ಬಳ್ಳಾರಿ,ಡಿ.19
ಗೃಹ ರಕ್ಷಕದಳ ಸಂಸ್ಥೆಯು ಪೊಲೀಸ್ ಇಲಾಖೆಯ ಜೊತೆಗೂಡಿ ಸರಿ ಸಮಾನ ಕೆಲಸ ಮಾಡುತ್ತಿರುವ ಸಮವಸ್ತçಧಾರಿ ಸಂಸ್ಥೆಯಾಗಿದೆ ಎಂದು ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಬಿ.ಎಸ್.ಲೊಕೇಶ್ ಕುಮಾರ್ ಹೇಳಿದರು.
ಜಿಲ್ಲಾ ಗೃಹರಕ್ಷಕದಳ ವತಿಯಿಂದ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಗೃಹರಕ್ಷಕರ ಈಶಾನ್ಯ ವಲಯ ಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗೃಹರಕ್ಷಕರು ತಮ್ಮ ಕೆಲಸದ ಒತ್ತಡದಿಂದ ಮುಂದೆ ಬಂದು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಈಶಾನ್ಯ ವಲಯದ ಏಳು ಜಿಲ್ಲೆಗಳಿಂದ ಗೃಹರಕ್ಷಕರು ಆಗಮಿಸಿ ಕ್ರೀಡೆಗಳಲ್ಲಿ ಭಾಗವಹಿಸಿದ್ದು ಸಂತೋಷದ ವಿಷಯವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ಮಾತನಾಡಿ, ಗೃಹರಕ್ಷಕರು ತಮ್ಮ ಕರ್ತವ್ಯ ನಿಷ್ಠೆ ಮತ್ತು ಸಮಯ ಪಾಲನೆಯಿಂದ ಪೋಲಿಸ್ ಇಲಾಖೆಯ ಸಿಬ್ಬಂದಿಯೊAದಿಗೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೃಹರಕ್ಷಕರು ತಮ್ಮ ಕರ್ತವ್ಯ ವೇಳೆಯಲ್ಲೂ ಸಹ ಭಾಗವಹಿಸಿರುವುದು ಹೆಮ್ಮೆಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗೃಹರಕ್ಷಕ ಇಲಾಖೆಯ ವಾದ್ಯವೃಂದ ತಂಡಕ್ಕೆ ಪ್ರಶಂಸನೆ ವ್ಯಕ್ತಪಡಿಸಿದರು.
ಎಎಸ್ಪಿ ಹಾಗೂ ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಟರೂ ಆದ ಕೆ.ಪಿ.ರವಿ ಕುಮಾರ್ ಅವರು ಅಧ್ಯಕ್ಷತೆ ವಹಿಸಿ, ಗೃಹ ರಕ್ಷಕದಳ ಇಲಾಖೆಯ ಸಾಧನೆಗಳು ಮತ್ತು ಅವರ ಕರ್ತವ್ಯಗಳ ನಿಷ್ಠೆಯ ಬಗ್ಗೆ ವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗದ ಪೊಲೀಸ್ ಅಧೀಕ್ಷಕರಾದ ಸಿ.ಸಿದ್ದರಾಜು, ವಿಜಯನಗರ ಜಿಲ್ಲೆಯ ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಟರಾದ ಬಸವರಾಜ ಅಗಸರ, ಡಿಎಆರ್ನ ಡಿಎಸ್ಪಿ ತಿಪ್ಪೇಸ್ವಾಮಿ, ಬೋಧಕರಾದ ಬಸವರಾಜ್ ಹಗಳಗಾರ, ಪ್ರಶಾಂತ್ ಪಾಟೀಲ್, ನಿವೃತ್ತ ಉಪ ಸಮಾದೇಷ್ಟರಾದ ಅಲ್ಲಾಬಕ್ಷಿ, ಚಂದ್ರಶೇಖರ್ ಭಡಗಲ್, ಮಲ್ಲಪ್ಪ, ಕಂಪನಿ ಕಮಾಂಡರ್ ಜೆ.ಸುರೇಶ್, ಘಟಕಾಧಿಕಾರಿ ಬಿ.ಕೆ.ಬಸವಲಿಂಗ ಸೇರಿದಂತೆ. ಕಚೇರಿ ಸಿಬ್ಬಂದಿಯವರು, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ 350 ಪುರುಷ ಮತ್ತು ಮಹಿಳಾ ಗೃಹ ರಕ್ಷಕರು ಭಾಗವಹಿಸಿದ್ದರು.