ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ತನಿಖೆ ಚುರುಕು

Vijayanagara Vani
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ತನಿಖೆ ಚುರುಕು

 ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳ ಹಾಗೂ ಶವ ಸಾಗಿಸಿದ ವಾಹನ ಇನ್ನಿತರೆ ಕಡೆಗಳಿಂದ ಸಂಗ್ರಹಿಸಲಾಗಿದ್ದ ಬೆರಳಚ್ಚುಗಳಲ್ಲಿ ಬಂಧಿತ ಆರೋಪಿಗಳ ಪೈಕಿ 10ಕ್ಕೂ ಹೆಚ್ಚು ಆರೋಪಿಗಳ ಬೆರಳಚ್ಚುಗಳು ಹೊಂದಾಣಿಕೆಯಾಗಿವೆ, ಬೆರಳಚ್ಚುಗಳು ಹೊಂದಾಣಿಕೆಯಾಗಿರುವ ಆರೋಪಿಗಳ ಪಟ್ಟಿಯಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದ್ದಾರೆ,ಕೊಲೆ ನಡೆದ ಸ್ಥಳದಲ್ಲಿ ಸಂಗ್ರಹಿಸಲಾಗಿದ್ದ ಬೆರಳಚ್ಚು ಮಾದರಿಗಳಿಗೆ ಇವರ ಫಿಂಗರ್ ಪ್ರಿಂಟ್‌ಗಳು ಹೊಂದಾಣಿಕೆಯಾಗಿವೆ.ಹಲ್ಲೆ ಮಾಡಿದ ಜಾಗಗಳು, ಕೊಲೆ ನಡೆದ ಸ್ಥಳ, ಶವ ಸಾಗಿಸಿದ್ದ ವಾಹನ, ಶವ ಬಿಸಾಡಿದ್ದ ಜಾಗ, ಶವ ಸಾಗಾಟ ಮಾಡಿದ ವಾಹನ, ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿ, ಮೃತನ ಬಟ್ಟೆಗಳು, ಹಲ್ಲೆ ಮಾಡಲು ಬಳಸಿದ ವಸ್ತುಗಳು, ಸಾಗಾಟ ಮಾಡಿದ ಕಾರ್, ಆರೋಪಿಗಳ ಬಟ್ಟೆಗಳ ಮೇಲಿನ
ಬೆರಳಚ್ಚು ಸಂಗ್ರಹ ಮಾಡಲಾಗಿತ್ತು. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತರಲಾಗಿದ್ದ ವಾಹನ, ಆರೋಪಿಗಳ ಮನೆಗಳು ಇನ್ನಿತರೆ ಕಡೆಗಳಲ್ಲಿನ
ಬೆರಳಚ್ಚುಗಳನ್ನು ತಜ್ಞರ ತಂಡ ಸಂಗ್ರಹಿಸಿತ್ತು. ಮಾದರಿಗಳನ್ನು ಆರೋಪಿಗಳ ಬೆರಳಚ್ಚು ಮಾದರಿಗಳೊಟ್ಟಿಗೆ ಸೇರಿಸಿ ಬೆಂಗಳೂರು ಮತ್ತು ಹೈದರಾಬಾದ್ ಎಫ್‌ಎಸ್‌ಎಲ್ ಕೇಂದ್ರಗಳಿಗೆ ಕಳಿಸಲಾಗಿತ್ತು. ಎರಡೂ ಕೇಂದ್ರದಿಂದ ವರದಿ ಬಂದಿದ್ದು,
ಎರಡೂ ವರದಿಗಳು ಬಹುತೇಕ ಒಂದೇಹೆಚ್ಚುರೀತಿಯಲ್ಲಿದ್ದು, ಹತ್ತಕ್ಕೂ ಆರೋಪಿಗಳ ಬೆರಳಚ್ಚುಗಳು, ಅಪರಾಧ ನಡೆದ ಸ್ಥಳದಲ್ಲಿ ಸಂಗ್ರಹಿಸಿದ ಬೆರಳಚ್ಚುಮಾದರಿಗೆ ಹೊಂದಾಣಿಕೆಯಾಗಿವೆ. ಕೊಲೆ ನಡೆದ ಸ್ಥಳ ಹಾಗೂ ಶವ ಸಾಗಿಸಿದ ಜಾಗಗಳಿಂದ ಜೈವಿಕ ಸಾಕ್ಷಿಗಳಾದ ರಕ್ತದ ಕಲೆ, ಹೇರ್ ಸ್ಯಾಂಪಲ್ ಡಿಎನ್ಎ ಮಾದರಿಗಳನ್ನು ಸಹಸಂಗ್ರಹಿಸಲಾಗಿದೆ. ಆರೋಪಿಗಳ ಕೂದಲು ಇನ್ನಿತರೆಮಾದರಿಗಳನ್ನು ಸಹ ಸಂಗ್ರಹಿಸಿ ತಪಾಸಣೆಗೆ ಕಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸದಂತೆ ಹಲವು ಜೈವಿಕ ಹಾಗೂ ಭೌತಿಕ ಸಾಕ್ಷ್ಯ ಹಾಗೂ ಮಾದರಿಗಳನ್ನು ಪೊಲೀಸರು ಸಂಗ್ರಹಿಸಿ ಅವುಗಳ ಎಫ್‌ಎಸ್‌ಎಲ್ ವರದಿಗೆ ರವಾನಿಸಿದ್ದಾರೆ. ಕೆಲವು ವರದಿಗಳು ಈಗಾಗಲೇ ಬಂದಿದ್ದರೆ ಕೆಲವು ವರದಿಗಳು ಇನ್ನಷ್ಟೆ ಬರಬೇಕಿದೆ. ಡಿಜಿಟಲ್ ಸಾಕ್ಷ್ಯ ಪತ್ತೆ ಮಾಡಲು ಸಹ ಪೊಲೀಸರು ಹಲವು ಪ್ರಯತ್ನ ಮಾಡುತ್ತಿದ್ದು ಆರೋಪಿಗಳ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಸಿಸಿಟಿವಿ ಡಿವಿಆರ್‌ಗಳನ್ನು ಹೈದರಾಬಾದ್ ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ. ಆರೋಪಿಗಳು, ಕೊಲೆ ಪ್ರಕರಣದ ಬಳಿಕ ಮೊಬೈಲ್ ನಲ್ಲಿನ ಎಲ್ಲ ಡಾಟಾ ವನ್ನು ಎಲ್ಲ ಮಾಹಿತಿಯನ್ನು ಅಳಿಸಿ ಹಾಕಿದ್ದರು. ಹಾಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಮೊಬೈಲ್ ಡಾಟಾ ರಿಟೀವ್ ಮಾಡಲಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 17 ಮಂದಿ ಆರೋಪಿಗಳಿದ್ದಾರೆ. ಪೊಲೀಸರು
ಈಹೇಳಿರುವಂತೆ ಒಬ್ಬೊಬ್ಬರು ಒಂದೊಂದು ರೀತಿ ಕೊಲೆ ಹಾಗೂ ಅಪಹರಣದಲ್ಲಿ ಭಾಗೀದಾರರಾಗಿದ್ದಾರೆ. ಆದರೆ ಪ್ರಕರಣದಲ್ಲಿ ಮೊದಲು ಬಂಧಿತರಾದ ಆರೋಪಿಗಳೇ ಈಗ ಸಾಕ್ಷಿಗಳಾಗಿದ್ದು, ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ್ದಾರೆ. ದರ್ಶನ್ ಮತ್ತು ಗ್ಯಾಂಗ್ ಯಾರನ್ನು ಸಾಕ್ಷ್ಯ ನಾಶ ಮಾಡಲೆಂದು ಕರೆಸಿದ್ದರೋ ಅವರೇ ಈಗ ಸಾಕ್ಷಿಗಳಾಗಿದ್ದಾರೆ. ರೇಣುಕಾ ಸ್ವಾಮಿ ಶವಕ್ಕೆ ಮುಕ್ತಿ ನೀಡಲು ಮುಂದಾಗಿದ್ದವರೇ ಈಗ ಪ್ರಕರಣಕ್ಕೆ ಮುಕ್ತಿ ನೀಡುವ ಪ್ರಮುಖ ಸಾಕ್ಷಿಗಳಾಗಿ ಬದಲಾಗಿದ್ದಾರೆ. ಪಟ್ಟಣಗೆರೆ ಶೆಡ್‌ನಲ್ಲಿ ಸ್ವಾಮಿಯ ಕೊಲೆಯಾದ ಬಳಿಕ ಶವವನ್ನು ಎಸೆಯಲು ಮೂವರನ್ನು ನಿಗದಿಪಡಿಸಲಾಗಿತ್ತು.ತಲಾ 5 ಲಕ್ಷ ರೂ ಅವರಿಗೆ ನೀಡಿ ಶವವನ್ನು ಸಾಗಿಸಿ ದೂರ ಎಸೆಯುವುದು ಮಾತ್ರವೇ ಅಲ್ಲದೆ ಒಂದೊಮ್ಮೆ ಪೊಲೀಸರಿಗೆ ಶವ ದೊರೆತರೆ ತಾವೇ ಹೋಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳಬೇಕು ಎಂದು ನಿಗದಿಯಾಗಿತ್ತು.

WhatsApp Group Join Now
Telegram Group Join Now
Share This Article
error: Content is protected !!