ಮರಿಯಮ್ಮನಹಳ್ಳಿ:ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಿಡಮರಗಳನ್ನು ನೆಡುವುದರ ಮೂಲಕ ನಾವುಗಳು ಜಾಗತಿಕ ತಾಪಮಾನವನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ನಾವೆಲ್ಲರೂ ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ನಮ್ಮ ದೇಶವನ್ನು ಹಸೀರೀಕರಣ ಮಾಡಲು ನಮ್ಮ ಅಳಿಲು ಸೇವೆ ಸಲ್ಲಿಸೋಣ ಹಾಗೂ ಮಾನವನ ಉಳುವಿಗಾಗಿ ಪ್ರಕೃತಿ ಸಂರಕ್ಷಣೆ ಅವಶ್ಯಕವಾಗಿದೆ ಎಂದು ಪ್ರಿಯದರ್ಶಿನಿ ಸ್ವ.ಪ.ಪೂ.ಕಾಲೇಜಿನ ಪ್ರಾಚಾರ್ಯ ಎಂ ಅಶೋಕ ಅಭಿಪ್ರಾಯಪಟ್ಟರು.
ಅವರು ಮರಿಯಮ್ಮನಹಳ್ಳಿಯ ಪ್ರಿಯದರ್ಶಿನಿ ಸ್ವತಂತ್ರ ಪ.ಪೂ.ಕಾಲೇಜಿನ ಎನ್ಎಸ್ಎಸ್ ಘಟಕದವತಿಯಿಂದ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಂತರ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ರಾಮಚಂದ್ರ.ಪಿ ಮಾತನಾಡಿ, ನಾವುಗಳು ಕೇವಲ ದಿನಾಚರಣೆಗಳಂದು ಗಿಡಮರಗಳ ಸಂರಕ್ಷಣೆ ಕುರಿತು ಯೋಚಿಸದೇ ನಿರಂತರವಾಗಿ ಮರಗಳ ಸಂರಕ್ಷಣೆ ಮಾಡಬೇಕಿದೆ. ಅಲ್ಲದೇ ಜನ್ಮದಿನಗಳಂದು ಕೇಕ್ ಕತ್ತರಿಸುವ ಬದಲಾಗಿ ಒಂದು ಸಸಿನೆಡುವ ಅಭ್ಯಾಸ ಮಾಡಿಕೊಂಡರೆ ನಮ್ಮ ದೇಶ ಹಸೀರೀಕರಣವಾಗುವಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸ್ನೇಹ ಸಂಸ್ಥೆಯ ಸಿಬ್ಬಂದಿಗಳಾದ ಪಾರ್ವತಿ, ಮಂಜುಳ, ಪ್ರಿಯದರ್ಶಿನಿ ಪದವಿ ಕಾಲೇಜಿನ ಪ್ರಾಚಾರ್ಯ ಪಕ್ಕೀರಪ್ಪ, ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.