ತೈಲ ಬೆಲೆ ಏರಿಕೆ;ರಾಜ್ಯ ಸರ್ಕಾರದ ವಿರುದ್ಧ ಸಂಡೂರಿನಲ್ಲಿ ಬಿಜೆಪಿ ಪ್ರತಿಭಟನೆ

Vijayanagara Vani
ತೈಲ ಬೆಲೆ ಏರಿಕೆ;ರಾಜ್ಯ ಸರ್ಕಾರದ ವಿರುದ್ಧ ಸಂಡೂರಿನಲ್ಲಿ ಬಿಜೆಪಿ ಪ್ರತಿಭಟನೆ
ಸಂಡೂರು:ಜು:21  ಕಾಂಗ್ರೇಸ್ ಸರ್ಕಾರ ತಮ್ಮ ಅಧಿಕಾರದ ಆಸೆಗಾಗಿ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ತಿಳಿಯದೆ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸುವುದಕ್ಕಾಗಿ ಬರಗಾಲದ ಈ ಸಂಕಷ್ಟ ಸಂದರ್ಭದಲ್ಲಿ ರಾಜ್ಯದ ಜನತೆಯ ಮೇಲೆ ಮುದ್ರಾಂಕ ಶುಲ್ಕ, ಆಸ್ತಿ ತೆರಿಗೆ, ಬಸ್ ದರ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದ್ದನ್ನು ತಕ್ಷಣ ಇಳಿಸುವ ಮೂಲಕ ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಒತ್ತಾಯಿಸಿದರು. 
ಅವರು ಇಂದು ಪಟ್ಟಣದಲ್ಲಿ ಕಾಂಗ್ರೇಸ್ ಸರ್ಕಾರದ ಬೆಲೆ ಏರಿಕೆಯ ನೀತಿಯ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿದರು ಈ ಸಂದರ್ಭದಲ್ಲಿ ಅವರು ಮಾತನಾಡಿ ಜನತೆ ಗ್ಯಾರಂಟಿಯ ಹೆಸರಿನಲ್ಲಿ ಸರ್ಕಾರ ಮೋಸ ಮಾಡುತ್ತಿದೆ, ಒಂದು ಕಡೆ ವಿಪರೀತ ಬೆಲೆ ಏರಿಕೆ, ಮತ್ತೊಂದು ಕಡೆ ಡಿಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟುತ್ತಿದ್ದು ಜನಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ, ರಾಜ್ಯದ ಬೊಕ್ಕಸ ಖಾಲಿಯಾಗಿದ್ದು ಅದನ್ನು ತುಂಬಿಸಲು ತೆರಿಗೆಗಳನ್ನು ಹೆಚ್ಚಿಸಿದ್ದು ಯಾವ ನ್ಯಾಯ ಸರ್ಕಾರದ ಈ ದ್ವಿಮುಖ ನೀತಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. 
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷರಾದ ನಾನಾ ಸಾಹೇಬ್ ನಿಕ್ಕಂ, ಜಿಲ್ಲಾ ಉಪಾಧ್ಯಕ್ಷ  ಜಿ ಟಿ ಪಂಪಾಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಡೆದ್ ಸುರೇಶ್, ಮುಖಂಡರಾದ ಕೆ ಎಸ್ ದಿವಾಕರ್, ಅಡಿವೆಪ್ಪ, ಆರ್ ಟಿ ರಘುನಾಥ್, ಪ್ರವೀಣ್ ಕುಮಾರ್, ಎರ್ರಿಸ್ವಾಮಿ ರೆಡ್ಡಿ, ವಿಜಯ್ ಕುಮಾರ್, ವಾಮಣ್ಣ, ಅಶೋಕ್ ಕುಮಾರ್, ವಿಶ್ವನಾಥ್ ರೆಡ್ಡಿ, ಕಿನ್ನೋರೆಶ್ವರ, ಬಸವರಾಜ್, ಶಂಕರ್, ಪುರುಷೋತ್ತಮ, ಕೆ ಹರೀಶ್, ನರಸಿಂಹ, ರಮೇಶ್, ರವಿಕಾಂತ್ ಬೋಶ್ಲೇ, ಎರ್ರೆಮ್ಮ, ದೀಪಾ ಘೋಡ್ಕೆ, ಗೀತಾ,ಮಲ್ಲಿಕಾರ್ಜುನ ಬಂಡ್ರಿ ಸೇರಿದಂತೆ ಹಲವು ಹಳ್ಳಿಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು
WhatsApp Group Join Now
Telegram Group Join Now
Share This Article
error: Content is protected !!