ಬಳ್ಳಾರಿ: ಫೆ.20, 21 ಮತ್ತು 22 ರಂದು ಜಿಂದಾಲ್‌ನಲ್ಲಿ ಬೃಹತ್ ರಕ್ತದಾನ ಶಿಬಿರ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಸ್ವಯಂ ಪ್ರೇರಿತ ರಕ್ತದಾನ ಮಾಡಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

Vijayanagara Vani
ಬಳ್ಳಾರಿ: ಫೆ.20, 21 ಮತ್ತು 22 ರಂದು ಜಿಂದಾಲ್‌ನಲ್ಲಿ ಬೃಹತ್ ರಕ್ತದಾನ ಶಿಬಿರ  18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಸ್ವಯಂ ಪ್ರೇರಿತ ರಕ್ತದಾನ ಮಾಡಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

 

- Advertisement -
Ad imageAd image

ಬಳ್ಳಾರಿ,ಫೆ.17
ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲು ಬಳಿಯ ಜೆಎಸ್‌ಡಬ್ಲೂö್ಯ ಸಂಸ್ಥೆ ವತಿಯಿಂದ ಜಿಂದಾಲ್ ನ ವಿವಿಧ 10 ಸ್ಥಳಗಳಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಅರ್ಹರು ಸ್ವಯಂ ಪ್ರೇರಿತ ರಕ್ತದಾನ ಮಾಡುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ ಕುರಿತಂತೆ ಆರೋಗ್ಯಾಧಿಕಾರಿಗಳ ಜೊತೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಮನುಷ್ಯ ಬದುಕಿರುವಾಗ ದಾನ ಮಾಡಬಹುದಾದಂತ ವಸ್ತು ರಕ್ತ. 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಪುರುಷ ಮತ್ತು ಮಹಿಳೆ ರಕ್ತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಇದೇ ಫೆಬ್ರವರಿ 20, 21, 22 ರಂದು ಜಿಂದಾಲ್‌ನಲ್ಲಿ ಜರಗುವ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ತಪ್ಪದೇ ರಕ್ತದಾನ ಮಾಡಿ ಶಿಬಿರ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ರಕ್ತದಾನ ಮಾಡುವುದರಿಂದ ದಾನಿಗಳ ದೇಹದಲ್ಲಿ ಹೊಸ ಚೈತನ್ಯ ಉಂಟು ಮಾಡಲು ಅನುವು ಮಾಡಿದಂತಾಗುತ್ತದೆ. ರಕ್ತದಾನದ ಮಹತ್ವ ಸ್ಮರಿಸಲು ವ್ಯಾಪಕ ಪ್ರಚಾರ ನೀಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ರಕ್ತದಾನ ಮಾಡುವುದರಿಂದ ಪ್ರತಿದಿನ ಅಪಘಾತಗಳಿಂದ ಗಾಯಗೊಂಡವರಿಗೆ ಹಾಗೂ ರಕ್ತಹೀನತೆಯಿಂದ ಬಳಲುವ ಗರ್ಭಿಣಿಯರಿಗೆ, ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ಮತ್ತು ತಲಸಿಮಿಯಾದಂತ ಕಾಯಿಲೆಯಿಂದ ಬಳಲುತ್ತಿರುವವರಿಗೆ ನಿರಂತರವಾಗಿ ರಕ್ತದ ಅವಶ್ಯಕತೆ ನೀಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಗೆ ನಿರಂತರವಾಗಿ ಸಹಕಾರಿಯಾಗಲಿದೆ. ಹಾಗಾಗಿ ಅರ್ಹ ಪ್ರತಿಯೊಬ್ಬ ಪುರುಷರು ಮೂರು ತಿಂಗಳಿಗೊಮ್ಮೆ, ಮಹಿಳೆ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಮಾನವೀಯತೆಯ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದರು.
*5000 ಯುನಿಟ್ ರಕ್ತ ಸಂಗ್ರಹಕ್ಕೆ ಗುರಿ:*
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಹಣಾ ಘಟಕ ಇವರೊಂದಿಗೆ ತೋರಣಗಲ್ಲು ನ ಜೆಎಸ್‌ಡಬ್ಲ್ಯು ಜಿಂದಾಲ್ ಇವರ ಸಹಯೋಗದಲ್ಲಿ ಜಿಂದಾಲ್ ಆವರಣದ ವಿವಿಧ 10 ಸ್ಥಳಗಳಲ್ಲಿ ರಕ್ತ ಭಂಡಾರ (ಬ್ಲಡ್‌ಬ್ಯಾಂಕ್) ಮೂಲಕ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಒಟ್ಟು 5000 ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಲು ಗುರಿ ಹೊಂದಲಾಗಿದೆ. ಶಿಬಿರದಲ್ಲಿ 09 ರಕ್ತ ಕೇಂದ್ರಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದರು.
*ರಕ್ತದಾನ ಶಿಬಿರ ನಡೆಯುವ ಸ್ಥಳ:*
ಜಿಂದಾಲ್‌ನ ಓಪಿಜೆ ಸೆಂಟರ್‌ನ ತಮನ್ನಾ ಶಾಲೆ, ಜಿಂದಾಲ್ ಸಂಜೀವಿನಿ ಆಸ್ಪತ್ರೆ, ವಿದ್ಯಾನಗರದ ಆರೋಗ್ಯ ಕೇಂದ್ರ ಮತ್ತು ಲಿಟಲ್ ಎಲ್ಲೆ, ಹೆಚ್‌ಎಸ್‌ಟಿ ಕಾಂಪ್ಲೆಕ್ಸ್, ಸಿಆರ್‌ಎಂ-1 ಪ್ಲಾö್ಯಂಟ್, ಲಾಜಿಸ್ಟಿಕ್ ಪ್ಲಾಂಟ್, ಎಸ್‌ಎಂಎಸ್-4 ಪ್ಲಾö್ಯಂಟ್, ಹೆಚ್‌ಆರ್‌ಡಿ ಪ್ಲಾö್ಯಂಟ್, ಜೆಎಸ್‌ಎಂಎಸ್‌ಹೆಚ್‌ನ ಸ್ಟೆಪ್‌ಡೌನ್ ಐಸಿಯು ಮತ್ತು ಜೆಎಸ್‌ಡಬ್ಲೂö್ಯ ಎನರ್ಜಿ ಸಭಾಂಗಣದಲ್ಲಿ ಬೆಳಿಗ್ಗೆ 09 ಗಂಟೆಯಿAದ ಸಂಜೆ 04.30 ಗಂಟೆಯವರೆಗೆ ನಡೆಯಲಿದೆ.
*ಇಲ್ಲಿ ಸಾರ್ವಜನಿಕರಿಗೆ ಅವಕಾಶ:*
ತೋರಣಗಲ್ಲು ನ ಒಪಿಜೆ ಜಿಂದಾಲ್ ತಮನ್ನಾ ಶಾಲೆ ಆವರಣ ಮತ್ತು ಜಿಂದಾಲ್ ಸಂಜೀವಿನಿ ಆಸ್ಪತ್ರೆ ಆವರಣ ಸೇರಿ ಈ ಎರಡು ಸ್ಥಳದಲ್ಲಿ ಸಾರ್ವಜನಿಕರಿಗೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಅವಕಾಶವಿದ್ದು, ಮೂರು ದಿನಗಳ ಕಾಲ ತಪ್ಪದೇ ಆಗಮಿಸಿ ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ನೋಂದಣಿಗಾಗಿ ಮೊ.7829012277, 8039542124, 08395-42222, 9945367894, 9686595215 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದರು.
ಈ ಸಂದರ್ಭಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಡ್ಯಾಪ್ಲೋ ಮೇಲ್ವಿಚಾರಕ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
————

Share This Article
error: Content is protected !!
";