Ad image

ಬಳ್ಳಾರಿ ಜಿಟಿಟಿಸಿ: ತರಬೇತಿಗಾಗಿ ಅರ್ಜಿ ಆಹ್ವಾನ

Vijayanagara Vani
ಬಳ್ಳಾರಿ,ಅ.16:
ನಗರದ ರೇಡಿಯೋ ಪಾರ್ಕ್ ಬಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಹತ್ತನೇ ತರಗತಿ ಉತ್ತೀರ್ಣರಾದ ಯುವಕರಿಗೆ ‘ಟೂಲರೂಮ್ ಮಶಿನಿಸ್ಟ್’ ತಾಂತ್ರಿಕ ದೀರ್ಘಾವತಿ ವೃತ್ತಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಒಂದೇ ಕೋರ್ಸಿನಲ್ಲಿ ಫಿಟ್ಟರ್ ಟರ್ನರ್, ಮಿಲ್ಲರ್, ಗ್ರೆöÊಂಡರ್, ಸಿಎನ್‌ಸಿ, ಕ್ಯಾಡ್-ಕ್ಯಾಮ್ ಮತ್ತು ಟೂಲ್ ಆಂಡ್ ಡೈ ಮೇಕಿಂಗ್ ಟ್ರೇಡ್‌ಗಳಲ್ಲಿ ಆನ್ ದಿ ಜಾಬ್ ತರಬೇತಿ ನೀಡಲಾಗುತ್ತದೆ.
ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗಾವಕಾಶಗಳು ದೊರಕುತ್ತವೆ. ಜೊತೆಗೆ ಅಟೊಕ್ಯಾಡ್, ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕೌಶಲ್ಯ ಹಾಗೂ ಉದ್ಯೋಗ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತದೆ. ತರಬೇತಿಯ ನಂತರ ವಿದ್ಯಾರ್ಥಿಗಳಿಗೆ ಟೂಲಿಂಗ್, ವಿಮಾನ ತಯಾರಿಕೆ ಮತ್ತು ಅಟೊಮೊಬೈಲ್ ವಲಯಗಳ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಿ ಕೊಡಲಾಗುವುದು.
ಮೆಕ್ಯಾನಿಕಲ್, ಎಲೆಕ್ಟಾçನಿಕ್, ಎಲೆಕ್ಟಿಕಲ್ ಡಿಪ್ಲೋಮಾ ಮತ್ತು ಇಂಜಿನಿಯರಿ0ಗ್ ವಿದ್ಯಾರ್ಥಿಗಳಿಗೆ ಡಿಸೆಂಬರ್ ಮಾಹೆಯಿಂದ ಇಂಟರ್ನ್ಷಿಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
*ಕೋರ್ಸ್ ಗಳ ವಿವರ:*
ಟೂಲ್ ರೂಮ್ ಮಶಿನಿಸ್ಟ್- ಎಸ್‌ಎಸ್‌ಎಲ್‌ಸಿ (1 ವರ್ಷ ಅವಧಿ), ಡಿಸೈನರ್ ಮೆಕಾನಿಕಲ್- ಐಟಿಐ/ಡಿಪ್ಲೋಮಾ/ಬಿಇ (4 ತಿಂಗಳು), ಡ್ರಾಫ್ಟ್÷್ಸಮನ್ ಮೆಕಾನಿಕಲ್- ಎಸ್‌ಎಸ್‌ಎಲ್‌ಸಿ/ಐಟಿಐ (4 ತಿಂಗಳು), ಇಂಡಸ್ಟಿಯಲ್ ಆಟೋಮೇಶನ್- ಐಟಿಐ/ಡಿಪ್ಲೋಮಾ/ಬಿಇ (4 ತಿಂಗಳು), ಪಿಎಲ್‌ಸಿ, ಹೆಎಂಐ ಮತ್ತು ಎಸ್‌ಸಿಎಡಿಎ- ಐಟಿಐ/ಡಿಪ್ಲೋಮಾ/ಬಿಇ (4 ತಿಂಗಳು) ಹಾಗೂ ಕಚೇರಿ ನಿರ್ವಹಣೆ- ಹತ್ತನೇ ತರಗತಿ ಫೇಲ್ (4 ತಿಂಗಳು).
ಜಿಟಿಟಿಸಿ ತರಬೇತಿ ಕೇಂದ್ರದಲ್ಲಿ ಹಲವಾರು ಉನ್ನತ ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಪ್ರಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಐ.ಟಿ.ಐ ಕ್ಯಾಂಪಸ್ ನ ಜಿ.ಟಿ.ಟಿ.ಸಿ ಕೇಂದ್ರ ಅಥವಾ ಮೊ.9972320076, 9620057086 ಗೆ ಸಂಪರ್ಕಿಸಬಹುದು ಎಂದು ಕೇಂದ್ರದ ಪ್ರಾಚಾರ್ಯ ಮುತ್ತಣ್ಣ ದರ್ಮಂತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";