ಸಿರುಗುಪ್ಪ.ಮೇ.15:- ಭೂಮಿಗೆ ದೇವಗಂಗೆಯನ್ನು ತರಲು ತಪಸ್ಸು ಮಾಡಿದ ಭಗೀರಥರ ಭಗೀರಥ ಪ್ರಯತ್ನ ಅತ್ಯಂತ ಶ್ಲಾಘನೀಯವಾಗಿದೆ ಎಂದು ಮುಖಂಡ ಯಾಳ್ಗಿ ಹನುಮಯ್ಯ ತಿಳಿಸಿದರು. ನಗರದ ತಾಲೂಕು ಉಪ್ಪಾರ ಸಂಘದ ಕಚೇರಿಯಲ್ಲಿ ಭಗೀರಥ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಗೀರಥ ಮಹರ್ಷಿಗಳು ಗಂಗೆಯನ್ನು ಭೂಮಿಗೆ ತರಲು ಕಠೋರ ತಪಸ್ಸುಮಾಡಿ ಛಲಬಿಡದೆ ಸತತ ಪ್ರಯತ್ನದೊಂದಿಗೆ, ಗಂಗೆಯನ್ನು ಭೂಮಿಗೆ ತಂದಿದ್ದು, ಗಂಗೆಯು ನಮ್ಮ ದೇಶದ ಅತ್ಯಂತ ಪವಿತ್ರ ನದಿಯಾಗಿದ್ದು, ಲಕ್ಷಾಂತರ ಜನರ ಜೀವನಾಡಿಯಾಗಿದೆ. ಉಪ್ಪಾರ ಸಮಾಜದಲ್ಲಿ ಸಮುದಾಯದ ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಬೇಕಾಗುವ ನೆರವನ್ನು ಸಮಾಜದ ಪ್ರತಿಯೊಬ್ಬರು ದೇಣಿಗೆಯ ಮೂಲಕ ನೀಡಬೇಕು, ನಮ್ಮ ಸಮಾಜದ ಮಕ್ಕಳು ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು, ಅದಕ್ಕಾಗಿ ಸಮಾಜದ ಮುಖಂಡರು ಸಂಘಟನೆಯನ್ನು ಬಲಪಡಿಸಬೇಕೆಂದು ಹೇಳಿದರು.
ಮುಖಂಡರಾದ ಕೋದಂಡರಾಮ, ಸಣ್ಣರಂಗಪ್ಪ, ಯಾಳಿಗಿ ವೀರೇಶ, ಧರ್ಮಣ್ಣ, ಹನುಮೇಶ, ಮಂಜುನಾಥ, ತಿರುಮಲಯ್ಯ, ರಂಗಸ್ವಾಮಿ, ಈರಣ್ಣ ಇದ್ದರು.