ಹರಪನಹಳ್ಳಿ :- ಇಂದಿನ ಬದುಕಿಗೆ ಶರಣ ಸಂಸ್ಕçತಿ ಅತ್ಯಗತ್ಯವಾಗಿದ್ದು, ಮುಂದಿನ ಪೀಳಿಗೆಯ ಸುಖ ಜೀವನಕ್ಕೆ ದಾರಿದೀಪವಾಗಿದೆ ಎಂದು ಹಡಗಲಿ ಗವಿಮಠದ ಹಿರಿ ಶಾಂತವೀರ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಕಾಶಿಮಠ ಬಡಾವಣೆಯ, ಕಾಶಿಮಠದಲ್ಲಿ ಗುರುವಾರ ತಾಲೂಕು ಶರಣ ಸಾಹಿತ್ಯ ಪರಿಷತ್ ಘಟಕದ ವತಿಯಿಂದ, ಶ್ರೀಮತಿ ನಿಂಗಮ್ಮ ಹಾಗೂ ಜಿ.ನಾಗನಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನ ಎಲ್ಲೆಡೆ ಶರಣರ ಸಾಹಿತ್ಯಗಳನ್ನು ಪಸರಿಸುವ ಮೂಲಕ, ಇಂದಿನ ಒತ್ತಡದ ಬದುಕಿನ ತೊಳಲಾಟದಲ್ಲಿ ತಲ್ಲೀನರಾಗಿರುವ ಮುನುಷ್ಯನನ್ನು ಸಾಹಿತ್ಯದ ಕಡೆಗೆ ಚಿತ್ತ ಹರಿಸುವಂತೆ ಮಾಡಬೇಕಿದೆ, ಶರಣರ ವಚನಗಳು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿ ಕಾಯಕ ಸಂಸ್ಕೃತಿಯನ್ನು ಪ್ರಸಾರ ಮಾಡಬೇಕಾದರೆ ದತ್ತಿ ಉಪನ್ಯಾಸಗಳಲ್ಲಿ ಭಾಗಿಯಾಗಬೇಕು ಎಂದರು.
ಮೈಸೂರಿನ ನಿವೃತ್ತ ಶಿಕ್ಷಣಾಧಿಕಾರಿ ಭರಮಪ್ಪ ಮಾತನಾಡಿ :- “೧೨ನೇ ಶತಮಾನದ ಆರಂಭದಲ್ಲಿ ಶರಣ ಚಳುವಳಿಯು ಸರ್ವ ಜನಾಂಗದ ಅಭ್ಯುದಯಕ್ಕೆ ಕಾರಣವಾಗಿ ಅನುಭವಮಂಟವನ್ನು ತೆರೆದ ಕೀರ್ತಿ ಹಾಗೂ ವಿಶ್ವಕ್ಕೆ ಮೊದಲ ಸಂಸತ್ತು ನೀಡಿದ ಗೌರವಕ್ಕೆ ಪಾತ್ರವಾಗಿದ್ದು, ಸರ್ವ ಜನಾಂಗದ ಸಂಸ್ಕೃತಿಯ ತೊಟ್ಟಿಲಾಗಿ ಭವಿಷ್ಯದಲ್ಲಿ ದೇಶವು ಜಗತ್ತನ್ನು ಮುನ್ನಡೆಸುವ ದಿಕ್ಸೂಚಿಯಾಗಲಿದೆ, ಮಾನವರ ಅಭಿವೃದ್ದಿಗೆ ದೂರ ದೃಷ್ಠಿ ಹೊಂದಿದ ಶರಣರ ಸಂಸ್ಕೃತಿಯು ಇಂದಿನ ಯುವ ಪೀಳಿಗೆಗೆ ಅತ್ಯಗತ್ಯವಾಗಿದೆ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಣಕಾರ ರಾಜಶೇಖರ್ ಮಾತನಾಡಿ, ಶರಣ ಸಾಹಿತ್ಯ ಪ್ರಕಾರವೂ ವಿಶ್ವದ ಶ್ರೇಷ್ಠ ರಚನೆಯಾಗಿದ್ದು, ದೇಶದಲ್ಲಿ ಶೇಕಡವಾರು ೧% ನಷ್ಟು ಮಾತ್ರ ಬಳಕೆಯಾಗಿದ್ದು, ಉಳಿದ ಸಾಹಿತ್ಯವು ದಾಳಿಗೆ ತುತ್ತಾಗಿ ನಾಶವಾಗಿವೆ. ಪ್ರಸ್ತುತ ಉಳಿದಿರುವ ಸಾಹಿತ್ಯದ ಸಂದೇಶವನ್ನು ಅನುಸರಿಸಿದರೆ, ನಮ್ಮ ಜೀವನ ಪಾವನವಾಗುತ್ತದೆ, ಕರ್ನಾಟಕ ಸಾಂಸ್ಕೃತಿಕ ನಾಯಕನೆಂದು ಬಸವಣ್ಣನವರನ್ನು ಕೇವಲ ಬಣ್ಣಿಸಿದರಷ್ಠೇ ಸಾಲದು, ಶರಣ ಸಂದೇಶವನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯವಾಗಬೇಕಿದೆ ಎಂದರು.
ಈ ವೇಳೆ ಮೈಸೂರಿನ ನಿವೃತ್ತ ಶಿಕ್ಷಣಾಧಿಕಾರಿ ಭರಮಪ್ಪ, ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಣಕಾರ ರಾಜಶೇಖರ್, ಆರುಂಡಿ ನಾಗರಾಜ ವಕೀಲರು, ಷಣ್ಮುಖಪ್ಪ ಪೂಜಾರ್, ಕೆ.ಎಸ್.ವೀರಭದ್ರಪ್ಪ, ಎಸ್.ಹೆಚ್.ವಿಠೋಬಾ, ಕೆ.ಹನುಮಂತಪ್ಪ, ಪಿ ರಾಮನಮಲಿ ಸಾಹಿತಿಗಳು, ಸಿ.ಸಿದ್ದಪ ಕೆ.ವಿಜಯಕುಮಾರ್, ಪುಷ್ಪಾ ದಿವಾಕರ್, ಹಾಗು ಶರಣ ಸಾಹಿತ್ಯ ಪರಿಷತ್ ಪದಾದಿಕಾರಿಗಳು ಹಾಗೂ ಇತರರಿದ್ದರು.
–