ಕಾರಟಗಿ : ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಆಲಿಕಲ್ಲು ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೆಸೂಗುರು, ಎಂಎಲ್ ಸಿ ಹೇಮಲತಾ ನಾಯಕ, ಬಿಜೆಪಿರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಶುಕ್ರವಾರ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು.
ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೆಸೂಗೂರು ಮಾತನಾಡಿ ಆಲಿಕಲ್ಲು ಮಳೆಯಿಂದಾಗಿ ಭತ್ತ ಹಾನಿಗೊಳಗಾದ ರೈತರಿಗೆ ಸರಕಾರ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು.
ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದಾರೆ. ಆದರೆ ವರುಣನ ಆರ್ಭಟಕ್ಕೆ ಇದೀಗ ಎಲ್ಲವೂ ನಾಶವಾಗಿದೆ. ತಾಲೂಕಿನ , ಚಳ್ಳೂರು ಕ್ಯಾಂಪ್,ಚಳ್ಳೂರು, ಹಾಗೇದಾಳ, ತೊಂಡಿಹಾಳ, 28ನೇ ಕಾಲು ,ಉಸಿಗಿನ ಕ್ಯಾಂಪ , ಹುಳ್ಕಿಹಾಳ,ಮೈಲಾಪುರ , ಗುಡದೂರು, ಸೋಮನಾಳ, ಗುಂಡೂರು, ಸಿಂಗನಾಳ, ಅಂಜೂರಿ ಕ್ಯಾಂಪ್ ಗಳಲ್ಲಿ ಆಲಿಕಲ್ಲು ಸಹಿತ ಭಾರಿ ಗಾಳಿ ಮಳೆಗೆ ಶೇ. 90 ಕ್ಕೂ ಹೆಚ್ಚು ಪರ್ಸೆಂಟ್ ಭತ್ತ ಉದುರಿ ಹೋಗಿದೆ. ರೈತನ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹೀಗಾಗಿ 15 ದಿನಗಳ ಒಳಗಾಗಿ ರೈತರ ಖಾತೆಗೆ ಪರಿಹಾರದ ಹಣವನ್ನು ಜಮಾ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರಿಗೆ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಕಟಾವು ಮಾಡಲು ಆತಂಕ : ಇನ್ನು ಆಲಿಕಲ್ಲು ಮಳೆಯಿಂದಾಗಿ ಭತ್ತ ವೆಲ್ಲಾ ಉದುರಿ ಹೋಗಿರುವುದರಿಂದ ಏನು ಉಳಿದಿಲ್ಲ. ಕಟಾವು ಮಾಡಬೇಕಾ ಅಥವಾ ಬೇಡ ಎನ್ನುವಂತೆ ರೈತರ ಪರಿಸ್ಥಿತಿಯಾಗಿದೆ. ಕಟಾವು ಮಾಡಿಸಿದರೆ ಪ್ರತಿ ಎಕರೆ ಗೆ ಸಾವಿರ ರೂಪಾಯಿ ವೆಚ್ಚ ಮಾಡಬೇಕಾದ ಸ್ಥಿತಿ ರೈತರಿಗೆ ಅನಿವಾರ್ಯವಾಗಿದೆ.
ಕೋಟಿ ಕೋಟಿ ನಷ್ಟ
ತಾಲೂಕಿನ ಕಾರಟಗಿ ಹೋಬಳಿಯಲ್ಲಿ 3,538 ಹೆಕ್ಟರ್ ಪ್ರದೇಶ ಅಂದರೆ 8,845ಎಕರೆ ಪ್ರದೇಶದಲ್ಲಿ ಹಾನಿಯಾಗಿದ್ದಾರೆ, ಸಿದ್ದಾಪುರ ಹೋಬಳಿಯಲ್ಲಿ 646.4 ಹೆಕ್ಟರ್ ಪ್ರದೇಶ ಅಂದರೆ 1,616 ಎಕರೆ ಪ್ರದೇಶದಲ್ಲಿ ಭತ್ತ ಸೇರಿ ಒಟ್ಟು ತಾಕಿನಾದ್ಯಾಂತ 10,461 ಎಕರೆ ಭತ್ತ ಹಾನಿಯಾಗಿದೆ. ಇದರಿಂದ ಸುಮಾರು 50 ರಿಂದ 60 ಕೋಟಿ ರೂಪಾಯಿ ನಷ್ಟವಾಗಲಿದೆ. ಇದರಿಂದ ರೈತರ ಕಣ್ಣೀರಲ್ಲಿ ಕೈತೋಳೆಯುವಂತಾಗಿದೆ
*ಸರಕಾರದಲ್ಲಿ ಮಂತ್ರಿಗಳಿಗೆ ಶೇ. 20 ರಷ್ಟು ಲಂಚ ಕೊಡಬೇಕಾಗಿದೆ. ಯಾವುದೇ ಇಲಾಖೆಯಾಗಲಿ ಅಲ್ಲಿ ಕೆಲಸ ಮಾಡಿ ಬಿಲ್ ಆಗುವಷ್ಟರಲ್ಲಿ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸೇರಿ ಶೇ. 60 ರಷ್ಟು ಲಂಚ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೆಸೂಗೂರು ಗಂಭೀರ ಆರೋಪ ಮಾಡಿದರು*
*ಆಲಿಕಲ್ಲು ಮಳೆಯಿಂದಾಗಿ ಭತ್ತದ ಕಾಳುಗಳೆಲ್ಲಾ ಉದುರಿ ಹೋಗಿದ್ದು, ಏನು ಉಳಿದಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಸರಕಾರ ಒಂದು ಕ್ಷಣ ತಡಮಾಡದೇ ರೈತರಿಗೆ ಪರಿಹಾರ ನೀಡಬೇಕು. ಹೇಮಲತಾ ನಾಯಕ, ಎಂಎಲ್ ಸಿ*
“ *ಆರು ತಿಂಗಳುಗಳ ಕಾಲ ರೈತರು ಕಷ್ಟಪಟ್ಟು ಬೆಳೆಸಿದ ಭತ್ತ ಇದೀಗ ಆಲಿಕಲ್ಲು ಮಳೆಯಿಂದಾಗಿ ಹಾಳಾಗಿದೆ. ಇದರಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ ಜತೆಗೆ ಮಾತನಾಡಿ ಸೂಕ್ತ ಪರಿಹಾರ ಒದಗಿಸಬೇಕು*
*ಬಸವರಾಜ ಕ್ಯಾವಟರ್, ಬಿಜೆಪಿರಾಜ್ಯ ಕಾರ್ಯಕಾರಿಣಿ ಸದಸ್ಯರು*
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನಾಡಿಗೆರ, ಹಿರಿಯ ಮುಖಂಡರು ಜಿ ತಿಮ್ಮನಗೌಡ, ಬಿಜೆಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಬಸವರಾಜ ಎತ್ತಿನಮನಿ, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ್, ಆನಂದ ಮ್ಯಾಗಡ ಮನಿ, ರೈತರು,ರಾಘಪ್ಪ, ಪಂಪಾಪತಿ ಮೇಟಿ, ಶ್ರೀಶೈಲ ಗೌಡ, ಅನುಮಾನ ಗೌಡ, ನಾಗಪ್ಪ ದೇವಿಪುರ, ಚಂದ್ರಶೇಖರ್ ದೇಸಾಯಿ,ರಾಮಕೃಷ್ಣ, ಬಾಬುರಾವ್, ಸುಬ್ಬರಾವ್, ಬಿ,ಸತ್ಯನಾರಾಯಣ, ನಾಗೇಶ್ ರಾವು, ಅಲ್ಲೂ ಸುರೇಂದ್ರ, ಸಾಯಿಬಾಬಾ, ಇನ್ನಿತರು ಇದ್ದರು.