ವಿಜಯನಗರ .ಮಾರ್ಚ್ .13 .ನಗರದ ಹೊಸಪೇಟೆ ನಗರದಲ್ಲಿ ,ಮೂರು ದಿನಗಳ ಕಾಲ ಕರ್ನಾಟಕ ಉಪಲೋಕಾಯುಕ್ತರು, ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ದುರಾಡಳಿತ ವಿರುದ್ಧವಾಗಿ ಸಾರ್ವಜನಿಕರಿಂದ ದೂರಿನ ಅರ್ಜಿಯನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ .ಹಾಗಾಗಿ ,ದಿನಾಂಕ 13.03.2025 ರಿಂದ 15 .03.2025 ರ ವರೆಗೂ, ಮೂರು ದಿನಗಳ ಕಾಲ ಕರ್ನಾಟಕ ಉಪಲೋಯುಕ್ತರಾದ ಶ್ರೀ ವೀರಪ್ಪರವರು ,ಹೊಸಪೇಟೆಯ ನೆಹರು ಕಾಲೋನಿಯಲ್ಲಿರುವ ಸಹಕಾರಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10:00 ಯಿಂದ ನೊಂದಂತ ಸಾರ್ವಜನಿಕರಿಂದ ,ಅವರ ದೂರಿನ ಅರ್ಜಿಯನ್ನು ಸ್ವೀಕರಿಸಿ ,ಭ್ರಷ್ಟ ಅಧಿಕಾರಿಗಳನ್ನು ಸ್ಥಳದಲ್ಲಿ ಕರಿಸಿ, ನೇರವಾಗಿ ದೂರು ಸಮಿಸಿದ ವರ ಎದುರುಗಡೆನೇ ಮುಕ್ತವಾಗಿ ವಿಚಾರಣೆಯನ್ನು ಕೈಗೊಂಡಿದ್ದಾರೆ. ಹಾಗಾಗಿ ನೋಂದಂತಹ ಹೊಸಪೇಟೆ ಹಾಗೂ ಸುತ್ತಮುತ್ತಲಿನ ಹಳ್ಳಿಯ ಸಾರ್ವಜನಿಕರೆಲ್ಲರೂ. ತಾವು ಯಾವುದೇ ಸರ್ಕಾರ ಕಚೇರಿಯಲ್ಲಿ, ಸರ್ಕಾರದ ಅಧಿಕಾರಿಗಳು ,ಸಿಬ್ಬಂದಿಗಳು, ತಮ್ಮ ಕೆಲಸ ಕಾರ್ಯಗಳನ್ನು ಮಾಡದೆ ಇರುವುದು ,ವಿಳಂಬ ಮಾಡುವುದು, ಲಂಚ ಕೇಳುವುದು… ಇತ್ಯಾದಿ ದೂರುಗಳು ಇದ್ದರೆ ,ತಾವುಗಳು ತಮ್ಮ ದೂರಿನ ಅರ್ಜಿಯ ಸಮೇತವಾಗಿ ,ಮೂರು ದಿನಗಳ ಕಾಲ, ಯಾವ ಅಧಿಕಾರಿಯಿಂದ ನೀವು ನೋವು, ಸಂಕಟ, ಕಷ್ಟಪಡುತ್ತಿದ್ದೀರಿ ..ಅವರ ಮೇಲೆ ನೇರವಾಗಿ ದೂರನ್ನು ಸಲ್ಲಿಸಿ, ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಾಗಿ ,ಬಂದುಗಳೇ ಇಂತಹ ಸುವರ್ಣ ಅವಕಾಶವನ್ನು ಸರ್ವರು ಸದುಪಡಿಸಿಕೊಳ್ಳಿ ಎಂದು ವಿಜಯನಗರ ಜಿಲ್ಲಾ ಮಾಹಿತಿ ಹಕ್ಕು ಹಾಗೂ ಸಮಾಜಕ ಕಾರ್ಯಕರ್ತರ ಜಾಗೃತ ವೇದಿಕೆಯ ಶ್ರೀ ಪಾಂಡುರಂಗ ಶೆಟ್ಟಿ ಅವರು, ಶ್ರೀ ಆಂಜನೇಯರವರು, ಶ್ರೀಯಮುನೇಶ್‍ರವರು , ಶ್ರೀ ಎ. ಎಂ .ಬಸವರಾಜ್, ಶ್ರೀ ತಿಪ್ಪೇಸ್ವಾಮಿಯವರು ,ಶ್ರೀ ಎಸ್. ಎಂ .ಬಾಷರವರು ,ಶ್ರೀ ಕುಲಕರ್ಣಿಯವರು, ಶ್ರೀ ಪಣಿಂದ್ರ ಗೌಡ ರವರು ಹಾಗೂ ಇತರರು ವಿನಂತಿಸಿದ್ದಾರೆ