ಅಂಗನವಾಡಿ ಕಾರ್ಯಕರ್ತರಿಂದ ಜೂನ್ 24 ಕ್ಕೆ ಬೆಂಗಳೂರು ಚಲೋ..!

Vijayanagara Vani
ಅಂಗನವಾಡಿ ಕಾರ್ಯಕರ್ತರಿಂದ ಜೂನ್ 24 ಕ್ಕೆ ಬೆಂಗಳೂರು ಚಲೋ..!
ರಾಜ್ಯ ಸರ್ಕಾರವು ಸರ್ಕಾರಿ ಶಾಲೆಯಲ್ಲಿ ಎಲ್.ಕೆಜಿ ಮತ್ತು ಯುಕೆಜಿ, ಪ್ರಾರಂಭಿಸಲು ಹಾತುರದ ನಿರ್ಧಾರ ಕೈಗೊಂಡಿರುವುದು ಅತ್ಯಂತ ಖಂಡನಾರ್ಹ ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿಯನ್ನು ಪ್ರಾರಂಭಿಸಬೇಕು. ಅಂಗನವಾಡಿ ಕಾರ್ಯಕರ್ತರೇನು ಶೈಕ್ಷಣಿಕವಾಗಿ ಹಿಂದುಳಿದಿಲ್ಲ. ಇವರು ಕೂಡ ಪದವಿವರೆಗೆ ಶಿಕ್ಷಣವನ್ನು ಪಡೆದಿದ್ದಾರೆ. ಆದ್ದರಿಂದ ಇದೇ ಜೂನ್ 24 ರಂದು ಈ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧರಿಸಲಾಗಿದೆ ಎಂದು ಎಐಟಿಯುಸಿ ಗೌರವಾಧ್ಯಕ್ಷರಾದ ಡಿ.ಎಚ್.ಕಂಬಳಿ ತಿಳಿಸಿದರು.
ಈ ಕುರಿತು ಪತ್ರಿಕಾ ಭವನದಲ್ಲಿ ಅಂಗನವಾಡಿ ಫೆಡರೇಶನ್ ಸಂಘಟನೆ ವತಿಯಿಂದ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರವು ತರಾತುರಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆಜಿ, ಯುಕೆಜಿ, ಪ್ರಾರಂಭಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಈ ರೀತಿ ನಿರ್ಧಾರ ಕೈಗೊಂಡಾಗ ಅಂಗನವಾಡಿ ಕಾರ್ಯಕರ್ತರು ರಾಜ್ಯದಾದ್ಯಂತ ಉಗ್ರವಾದ ಪ್ರತಿಭಟನೆ ನಡೆಸಿದ್ದರು. ಆಗ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ನೀತಿಯನ್ನು ಖಂಡಿಸಿದ ಅವರು, ಈಗ ತಾವೇ ಅಂಗನವಾಡಿ ಕಾರ್ಯಕರ್ತರ ಭವಿಷ್ಯಕ್ಕೆ ಮಾರಕವಾಗುವಂತಹ ನಿರ್ಣಯ ಕೈಗೊಂಡಿರುವುದು ತಕ್ಷಣವೇ ಕೈಬಿಡಬೇಕು ಈ ಎಲ್ಲಾ ಬೇಡಿಕೆಗಳನ್ನು ಇಟ್ಟುಕೊಂಡು ಇದೇ ತಿಂಗಳ 24 ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಅಂದು ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ, ಈ ಹೋರಾಟದ ಯಶಸ್ವಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ: ತಿಪ್ಪಯ್ಯಶೆಟ್ಟಿ, ಲಕ್ಷ್ಮಿ, ಸಾವಿತ್ರಿ, ಗಿರಿಜಮ್ಮ, ರತ್ನಮ್ಮ, ಸುಲೋಚನ, ನಾಗರತ್ನ, ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!