ಶಿವಮೊಗ್ಗ, ಜೂನ್.17; : ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟು ಅಳವಡಿಸಬೇಕಾಗಿದ್ದು, ಕಾರ್ಯಪಾಲಕ ಇಂಜಿನಿಯರ್, ಭದ್ರಾವತಿ ಇವರ ವರದಿಯಂತೆ ಅಂದಾಜು ಒಂದೂವರೆ ತಿಂಗಳು ಕಾಲಾವಕಾಶ ಬೇಕಾಗಿದ್ದು, 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಎಡದಂಡೆ ನಾಲೆಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ.
ಭದ್ರಾ ಜಲಾಶಯದ ಎಡದಂಡೆ ನಾಲೆಯ ವ್ಯಾಪ್ತಿಗೆ ಒಳಪಡುವ ಅಚ್ಚುಕಟ್ಟುದಾರರು ಎಡದಂಡೆ ನಾಲೆಯ ನೀರನ್ನು ಅವಲಂಬಿಸಿ ಭತ್ತ ಅಥವಾ ಇನ್ಯಾವುದೇ ಹೆಚ್ಚು ನೀರು ಅವಲಂಬಿತ ಬೆಳೆಗಳನ್ನು ಬೆಳೆಯಬಾರದು. ಒಂದು ವೇಳೆ ಬೆಳೆಗಳನ್ನು ಬೆಳೆದು ನಾಲೆಯಿಂದ ನೀರು ಸಿಗದೇ ಬೆಳೆ ನಷ್ಟವಾದಲ್ಲಿ ನೀರಾವರಿ ಇಲಾಖೆಯು ಯಾವುದೇ ರೀತಿಯಲ್ಲಿಯೂ ಜವಾವಾಬ್ದಾರಿಯಾಗುವುದಿಲ್ಲ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲ ತಿಳಿರುತ್ತಾರೆ.
ಭದ್ರಾ ಜಲಾಶಯದ ಎಡದಂಡೆ ನಾಲೆಯ ವ್ಯಾಪ್ತಿಗೆ ಒಳಪಡುವ ಅಚ್ಚುಕಟ್ಟು ಭಾಗದ ಎಲ್ಲಾ ರೈತ ಬಾಂಧವರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.