Ad image

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಿರುವ ಪುಸ್ತಕಗಳು ಮಾರಾಟ

Vijayanagara Vani
ಧಾರವಾಡ ಮಾ.28:* ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಿರುವ ಪುಸ್ತಕಗಳು ಮಾರಾಟಕ್ಕೆ ಲಭ್ಯ ಇವೆ.
ಡಾ. ಬಿ.ಆರ್.ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂಪುಟ-1 ರಿಂದ ಸಂಪುಟ-22 ರವರೆಗಿನ ಸಂಪುಟಗಳು, ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಅವರು ಪ್ರಕಟಿಸಿರುವ ತತ್ವಪದಗಳ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಿರುವ ಸಿದ್ದಾಂತ ಶಿಖಾಮಣಿ ಭಗವದ್ಗೀತಾ ಸಮನ್ವಯ, ಅ.ನ.ಕೃಷ್ಣರಾಯರ ಸಾಹಿತ್ಯ ಶ್ರೇಣಿ ಸಂಪುಟ-9 ರಿಂದ 13 ರವರೆಗೆ, ಡಾ.ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯ ಸಂಪುಟ-3 ರಿಂದ 8 ರವರೆಗೆ, ಕೋ. ಚೆನ್ನಬಸಪ್ಪ ಸಮಗ್ರ ಸಾಹಿತ್ಯ ಸಂಪುಟ-3 ರಿಂದ 6 ರವರೆಗೆ, ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಚಯ ಸಂಪುಟ-1 ರಿಂದ 3 ರವರೆಗೆ, ವಿ.ಜಿ.ಭಟ್ಟರ ಸಮಗ್ರ ಸಾಹಿತ್ಯ ಸಂಪುಟ-1 ರಿಂದ 3 ರವರೆಗಿನ ಪುಸ್ತಕಗಳು ಮಾರಾಟಕ್ಕೆ ಲಭ್ಯ ಇವೆ.
ಆಸಕ್ತರು, ಸಹಾಯಕ ನಿರ್ದೇಶಕರ ಕಚೇರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಾಲೇಜು ರಸ್ತೆ, ಧಾರವಾಡ ಇಲ್ಲಿ ಕಚೇರಿ ವೇಳೆಯಲ್ಲಿ ಪುಸ್ತಕಗಳನ್ನು ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0836-2442909 ಗೆ ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";