ಎಕ್ಸಿಟ್ ಪೋಲ್ನ್ನೇ ಎಕ್ಸಾಟ್ ಪೋಲ್ ಎಂದು ಸಂಭ್ರಮದಲ್ಲಿ ನಿರತಾವಗಿದ್ದ ಬಿಜೆಪಿ ಪಕ್ಷಕ್ಕೆ ಬಿಗ್ ಶಾಕ್ ಕಾದಿದೆ. 300 ನಂಬರ್ ರೀಚ್ ಆಗುವ ಕನಸು ನನಸಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಹೀಗಾಗಿ ಈ ಬಾರಿ ಬಿಜೆಪಿ ಕೇಂದ್ರದಲ್ಲಿ ಸ್ವಂತ ಬಲದಲ್ಲಿ ಸರ್ಕಾರ ನಡೆಸುವುದು ದುಸ್ತರವಾಗಲಿದೆ.
ಕೇಂದ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ರಚನೆ ಆಗುತ್ತದೆ ಎಂದು ಕನಸು ಕಾಣುತ್ತಿದ್ದ ಬಿಜೆಪಿಗೆ ಆಘಾತವಾಗಿದೆ. ಬಿಜೆಪಿ ಒಂದೇ ಮ್ಯಾಜಿಕ್ ನಂಬರ್ ದಾಟುತ್ತದೆ ಎಂದು ನಂಬಿಕೆ ಇಟ್ಟುಕೊಂಡಿತ್ತು. ಆದರೆ ಅದರ ಆಸೆ ಕಮರಿದೆ. ಈಗ ಎನ್ಡಿಎ ಮೈತ್ರಿಕೂಟಗಳೊಂದಿಗೆ ಸರ್ಕಾರ ರಚಿಸಬಹುದು. ಆದರೆ ಈ ಚಾನ್ಸ್ ಗಳಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ.
ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಎಂಬ ಹಣೆ ಪಟ್ಟಿಯನ್ನು ಹೊತ್ತಿದೆ. ಆದರೆ ಬಿಜೆಪಿ ಒಂದೇ ಸರ್ಕಾರ ರಚನೆ ಮಾಡುವಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಬಿಜೆಪಿ ತನ್ನ ಮೈತ್ರಿ ಪಕ್ಷಗಳನ್ನು ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವ ಸಾಧ್ಯತೆ ಇದೆ. ಇನ್ನು ಕಳೆದ ಹತ್ತು ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ಶತಾಯಗತಾಯ ಗದ್ದುಗೆ ಏರಲು ಪ್ಲ್ಯಾನ್ ಮಾಡಿಕೊಂಡಿದೆ. ಇದಕ್ಕಾಗಿ ಭರ್ಜರಿ ಪ್ಲ್ಯಾನ್ ಮಾಡಿಕೊಳ್ಳಲಿದೆ. ಚಂದ್ರ ಬಾಬು, ನಿತೀಶ್ ಕಿಂಗ್ ಮೇಕರ್ಸ್ ಚುನಾವಣೆ ಆರಂಭಕ್ಕೂ ಮುನ್ನ ನಡೆದ ಮೈತ್ರಿಯಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈಗಾಗಲೇ ಆಂಧ್ರದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಇದರ ಬೆನ್ನಲ್ಲೆ INDIA ಮೈತ್ರಿ ಕೂಟದಿಂದಲೂ ಚಂದ್ರ ಬಾಬು ಅವರನ್ನು ಸಂಪರ್ಕಿಸಲಾಗಿದೆ. ಅಲ್ಲದೆ ನಿತೀಶ್ ಕುಮಾರ್ ಅವರಿಗೆ ಗಾಳ ಹಾಕಲು INDIA ಮೈತ್ರಿ ಕೂಟ ಪ್ಲ್ಯಾನ್ ಮಾಡಿಕೊಂಡಿದೆ.
ಟಿಡಿಪಿ, ಜೆಡಿಯು ನಿರ್ಣಾಯಕ ಏಕೆ? ಬಿಜೆಪಿ 2014, 2019ರಲ್ಲಿ ಮ್ಯಾಜಿಕ್ ನಂಬರ್ ಕ್ರಾಸ್ ಮಾಡಿತ್ತು. ಆದರೆ ಈಗ ಬಿಜೆಪಿ 241 ಸ್ಥಾನಗಳಲ್ಲಿ ಬಂದು ನಿಂತಿದೆ. ಅಲ್ಲದೆ ಕಾಂಗ್ರೆಸ್ ಮೂರಂಕಿ ಆಸು ಪಾಸಿನಲ್ಲಿದೆ. ಎನ್ಡಿಎ ಮೈತ್ರಿ ಕೂಟ 293 ಸ್ಥಾನಗಳನ್ನು ಗೆದ್ದು ಸುಲಭವಾಗಿ ಸರ್ಕಾರ ರಚಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಆದರೆ ಈ ಆಸೆಗೆ ಕಾಂಗ್ರೆಸ್ ಪೆಟ್ಟು ನೀಡಲು ಸಿದ್ಧತೆ ನಡೆಸಿದೆ.
ಸದ್ಯದ ಲೆಕ್ಕಾಚಾರದಲ್ಲಿ ಟಿಡಿಪಿ 16 ಸ್ಥಾನ, ಜೆಡಿಯು 14 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಸನಿಹದಲ್ಲಿವೆ. ಈ ಎರಡೂ ನಂಬರ್ ಕೂಡಿಸಿದರೆ 30 ಆಗುತ್ತದೆ. 293ರಲ್ಲಿ 30 ಸ್ಥಾನವನ್ನು ಎನ್ಡಿಎ ಮೈತ್ರಿ ಕೂಟ ಕಳೆದುಕೊಂಡಲ್ಲಿ 263 ಸ್ಥಾನಗಳಿಗೆ ಬಂದು ನಿಲ್ಲುತ್ತದೆ. ಇನ್ನು INDIA ಮೈತ್ರಿ ಕೂಟ ಸದ್ಯ 234 ಸ್ಥಾನಗಳನ್ನು ಗೆದ್ದಿದೆ. ತಮ್ಮ ಸ್ಥಾನಗಳು ಹಾಗೂ ಟಿಡಿಪಿ ಹಾಗೂ ಜೆಡಿಯು ಸಂಖ್ಯೆಯನ್ನು ಸೇರಿಸಿದಾಗ 264 ಆಗುತ್ತದೆ. ಇನ್ನು ಪಕ್ಷೇತರ 17 ಜನರಿದ್ದಾರೆ. ಇವರನ್ನೆಲ್ಲಾ ಸೇರಿಸಿಕೊಂಡು INDIA ಮೈತ್ರಿ ಕೂಟ ಸರ್ಕಾರ ರಚಿಸುವ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈಗ ಟಿಡಿಪಿ ಹಾಗೂ ಜೆಡಿಯು ನಡೆಯವ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.