ಬಳ್ಳಾರಿ.ಜೂ.19: ಮಾನವ ತನ್ನ ದೈನಂದಿನ ಚಟುವಟಿಕೆಯಿಂದ ದೈಹಿಕ ಸಾಮಾರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾನೆ, ದೈಹಿಕ ಮತ್ತು ಮಾನಸಿಕ ರಿಲಾಕ್ಸ್ ಹೊಂದಲು ಈ ಬಾಕ್ಸ್ ಕ್ರಿಕೇಟ್ ಲೀಗ್ ಮ್ಯಾಚ್ ಗಳನ್ನು ಆರ್ಯ ವೈಶ್ಯ ಸಮುದಾಯದ ಯುವಕರಿಂದ ಜೂನ್ 21, 22 ಮತ್ತು 23ರ ಮೂರು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿಯನ್ನು ನಗರದ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಯುವ ಮುಖಂಡ ಮತ್ತು ಯುವ ಅಧ್ಯಕ್ಷ ವಿಶ್ವೇಸ್ ತಿಳಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಆರ್ಯ ವೈಶ್ಯ ಸಮುದಾಯದಲ್ಲಿ ಒಗ್ಗಟ್ಟು ಮತ್ತು ಪರಸ್ಪರ ಪರಿಚಯ ಮಾಡಿಕೊಳ್ಳುವ ಸಲುವಾಗಿ ಮತ್ತು ಅತ್ಯಂತ ಮುಖ್ಯವಾಗಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ನಮ್ಮ ಸಮುದಾಯದ ಯುವಕರು ತೊಡಗಿಕೊಳ್ಳುವ ಉದ್ಧೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಲಾಗಿದೆ, ಹತ್ತು ತಂಡಗಳು ಮತ್ತು ಒಂಬತ್ತು ಪ್ರಾಯೋಜಿಕ ತಂಡಗಳು ಭಾಗವಹಿಸಲಿದ್ದು ಇಲ್ಲಿ ಯಾವುದೆ ನಗದು ರೂಪದ ಪ್ರಶಸ್ತಿಯಿರುವುದಿಲ್ಲ, ಒಂದು ದೊಡ್ಡ ಅಂದರೆ, ನಾಲ್ಕು ವರೆ ಅಡಿಗಳ ಟ್ರೂಪಿಯನ್ನು ಮಾತ್ರ ನೀಡಲಾಗುವುದು ಎಂದರು.
ಈ ಪಂದ್ಯಾವಳಿಯನ್ನು ಜೂನ್ 21ರ ಸಂಜೆ 5.31 ಗಂಟೆಗೆ ನಗರ ಶಾಸಕ ಭರತ್ ರೆಡ್ಡಿ ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯ ಎಂ ಪ್ರಭಂಜನ್ ಕುಮಾರ್ ಭಾಗವಹಿಸಲಿದ್ದಾರೆ. ಜೂನ್ 23ರ ರಾತ್ರಿ 08.30 ಗಂಟೆಗೆ ಸಮಾರೋಪ ಕಾರ್ಯಕ್ರಮ ಜರುಗಲಿದ್ದು ಈ ಸಂದರ್ಭದಲ್ಲಿ ಗಾಲಿ ಲಕ್ಷ್ಮಿ ಅರುಣಾ ವಿಜೇತ ತಂಡಕ್ಕೆ ಟ್ರೂಫಿಯನ್ನು ವಿತರಿಸಲಿದ್ದಾರೆಂದರು.
ಈ ಸಂದರ್ಭದಲ್ಲಿ ಸಮುದಾಯದ ಯುವಕರಾದ ರಾಹುಲ್, ಡಾ.ರಾಮ್ ಕಿರಣ್, ಶ್ರೀಧರ್, ಸಂಕೇತ್, ವಿಷ್ಣು, ಬಾಲಾಜಿ, ಸೇರಿದಂತೆ ಇತರರಿದ್ದರು