Ad image

ನಿರಂತರ ಅಭ್ಯಾಸವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ- ಶ್ರೀ.ಮೋಹನ್ ರೆಡ್ಡಿ

Vijayanagara Vani
ನಿರಂತರ ಅಭ್ಯಾಸವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ- ಶ್ರೀ.ಮೋಹನ್ ರೆಡ್ಡಿ

ದಿನಾಂಕ 26-11-24 ರಂದು ಸಿರುಗುಪ್ಪದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಸಿರುಗುಪ್ಪ ಘಟಕದ ವತಿಯಿಂದ ಪ್ರೌಢ ಶಾಲಾಮಕ್ಕಳಿಗೆ ನಡೆದ “ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಈ ವಿಷಯದ ಕುರಿತು ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಣ ಪ್ರೇಮಿಗಳು ಹಾಗೂ ನಿವೃತ್ತ ಇಂಜಿನೀಯರಾದ ಅಗಸನೂರಿನ ಶ್ರೀ.ಮೋಹನ್ ರೆಡ್ಡಿ ಮಾತನಾಡಿ ಶಾಲೆಯ ಪಠ್ಯಕಲಿಕೆಯ ಜೊತೆಗೆ ಈ ರೀತಿಯ ಭಾಷಣಕ್ಕೆ ಮಾಡುವ ಅಭ್ಯಾಸವು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದರ ಜೊತೆಗೆ ಶಿಕ್ಷಕರು ವಿದ್ಯಾರ್ಥಿಗೆ ವಿಷಯವನ್ನು ಆಯ್ಕೆ ಮಾಡುವುದರಿಂದ ಹಿಡಿದು ಹಲವಾರು ಬಾರಿ ಅವರಿಗೆ ಅಭ್ಯಾಸ ಮಾಡಲು ಸಹಾಯ ಮಾಡುವುದರಿಂದ ಇಬ್ಬರ ನಡುವಿನ ಬಾಂಧವ್ಯವು ಗಟ್ಟಿಗೊಳ್ಳುತ್ತದೆ ಎಂದು ತಿಳಿಸಿದರು.

- Advertisement -
Ad imageAd image

ಕಾರ್ಯಕ್ರಮ ಉಧ್ಘಾಟನೆ ಮಾಡಿ ಮಾತನಾಡಿದ ಸಿರುಗುಪ್ಪದ ಖ್ಯಾತ ಹಾಸ್ಯಕಲಾವಿದರಾದ ಶ್ರೀ.ನರಸಿಂಹ ಮೂರ್ತಿಯವರು ಹಾಸ್ಯ ಘಟನೆಗಳನ್ನು ಹೇಳಿ ಮಕ್ಕಳನ್ನು ನಗೆಗಡಲಲ್ಲಿ ಮುಳುಗಿಸಿದರು. ಜೊತೆಗೆ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿಸುವುದರಿಂದ ಧೈರ್ಯ ಮತ್ತು ದೃಢವಿಶ್ವಾಸದಿಂದ ಎಲ್ಲಾ ಮಕ್ಕಳು ಈ ರೀತಿ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಅತ್ಯುತ್ತಮವಾದದ್ದನ್ನು ನೀಡಬೇಕೆಂದು ಕರೆ ನೀಡಿದರು.

ಮತ್ತೊಬ್ಬ ಅತಿಥಿಯಾಗಿ ಭಾಗವಹಿಸಿದ್ದ ಅದೇ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಾದ ಶ್ರೀ. ಶ್ರೀ.ಚನ್ನವೀರಸ್ವಾಮಿ ಮಾತನಾಡಿ ಪೂರ್ವಾಭ್ಯಾಸ ,ಕಥೆಯ ಕೋನವನ್ನು ಸೇರಿಸುದು, ಕಣ್ಣಿನ ಸಂಪರ್ಕವನ್ನು ಮಾಡುವುದು, ಮಾತನಾಡುವ ಭಂಗಿ, ಒಂದು ಪದವನ್ನು ಅತಿಯಾಗಿ ಬಳಸದೇ ಇರುವುದು ಉತ್ತಮ ಭಾಷಣಕ್ಕೆ ಮಾರ್ಗಗಳು ಎನ್ನುವ ಅಂಶಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿರಗುಪ್ಪ ಘಟಕದ ಅಧ್ಯಕ್ಷರಾದ ಡಾ.ಮದುಸೂದನ ಕಾರಿಗನೂರು ವಿದ್ಯಾರ್ಥಿಜೀವನ ದೆಸೆಯಿಂದಲೇ ಒಳ್ಳೆಯ ಆರೋಗ್ಯ ಪಡೆಯಲು ಉತ್ತಮ ಆಹಾರ ಸೇವಿಸುವ, ನಿಯಮಿತ ವ್ಯಾಯಾಮ ಮಾಡುವ ಹಾಗೂ ಹಾನಿಕಾರಕ ರಸಾಯನಿಕಗಳನ್ನು ಬಳಸಿ ಮಾಡುವ ಆಹಾರ ಪದಾರ್ಥಗಳನ್ನು ತಿನ್ನುವ ಪರಿಪಾಠದಿಂದ ಹಾಗೂ ದುರಭ್ಯಾಸಗಳಿಂದ ದೂರವಿರುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ. ಶಾಲೆಯ ಮುಖ್ಯೋಪಧ್ಯಾಯರಾದ ಶ್ರೀ.ವೆಂಕಟೇಶ್ ಯಾದವ್ ಕನ್ನಡ ಸಾಹಿತ್ಯ ಪರಿಷತ್ತಿನ ಈ ರೀತಿಯ ವಿನೂತನ ಕಾರ್ಯಗಳನ್ನು ಮೆಚ್ಚುತ್ತಾ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕಿತ್ತೂರು ರಾಣಿಚೆನ್ನಮ್ಮನ ಕುರಿತಾದ ಕಿರುನಾಟಕವನ್ನು ಶಾಲಾ ಮಕ್ಕಳು ಪ್ರದಶಿಸಿದರು.
ಕಾರ್ಯಕ್ರಮದ
ನಿರೂಪಣೆಯನ್ನು ಶಾಲೆಯ ದೈಹಿಕ ಶಿಕ್ಷಕಿಯಾದ ಶ್ರೀಮತಿ ಶಾರದಾ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಈ ಸಮಾರಂಭದಲ್ಲಿ ಶಿಕ್ಷಕರಾದ ಶ್ರೀ.ಪದ್ಮನಾಭ ರಾವ್, ಶ್ರೀಮತಿ.ವೀಣಾ ಹಾಗೂ ಅತಿಥಿ ಶಿಕ್ಷಕರು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳ ಬಹುಮಾನ ನೀಡಲಾಯಿತು.

Share This Article
error: Content is protected !!
";