Ad image

ಬೆಳಗಾವಿ ಚಳಿಗಾಲ‌: ಅಧಿವೇಶನ-2024… ಎಲ್ಲ ಸಮಿತಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು: ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್

Vijayanagara Vani
ಬೆಳಗಾವಿ ಚಳಿಗಾಲ‌: ಅಧಿವೇಶನ-2024… ಎಲ್ಲ ಸಮಿತಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು: ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್

ಬೆಳಗಾವಿ ಡಿ.5 (): ಪ್ರಸಕ್ತ ಸಾಲಿನ ಚಳಿಗಾಲದ‌ ಅಧಿವೇಶನದಲ್ಲಿ ಯಾವುದೇ ಲೋಪಗಳು ಆಗದಂತೆ ಎಲ್ಲ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ‌‌‌ ಮೊಹಮ್ಮದ್ ರೋಷನ್ ಅವರು‌ ಸೂಚನೆ ನೀಡಿದರು.

- Advertisement -
Ad imageAd image

ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಗುರುವಾರ (ಡಿ.5) ಜರುಗಿದ ಚಳಿಗಾಲ ಅಧಿವೇಶನ-2024 ಸಿದ್ಧತೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ‌ ವಹಿಸಿ ಅವರು‌ ಮಾತನಾಡಿದರು.

ಅಧಿವೇಶನಕ್ಕೆ ಆಗಮಿಸುವ ಅಧಿಕಾರಿ ಸಿಬ್ಬಂದಿಗಳಿಗೆ ಎಲ್ಲ‌ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಡಿ.9 ರಿಂದ ಹತ್ತು ದಿನಗಳ‌‌ ಕಾಲ ರಾಜ್ಯದ ಇಡೀ ಆಡಳಿತ ಯಂತ್ರ ಬೆಳಗಾವಿಯಲ್ಲಿರಲಿದ್ದು ಯಾವುದೇ ಲೋಪಗಳು ಆಗದಂತೆ ಎಲ್ಲ‌ ಅಧಿಕಾರಿ ಸಿಬ್ಬಂದಿಗಳು ಜಾಗೃತರಾಗಿರುವಂತೆ ತಿಳಿಸಿದರು.

ಚಳಿಗಾಲ‌ ಅಧಿವೇಶನ ಕುರಿತಂತೆ ಈಗಾಗಲೇ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದ್ದು, ಎಲ್ಲ‌ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು.

ಅಧಿವೇಶನಕ್ಕೆ ಆಗಮಿಸುವ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. ಅಧಿವೇಶ‌ನ ಜರುಗುವ ಹತ್ತು ದಿನಗಳ‌ ಕಾಲ ಸುವರ್ಣಸೌಧದ ಆಡಿಟೋರಿಯಂ ನಲ್ಲಿ ಸಾಂಸ್ಕೃತಿಕ‌ ಕಾರ್ಯಕ್ರಮಗಳ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಅಧಿವೇಶನಕ್ಕೆ‌ ಆಗಮಿಸುವ ಮುಖ್ಯಮಂತ್ರಿ, ಉಪಮುಖ್ಯಂಮತ್ರಿ, ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ವಸತಿ ಹಾಗೂ ಊಟದ ವ್ಯವಸ್ಥೆ ಒದಗಿಸಬೇಕು.‌ ಈ ವಿಷಯದಲ್ಲಿ ಯಾವುದೇ ನ್ಯೂನ್ಯತೆಗಳು ಆಗದಂತೆ‌‌ ನಿಗಾವಹಿಸುವಂತೆ ತಿಳಿಸಿದರು.

ಛಾಯಾಚಿತ್ರ ಪ್ರದರ್ಶನ:

ಕಾಂಗ್ರೇಸ್ ಅಧಿವೇಶನಕ್ಕೆ ನೂರು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ.‌ ಅಧಿವೇಶನ ವೀಕ್ಷಣೆಗೆ ಆಗಮಿಸುವ ಶಾಲಾಮಕ್ಕಳು, ಸಾರ್ವಜನಿಕರು “ಗಾಂಧೀ ಭಾರತ” ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಣೆಗೆ ಅನುಕೂಲವಾಗುವಂತೆ ರೂಪು ರೇಷೆಗಳನ್ನು ಸಿದ್ಧಪಡಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಸುವರ್ಣ ಸೌಧದಲ್ಲಿನ ಮುಖ್ಯಮಂತ್ರಿ,‌ ಉಪಮುಖ್ಯಮಂತ್ರಿಗಳ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳ‌ ಕಚೇರಿಯಲ್ಲಿ ಗಣಕಯಂತ್ರ ಹಾಗೂ ಇಂಟರ್ನೆಟ್‌ ವ್ಯವಸ್ಥೆ‌ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ‌ ಕುರಿತು ಮೇಲಿಂದ ಮೇಲೆ ನಿಗಾವಹಿಸಬೇಕು.

ಅಧಿವೇಶನ ಸಂದರ್ಭದಲ್ಲಿ‌ಆಗಮಿಸುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಸಚಿವರುಗಳಿಗೆ ನಿಯೋಜಿಸಿದ ಸಂಪರ್ಕಾಧಿಕರಿಗಳು ನಿರಂತರ ಸಂಪರ್ಕದಲ್ಲಿರಬೇಕು. ಯಾವುದೇ ಕಾರಣಕ್ಕೂ ಶಿಷ್ಟಾಚಾರ‌‌ ಉಲ್ಲಂಘನೆಯಾಗದಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ ದಿನೇಶಕುಮಾರ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕರ ಆಯುಕ್ತೆ ಶುಭಾ.ಡಿ, ವಿಶೇಷ ಭೂಸ್ವಾಧಿನ ಆಯುಕ್ತರಾದ ಹರ್ಷ ಶೆಟ್ಟಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ವಿವಿಧ ಇಲಾಖೆ‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಬಳಿಕ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸುವರ್ಣ ವಿಧಾನಸೌಧದಲ್ಲಿ ನಡೆದಿರುವ ವಿವಿಧ ಸಿದ್ಧತಾ ಕೆಲಸಗಳನ್ನು, ಸ್ವಚ್ಛತಾಕಾರ್ಯವನ್ನು ಮತ್ತು ಸಂಪರ್ಕ‌ ವ್ಯವಸ್ಥೆಯನ್ನು ಪರಿಶೀಲಿಸಿದರು.
***

Share This Article
error: Content is protected !!
";