Ad image

ಸೇವಾ ನ್ಯೂನ್ಯತೆ ಎಸಗಿದ ನಿಸರ್ಗ ರಿಯಲ್ ವೆಲ್ತ್ ಸೆಲ್ಯೂಷೆನ್ಸ್‍ಗೆ ದಂಡ ವಿಧಿಸಿ ಮತ್ತು ಪರಿಹಾರ ಕೊಡಲು ಗ್ರಾಹಕರ ಆಯೋಗ ಆದೇಶ

Vijayanagara Vani
ಧಾರವಾಡ ಜೂ.03: ಹುಬ್ಬಳ್ಳಿಯ ನಿವಾಸಿ ಪರಶುರಾಮ ಕುರಿಯವರ ಎಂಬುವವರು ಖಾಸಗಿ ಉದ್ಯೋಗಸ್ಥರಾಗಿರುತ್ತಾರೆ. ಎದುರುದಾರ, ನಿಸರ್ಗ ರಿಯಲ್ ವೆಲ್ತ್ ಸೆಲ್ಯೂಷೆನ್ಸ್ ಅವರು ಹುಬ್ಬಳ್ಳಿಯ ಸುತಗಟ್ಟಿಯಲ್ಲಿ 2013 ರಲ್ಲಿ ನಿಸರ್ಗ ಗ್ರೀನ್ ವ್ಯಾಲಿ ಲೇಔಟ ನಿರ್ಮಿಸುತ್ತಿದ್ದರು. ಎದುರುದಾರರು ಕೊಟ್ಟ ಜಾಹೀರಾತನ್ನು ನೋಡಿ ದೂರುದಾರ ಅವರನ್ನು ಸಂಪರ್ಕಿಸಿ ಪ್ಲಾಟ ಖರೀದಿಯ ಬಗ್ಗೆ ಮಾತುಕತೆ ಮಾಡಿದರು. ದೂರುದಾರ ಪ್ಲಾಟ ನಂ.18 ನ್ನು ಒಟ್ಟು ರೂ.6,12,000 ಕ್ಕೆ ಖರೀದಿಸುವ ಬಗ್ಗೆ ಉಭಯತರ ಮದ್ಯೆ ಒಪ್ಪಂದವಾಗಿತ್ತು. ಅದರ ಪೈಕಿ ರೂ.2,50,000 ಗಳನ್ನು ದೂರುದಾರರು ಎದುರುದಾರರಿಗೆ ಮುಂಗಡವಾಗಿ ಪಾವತಿಸಿದ್ದರು. ಆದರೆ ಎದುರುದಾರರು ಲೇಔಟ ಅಭಿವೃದ್ಧಿಪಡಿಸಲಿಲ್ಲ. ಎದುರುದಾರ ದೂರುದಾರರಿಂದ ಬಾಕಿ ಹಣ ಪಡೆದು ಖರೀದಿ ಪತ್ರ ಮಾಡಿಕೊಡದೇ ಸತಾಯಿಸುತ್ತಿದ್ದರು. ಅಂತಹ ಅವರ ನಡಾವಳಿಕೆಯಿಂದ ತನಗೆ ಮೋಸವಾಗಿದೆ ಮತ್ತು ಅವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ನಿಸರ್ಗ ರಿಯಲ್ ವೆಲ್ತ್ ಸೆಲ್ಯೂಷೆನ್ಸ್ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ: 17/10/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ದೂರುದಾರರಿಗೆ ಅಭಿವೃದ್ಧಿಪಡಿಸಿದ ಪ್ಲಾಟು ಕೊಡುವುದಾಗಿ ಹೇಳಿ ಅವರಿಂದ ರೂ.2,50,000 ಗಳನ್ನು ಮುಂಗಡ ಹಣ ಎದುರುದಾರ ಪಡೆದುಕೊಂಡಿದ್ದಾರೆ. ಆದರೆ ಅವರು ಪ್ಲಾಟನ್ನು ಅಭಿವೃದ್ದಿಪಡಿಸಿರುವುದಿಲ್ಲ. ಹಾಗೂ ದೂರುದಾರರು ಪಾವತಿಸಿದಂತಹ ಹಣವನ್ನು ಮರಳಿ ಕೊಟ್ಟಿರುವುದಿಲ್ಲ. ಅಂತಹ ಎದುರುದಾರ, ಡೆವಲಪರ್ ರವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ. ಅಲ್ಲದೇ ಎದುರುದಾರರ ಅಂತಹ ನಡಾವಳಿಕೆ ಅನುಚ್ಚಿತ ವ್ಯಾಪಾರ ಪದ್ಧತಿ ಸಹ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಆದೇಶವಾದ ಒಂದು ತಿಂಗಳೊಳಗಾಗಿ ದೂರುದಾರರು ಪಾವತಿಸಿದಂತಹ ರೂ.2,50,000 ಮತ್ತು ಅದರ ಮೇಲೆ ಶೆ.10 ರಂತೆ ಬಡ್ಡಿ ಲೆಕ್ಕ ಹಾಕಿ ಪೂರ್ತಿ ಹಣ ಸಂದಾಯವಾಗುವವರೆಗೂ ಎದುರುದಾರರು ದೂರುದಾರರಿಗೆ ಕೊಡಬೇಕು ಅಂತಾ ಆಯೋಗ ಆದೇಶದಲ್ಲಿ ತಿಳಿಸಿದೆ. ಎದುರುದಾರರ ಅಂತಹ ನಡಾವಳಿಕೆಯಿಂದ ದೂರುದಾರರಿಗೆ ತುಂಬಾ ಅನಾನುಕೂಲ ಹಾಗೂ ಮಾನಸಿಕ ಹಿಂಸೆಯಾಗಿದೆ. ಅದಕ್ಕಾಗಿ ಎದುರುದಾರ, ಡವಲಪರ್ರವರು ದೂರುದಾರರಿಗೆ ರೂ.50,000 ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000 ಕೊಡುವಂತೆ ಆಯೋಗ ತನ್ನ ಆದೇಶದಲ್ಲಿ ನಿಸರ್ಗ ರಿಯಲ್ ವೆಲ್ತ ಸ್ಯೊಲುಷನ್ಗೆ ನಿರ್ಧೇಶಿಸಿದೆ

Share This Article
error: Content is protected !!
";