Ad image

ಬಿ.ಜೆ.ಪಿ. ಕಛೇರಿಯಲ್ಲಿ ಭಗವಾನ್ ಮಹಾವೀರರ ಜಯಂತಿ:

Vijayanagara Vani
ಬಿ.ಜೆ.ಪಿ. ಕಛೇರಿಯಲ್ಲಿ ಭಗವಾನ್ ಮಹಾವೀರರ ಜಯಂತಿ:

 ಸಿರುಗುಪ್ಪ.ಏ.10:- ಭಗವಾನ್ ಮಹಾವೀರರು ಜೈನ ಧರ್ಮದ ಕೊನೆಯ ತೀರ್ಥಂಕರರಾಗಿದ್ದು, ಅವರು ತಮ್ಮ ಜೀವನದಲ್ಲಿ ಸತ್ಯ ಮತ್ತು ಅಹಿಂಸೆಯ ಮಾರ್ಗಧಲ್ಲಿ ನಡೆದು ಇಡೀ ಸಮಾಜಕ್ಕೆ ಸನ್ಮಾರ್ಗವನ್ನು ತೋರಿಸಿದ್ದಾರೆ. ಮನುಷ್ಯ ಶ್ರೇಷ್ಟನಾಗುವುದು ಹುಟ್ಟಿನಿಂದಲ್ಲ, ಧರ್ಮದಿಂದ ಎಂದು ಹೇಳಿದ್ದರು ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿAಗಪ್ಪ ತಿಳಿಸಿದರು.

     ನಗರದ ಬಿ.ಜೆ.ಪಿ. ಕಛೇರಿಯಲ್ಲಿ ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಗವಾನ್ ಮಹಾವೀರರು ಅಹಿಂಸೆ, ಸತ್ಯ, ನಿಷ್ಠೆ, ತಾರತಮ್ಯ, ಭ್ರಹ್ಮಚರ್ಯ ಹಾಗೂ ಅಪರಿ ಗ್ರಹಗಳೆಂಬ 5 ವ್ರತಗಳನ್ನು ಪಾಲಿಸುವಂತೆ ಪ್ರತಿಯೊಬ್ಬ ವ್ಯಕ್ತಿಯನ್ನು ಕೇಳಿಕೊಂಡಿದ್ದಾರೆ. ಅವರು ತೋರಿಸಿದ ಸನ್ಮಾರ್ಗದಲ್ಲಿ ಪ್ರತಿಯೊಬ್ಬರು ನಡೆದರೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ.

     ಪ್ರತಿ ಆತ್ಮವು ಸ್ವಂತ ಆನಂದಮಯ ಮತ್ತು ಸರ್ವಜ್ಞ, ಸಂತೋಷವು ನಮ್ಮೊಳಗಿದೆ, ಅದನ್ನು ಹೊರಗೆ ಹುಡುಕಲು ಪ್ರಯತ್ನಿಸಬೇಡಿ, ಪ್ರತಿಯೊಂದು ಜೀವಿಯ ಮೇಲೆ ಕರುಣೆ ಇರಬೇಕು, ದ್ವೇಷವು ವಿನಾಶಕ್ಕೆ ಮಾತ್ರ ಕಾರಣವಾಗುತ್ತದೆ. ಸತ್ಯದ ಬೆಳಕಿನಿಂದ ಪ್ರಭುದ್ಧನಾದ ಜ್ಞಾನಿಯು ಸಾವಿನಿಂದ ಮೇಲೇರುತ್ತಾನೆ ಎನ್ನುವ ತತ್ವ ಸಿದ್ದಾಂತವನ್ನು ಭಗವಾನ ಮಹಾವೀರರು ಹೊಂದಿದ್ದರು ಎಂದು ಹೇಳಿದರು.

     ಬಿ.ಜೆ.ಪಿ.ತಾ.ಅಧ್ಯಕ್ಷ ಹೆಚ್.ಎಂ.ಮಲ್ಲಿಕಾರ್ಜುನಸ್ವಾಮಿ ಕುಂಟ್ನಾಳ್, ಬಿ.ಜೆ.ಪಿ.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎಸ್.ಸಿದ್ದಪ್ಪ, ಮುಖಂಡರಾದ ಕಿರಣ್ ಜೈನ್, ಮಹಾದೇವ, ಮೇಕೆಲಿ ವೀರೇಶ, ಬೆಳಗಲ್ ಬಸವರಾಜ, ಬಂಡ್ರಾಳ್ ಮಲ್ಲಿಕಾರ್ಜುನ, ಪೂಜಾರಿ ಗಾದಿಲಿಂಗ ಇನ್ನಿತರರು ಇದ್ದರು.

Share This Article
error: Content is protected !!
";