ಕೇಂದ್ರಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕುಘಟಕ ಹಾಸನ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ, ಏಕಲವ್ಯ ರೂವರ್ ಮುಕ್ತದಳ ಹಾಸನ ವತಿಯಿಂದ ವಿಶ್ವ ಭೂದಿನಾಚರಣೆ

Vijayanagara Vani
ಕೇಂದ್ರಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕುಘಟಕ ಹಾಸನ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ, ಏಕಲವ್ಯ ರೂವರ್  ಮುಕ್ತದಳ ಹಾಸನ ವತಿಯಿಂದ ವಿಶ್ವ ಭೂದಿನಾಚರಣೆ

ಭೂಮಿಯ ಸಂರಕ್ಷಣೆ ಜಗತ್ತಿನಅತಿತುರ್ತಾಗಿದೆ : ಸಾಹಿತಿಕೊಟ್ರೇಶ್‌ಎಸ್.ಉಪ್ಪಾರ್

ಹಾಸನ :ಅರಣ್ಯ ನಾಶ, ಪರಿಸರ ಮಾಲಿನ್ಯ, ಹವಾಮಾನ ಏರಿಕೆ, ಪ್ರಕೃತಿ ವಿಕೋಪಗಳಂತಹ ಬಹುದೊಡ್ಡ ಸಮಸ್ಯೆಗಳು ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿರುವ ಸಂದರ್ಭದಲ್ಲಿ ವಿಶ್ವ ಭೂ ದಿನಾಚರಣೆ ಬಹಳ ಮಹತ್ವದ್ದಾಗಿದೆ. ಭೂಮಿಯ ಸಂರಕ್ಷಣೆ ಜಗತ್ತಿನ ಅತಿತುರ್ತಾಗಿದೆಎಂದು ಸಾಹಿತಿ ಹಾಗೂ  ಕೇಂದ್ರಕನ್ನಡ ಸಾಹಿತ್ಯ  ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್‌ಎಸ್.ಉಪ್ಪಾರ್‌ ಅಭಿಪ್ರಾಯಪಟ್ಟರು.

ಅವರು ಕೇಂದ್ರಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ಹಾಸನ ತಾಲ್ಲೂಕುಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಹಾಗೂ ಏಕಲವ್ಯ ರೋವರ್ ಮುಕ್ತದಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭೂ ದಿನಾಚರಣೆ ಯಲ್ಲಿಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿಪ್ರಕೃತಿ ಮಾನವನ ಅವಶ್ಯಕತೆಗಳನ್ನು ಈಡೇರಿಸುತ್ತದೆಯೇ ಹೊರತು ದುರಾಸೆಗಳನ್ನಲ್ಲ. ಭೂಮಿಯ ಮೇಲಿನ ಸಕಲ ಜೀವಜಂತುಗಳು ಉತ್ತಮರೀತಿಯಲ್ಲಿ ಬದುಕಬೇಕಾದರೆ ಇಲ್ಲಿನ ಪ್ರಕೃತಿ ಬಹಳ ಮುಖ್ಯ. ಪ್ರಕೃತಿಯನ್ನು ಉಳಿಸಿ, ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯ.ಭೂಮಿಯನ್ನು ಸಾಧ್ಯವಾದಷ್ಟು ಹಸಿರಾಗಿಟ್ಟರೆ ಅಂದರೆ ಹೆತೇಚ್ಚವಾಗಿ  ಗಿಡಮರಗಳನ್ನು ಬೆಳೆಸಿದರೆ ಮಾತ್ರ ಸಮೃದ್ಧಿಯ ಬದುಕು ಸಾಧ್ಯ. ವಿಶ್ವ ಭೂದಿನ ಕೇವಲ ಏಪ್ರಿಲ್ ಮಾಹೆಗಷ್ಟೇ ಸೀಮಿತಗೊಳ್ಳದೇ ವರ್ಷವಿಡೀಜಾಗೃತಿಯನ್ನು ಮೂಡಿಸುವಂತಾಗಬೇಕು.ಈ ಮೂಲಕ ಜಗತ್ತನ್ನುಉತ್ತಮೀಕರಿಸಲುಒಂದು ಅವಕಾಶ ದೊರಕಿದಂತಾಗುತ್ತದೆ.ಪ್ರತಿಯೊಬ್ಬ ವ್ಯಕ್ತಿಯೂ ಸಹ ಪ್ರಕೃತಿಯ ಉಳಿವಿಗಾಗಿ ಕಾರ್ಯೋನ್ಮುಖರಾಗಬೇಕಿದೆ.ಭೂಮಾಲಿನ್ಯವನ್ನು ನಿಯಂತ್ರಣಗೊಳಿಸಬೇಕಿದೆ.ಭೂಮಿತಾಯಿಗೆ ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸುವ ಮೂಲಕ ಹಸಿರುಡುಗೆಯನ್ನು ತೊಡಿಸಬೇಕಿದೆಎಂದರು.

ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ  ಮತ್ತು ಮುಖ್ಯಆಯುಕ್ತಡಾ|| ವೈ.ಎಸ್.ವೀರಭದ್ರಪ್ಪ ಮಾತನಾಡಿ ಪರಿಸರ ವ್ಯವಸ್ಥೆಗಳು ನಮಗೆ ಶುದ್ಧ ಗಾಳಿ, ನೀರು, ಮತ್ತು ವೈವಿದ್ಯಮಯಸಸ್ಯ ಹಾಗೂ ಪ್ರಾಣಿಗಳ ಜೀವನಗಳನ್ನು ವ್ಯವಸ್ಥಿತ      ರೂಪದಲ್ಲಿಕೊಂಡೊಯ್ಯುತ್ತದೆ. ನಮ್ಮಂತೆ ಭೂಮಿಯ ಆರೋಗ್ಯವೂ ಸಹ ಬಹಳ ಮುಖ್ಯ.ನಾವು ಅನಾರೋಗ್ಯಕ್ಕೆ    ತುತ್ತಾದಾಗ ಹೇಗೆ ಆಸ್ತೆçಗೆ ತೆರಳಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಗುಣವಾಗುತ್ತೇವೋ ಹಾಗೆಯೇ ಭೂಮಿಗೆಆದ ಮಾಲಿನ್ಯ, ಗಣಿಗಾರಿಕೆ, ಮರುಭೂಮಿಕರಣ, ಅರಣ್ಯ ನಾಶ ಹೀಗೆ ಅನೇಕ ಸಮಸ್ಯೆಗಳಿಂದ  ಭೂ ತಾಯಿಯನ್ನು ನಾವು ನೀವೆಲ್ಲಾ  ಸಂರಕ್ಷಿಸಬೇಕಿದೆ ಎಂದರು.

ಏಕಲವ್ಯರೋರ‍್ಸ್ ಮುಕ್ತದಳದ ನಾಯಕಆರ್.ಜಿ.ಗಿರೀಶ್‌ಯುವಜನರು ಪರಿಸರ ಕಾಳಜಿ ಹೊಂದಲು ವಿಶ್ವ ಭೂ ದಿನ ಒಂದುಉತ್ತಮಅವಕಾಶವಿದೆ.ನಮ್ಮ ಭವಿಷ್ಯವನ್ನು ನಾವು ಸುಂದರವಾಗಿಟ್ಟುಕೊಳ್ಳಬೇಕಾದರೆ ಪ್ರಕೃತಿಯ ಸೊಬಗನ್ನು ವೃದ್ಧಿಸಿಕೊಳ್ಳಬೇಕಿದೆ ಎಂದರು.ಕಾರ್ಯಕ್ರಮದಲ್ಲಿಕೇAದ್ರಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷಕೊಟ್ರೇಶ್‌ಎಸ್.ಉಪ್ಪಾರ್, ಕೇಂದ್ರ ಸಮಿತಿಯಜಂಟಿ ಕಾರ್ಯದರ್ಶಿ ನಾಗರಾಜ್‌ದೊಡ್ಡಮನಿ, ಜಿಲ್ಲಾ ಮುಖ್ಯಆಯುಕ್ತಡಾ|| ವೈ.ಎಸ್.ವೀರಭದ್ರಪ್ಪ, ಕೋಶಾಧ್ಯಕ್ಷಎಚ್.ಎಸ್.ಬಸವರಾಜ್, ಏಕಲವ್ಯರೋರ‍್ಸ್ ಮುಕ್ತದಳದ ನಾಯಕಆರ್.ಜಿ.ಗಿರೀಶ್,ತಾಲ್ಲೂಕುಅಧ್ಯಕ್ಷೆ ಕೆ.ಸಿ.ಗೀತಾ, ಮಹಿಳಾ ಕಾರ್ಯದರ್ಶಿ ಪದ್ಮಾವತಿ ವೆಂಕಟೇಶ್, ಸಮಾಜ ಸೇವಕಿ ಭಾನುಮತಿ, ಕವಯಿತ್ರಿಗಿರಿಜಾ ನಿರ್ವಾಣಿ, ಪೋಷಕ ರಾಮಭದ್ರಯ್ಯ, ಎ.ಎಸ್.ಒ.ಸಿ. ಪ್ರಿಯಾಂಕ ಎಚ್.ಎಂ.ಸೇರಿದAತೆ ಶಿಬಿರಾರ್ಥಿಗಳು ಹಾಜರಿದ್ದರು.

 

 

WhatsApp Group Join Now
Telegram Group Join Now
Share This Article
error: Content is protected !!