ಬಳ್ಳಾರಿ ಮಹಾನಗರ ಪಾಲಿಕೆ; ಬೃಹತ್ ತ್ಯಾಜ್ಯೋತ್ಪಾದಕರಿಗೆ ಸೂಚನೆ

Vijayanagara Vani
ಬಳ್ಳಾರಿ ಮಹಾನಗರ ಪಾಲಿಕೆ; ಬೃಹತ್ ತ್ಯಾಜ್ಯೋತ್ಪಾದಕರಿಗೆ ಸೂಚನೆ

ಬಳ್ಳಾರಿ,ಜೂ.27

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಪಾಲಿಕೆಯು ಸೂಚನೆ ನೀಡಿದ್ದು, ಬೃಹತ್ ಘನತ್ಯಾಜ್ಯೋತ್ಪಾದಕರು ದಿನವೊಂದಕ್ಕೆ 100 ಕೆಜಿ ಅಥವಾ ಅದಕ್ಕೂ ಹೆಚ್ಚಿನ ಘನತ್ಯಾಜ್ಯವನ್ನು ಉತ್ಪಾದಿಸುವಂತಹ ಉತ್ಪಾದಕರುಗಳು ಘನತ್ಯಾಜ್ಯ ನಿರ್ವಹಣಾ ಕರ್ತವ್ಯಗಳನ್ನು ತಾವೇ ನಿರ್ವಹಿಸಬೇಕು ಎಂದು ಪಾಲಿಕೆಯು ತಿಳಿಸಿದೆ.
ಘನತ್ಯಾಜ್ಯವನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದ್ದು, ಅದರಲ್ಲಿ ಕೊಳೆಯಬಹುದಾದ ಜೈವಿಕ ತ್ಯಾಜ್ಯ, ಕೊಳೆಯಲಾರದಂತಹ ಜೈವಿಕ ರಹಿತ ತ್ಯಾಜ್ಯ, ಗೃಹೋತ್ಪಾದಕ ಹಾನಿಕಾರಕ ತ್ಯಾಜ್ಯ ಮೂಲದಲ್ಲಿಯೇ ವಿಂಗಡಿಸುವುದು ಒಳಗೊಂಡಂತೆ ಮತ್ತು ಕೊಳೆಯಬಹುದಾದ ಜೈವಿಕ ತ್ಯಾಜ್ಯಗಳ ಸಂಸ್ಕರಣಾ ಮತ್ತು ಔಪಚಾರಿಕ ವ್ಯವಸ್ಠೆಯನ್ನು ಪ್ರಕಟಣೆಗೊಂಡ 30 ದಿನಗಳೊಳಗಾಗಿ ತಮ್ಮ ಸಂಕೀರ್ಣ, ಆವರಣಗಳಲ್ಲಿ ಅನುಷ್ಟಾನಗೊಳಿಸಬೇಕು ಎಂದು ಮಹಾನಗರ ಪಾಲಿಕೆ ನಿರ್ದೇಶಿಸಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಬೃಹತ್ ತ್ಯಾಜ್ಯೋತ್ಪಾದಕರು ಪ್ರತಿ ದಿನವೊಂದಕ್ಕೆ ತಮ್ಮ ಆವರಣದಿಂದ 100 ಕೆಜಿಗಿಂತ ಕಡಿಮೆ ತ್ಯಾಜ್ಯವನ್ನು ಉತ್ಪಾದಿಸುತ್ತಿರುವರೆಂದು ಸ್ವಯಂ ಘೋಷಣೆ ಪತ್ರವನ್ನು ಜುಲೈ 25 ರೊಳಗಾಗಿ ಪಾಲಿಕೆಗೆ ಸಲ್ಲಿಸಬೇಕು. ನಂತರ ಸಲ್ಲಿಸಲಾಗುವ ಸ್ವಯಂ ಘೋóಷಣೆ ಪತ್ರವನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗುವುದು.
ಸ್ವಯಂ ಘೋಷಣೆಯು ಪರಿಶೀಲನೆಗೆ ಒಳಪಡಿಸಲಾಗುತ್ತದೆ ಮತ್ತು ಅದೇ ರೀತಿಯಲ್ಲಿಯೇ ವರ್ಗೀಕರಿಸಲಾಗುವುದು. ಒಂದು ವೇಳೆ ಸುಳ್ಳು ಎಂದು ಕಂಡು ಬಂದರೆ ದಂಡ ವಿಧಿಸಲಾಗುವುದು.
ಸಾರ್ವಜನಿಕರು ವಿವರವಾದ ಸೂಚನೆಗಳು ಹಾಗೂ ಮಾಹಿತಿಗಾಗಿ http://www.ballaricity.mrc.gov.in/ ವೆಬ್ಸೈಟ್ಗೆ ಭೇಟಿ ನೀಡಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!