳು ಮತ್ತು ಪುಸ್ತಕಗಳು ಸಾಕಷ್ಟು ಅನುಕೂಲ ಮಾಡಿಕೊಟ್ಟಿವೆ. ನಾನು ಪ್ರತಿನಿತ್ಯ ಪತ್ರಿಕೆಯನ್ನು ಓದುತ್ತೇನೆ. ವಿವಿಧ ಪುಸ್ತಕಗಳನ್ನು ಓದುತ್ತಿದ್ದು, ಇಂದು ಸಭೆ ಸಮಾರಂಭಗಳಲ್ಲಿ ಮಾತನಾಡುವ ಕಲೆ ಸಿದ್ದಿಸಿದ್ದು ಓದಿನಿಂದ ಎಂದು ಹೇಳಿದರು.
ಕವಿಗಳು ಸಮಾಜದಲ್ಲಿ ತುಳಿತಕ್ಕೊಳಗಾದವರ ಮತ್ತು ಶೋಷಿತರ ಧ್ವನಿಯಾಗಿ ಕಾವ್ಯ ಬರೆಯಬೇಕು, ಕಾವ್ಯದಿಂದ ಸಮಾಜ ತಿದ್ದುವ ಕಾರ್ಯ ನಡೆಯಬೇಕು, ಜ್ಞಾನದಿಂದ ದುಡ್ಡು ಸಂಪಾದನೆ ಮಾಡಬಹುದೆ ಹೊರತು ದುಡ್ಡಿನಿಂದ ಜ್ಞಾನ ಸಂಪಾದನೆ ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ವಿದ್ಯೆಯನ್ನು ಕಲಿಯಬೇಕು, ವಿದ್ಯೆ ಇದ್ದರೆ ಮಾತ್ರ ಸಮಾಜದಲ್ಲಿ ಉತ್ತಮವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಸಮಾಜದಲ್ಲಿ ನನ್ನಂತಹ ಮಗು ಹುಟ್ಟಿದರೆ ಆ ಮಗುವನ್ನು ಯಾವ ತಂದೆ ತಾಯಿ ನಿರ್ಲಕ್ಷೆö್ಯ ಮಾಡಬೇಡಿ, ಅವರಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಿ ಅವರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನನ್ನಂತೆ ಹುಟ್ಟಿದ ಅನೇಕ ಮಕ್ಕಳಿಗೆ ಶಿಕ್ಷಣವಿಲ್ಲದೆ ಅನೇಕರು ಇಂದು ಸಿಗ್ನಲ್‌ಗಳಲ್ಲಿ, ರೈಲುಗಳಲ್ಲಿ, ರಸ್ತೆಗಳಲ್ಲಿ ನಿಂತು ಭಿಕ್ಷೆ ಬೇಡುವ ಪರಿಸ್ಥಿತಿ ಇರುತ್ತದೆ. ಆದ್ದರಿಂದ ನನ್ನಂತಹ ಮಗು ಹುಟ್ಟಿದರೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕೆಂದು ಮನವಿ ಮಾಡಿದರು.
ಸಾಹಿತಿ ಹೆಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ ನಮ್ಮದೆಯ ಜ್ಯೋತಿ ಮತ್ತೊಂದು ದೀಪವನ್ನು ಹಚ್ಚುವ ಕೆಲಸವಾಗಬೇಕು, ಸಾಂಸ್ಕೃತಿಕ, ಸಾಹಿತ್ಯಿಕ ಕಾಯಕ ದೀಪವಾಗಿ ನಮ್ಮ ಜೀವನ ಬೆಳಗುವಂತಾಗಬೇಕೆ0ದು ಹೇಳಿದರು.
ಪ್ರಾಚಾರ್ಯ ಮಲ್ಲಿಕಾರ್ಜುನ ಮೋಕಾ ಮಾತನಾಡಿದರು. ಲೇಖಕ ದೀಕ್ಷಿತ್ ನಾಯಕ್ ಬಾಲಶತಕ ಕೃತಿ ಪರಿಚಯ ಮಾಡಿಕೊಟ್ಟರು. ಕರುನಾಡು ರಾಜ್ಯ ಪರಿಷತ್ ಅಧ್ಯಕ್ಷ ಪಯಾಜ್ ಅಹಮ್ಮದ್ ಖಾನ್, ಕವಿ ಎನ್.ಎಸ್.ವೇಣುಗೋಪಾಲ, ಕೆ.ಎಂ.ಸಿದ್ದರಾಮಯ್ಯ ಗವಾಯಿ ಲೇಖಕ ನಿಟ್ರುವಟ್ಟಿ ಲಕ್ಷö ಇದ್ದರು.