ಬಳ್ಳಾರಿ: ಮೇ 10 ನೀರಿನ ಟ್ಯಾಂಕ್ನಲ್ಲಿ ಬಿದ್ದು ಮೂವರು ಎಂಜಿನೀಯರ್ಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

Vijayanagara Vani
ಬಳ್ಳಾರಿ:  ಮೇ 10  ನೀರಿನ ಟ್ಯಾಂಕ್ನಲ್ಲಿ ಬಿದ್ದು ಮೂವರು ಎಂಜಿನೀಯರ್ಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು‌ ಬಳಿ ಇರುವ ಜಿಂದಾಲ್ ಉಕ್ಕಿನ ಕಾರ್ಖಾನೆಯ ನೀರಿನ ಹೊಂಡದಲ್ಲಿ ಬಿದ್ದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರನ್ನ ಭುವನಹಳ್ಳಿಯ ಜಡೆಪ್ಪ(23), ಬೆಂಗಳೂರಿನ ಸುಶಾಂತ್(25), ಚೆನ್ನೈನ ಶಿವಮಹದೇವ(23) ಎಂದು ಗುರುತಿಸಲಾಗಿದೆ. ನೀರಿನ ಹೊಂಡಕ್ಕೆ ಜೋಡಿಸಲಾಗಿದ್ದ ಪೈಪ್​ನಲ್ಲಿ ಸಮಸ್ಯೆ ಕಂಡು ಬಂದು​ ರಿಪೇರಿ ಮಾಡಲು ಮೂವರು ಹೋಗಿದ್ದಾರೆ. ಪೈಪ್​ನಲ್ಲಿ ಬರುತ್ತಿದ್ದ ನೀರನ್ನು ನಿಲ್ಲಿಸದೆ ಹಾಗೆ ದುರಸ್ತಿ ಕಾರ್ಯ ಮಾಡುವಾಗ, ನೀರಿನ ರಭಸಕ್ಕೆ ಚನ್ನೈ ಮೂಲದ ಮಹಾದೇವನ್​​ ನೀರಿನ ಹೊಂಡದಲ್ಲಿ ಬಿದ್ದಿದ್ದಾನೆ. ಈತನನ್ನು ರಕ್ಷಿಸಲು ಹೋಗಿ ಇನ್ನಿಬ್ಬರು ಇಳಿದು ಮೃತಪಟ್ಟಿದ್ದಾರೆ. ತೋರಣಗಲ್ಲು‌ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಘಟನೆಗೆ ನಿಖರವಾದ ಕಾರಣ ಏನು ಎನ್ನುವದರ ಬಗ್ಗೆ ತನಿಖೆ ನಡೆಯುತ್ತಿದೆ.

- Advertisement -
Ad imageAd image
Share This Article
error: Content is protected !!
";