ಬಳ್ಳಾರಿ: ಬೇರು ಭೂಮಿ ತಂಡದ ವತಿಯಿಂದ ಮತ್ತು ಆದ್ಯ ಟ್ರಸ್ಟ್ ಸಹಯೋಗದೊಂದಿಗೆ ಕುಡುತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.ಊರಿನ ಸ್ವಚ್ಛತೆ ಪರಿಸರದ ಆರೋಗ್ಯ ಮತ್ತು ಸಾರ್ವಜನಿಕರ ಸುಖಸಮೃದ್ಧಿಗಾಗಿ ದಿನನಿತ್ಯವೂ ದುಡಿಯುತ್ತಿರುವ ಪೌರ ಕಾರ್ಮಿಕರ ಪರಿಶ್ರಮವನ್ನು ಗುರುತಿಸುವ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತುಈ ಸಂದರ್ಭದಲ್ಲಿ ಒಟ್ಟು 50 ಪೌರ ಕಾರ್ಮಿಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು ನೆನಪಿನ ಕಾಣಿಕೆಯಾಗಿ ಪ್ರತಿಯೊಬ್ಬರಿಗೆ ಅವರ ವೈಯಕ್ತಿಕ ಫೋಟೋ ಹಾಗೂ ಹಣ್ಣು ನೀಡಿ ಗೌರವಿಸಲಾಯಿತುಕಾರ್ಯಕ್ರಮದಲ್ಲಿ ಮಾತನಾಡಿದ ಆಯೋಜಕರು
ಪೌರ ಕಾರ್ಮಿಕರು ನಮ್ಮ ನಿಜವಾದ ಹೀರೋಗಳು ಅವರ ಶ್ರಮವಿಲ್ಲದೆ ಸ್ವಚ್ಛ ನಗರ ಆರೋಗ್ಯಕರ ಪರಿಸರ ಸಾಧ್ಯವಿಲ್ಲ ಅವರ ಸೇವಾಭಾವ ಸಮಾಜಕ್ಕೆ ಮಾದರಿಯಾಗಿದೆ ಇಂತಹ ಕಾರ್ಯಕ್ರಮಗಳ ಮೂಲಕ ಅವರ ಪರಿಶ್ರಮವನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರುಹಾಜರಿದ್ದ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಗಣ್ಯರು ಪೌರ ಕಾರ್ಮಿಕರ ಸೇವಾಭಾವವನ್ನು ಶ್ಲಾಘಿಸಿ ಭವಿಷ್ಯದಲ್ಲಿಯೂ ಇಂತಹ ಸನ್ಮಾನ ಕಾರ್ಯಕ್ರಮಗಳನ್ನು ಮುಂದುವರಿಸಬೇಕೆಂದು ಅಭಿಪ್ರಾಯಪಟ್ಟರು ಈ ಕಾರ್ಯಕ್ರಮದಲ್ಲಿಬೇರು ಭೂಮಿ ತಂಡ ಆದ್ಯ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.
ಕುಡುತಿನಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ – 50 ಪೌರ ಕಾರ್ಮಿಕರಿಗೆ ಸನ್ಮಾನ
