Ad image

ಅನಧೀಕೃತ ಕಟ್ಟಡಗಳನ್ನು ತೆರವು ಗೊಳಿಸಿದ ಪಾಲಿಕೆ

Vijayanagara Vani
ಅನಧೀಕೃತ ಕಟ್ಟಡಗಳನ್ನು ತೆರವು ಗೊಳಿಸಿದ ಪಾಲಿಕೆ
 ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 5ರ ವ್ಯಾಪ್ತಿಯಲ್ಲಿ ಬರುವ
ಗುರುದತ್ತ ಕಾಲೋನಿಯ ನಾಲಾ ಪಕ್ಕದ ಉದ್ಯಾನವನದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಕಟ್ಟಡಗಳಿಂದ ಸಾರ್ವಜನಿಕರಿಗೆ ಸಮಸ್ಯೆಗಳು ಎದುರಾಗುತ್ತಿದ್ದರಿಂದ ಹಲವು ಬಾರಿ ಮೌಖಿಕವಾಗಿ ತಿಳಿಹೇಳಿದರೂ ಸಹ ತೆರವು ಗೊಳಿಸದೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಿರುವುದನ್ನು ಇಂದು ವಲಯ ಕಚೇರಿ 5ರ ಸಹಾಯಕ ಆಯುಕ್ತರಾದ ಗಿರೀಶ್ ತಳವಾರ ರವರು ತಮ್ಮ ತಂಡದೊಂದಿಗೆ ಹಾಗು ಪೊಲೀಸರ ಸಹಾಯದೊದಿಗೆ ಅಲ್ಲಿರುವ ಅನಧಿಕೃತ ಕಟ್ಟಡಗಳನ್ನು ನೆಲಸಮ ಮಾಡಿ ಇನ್ನೊಮ್ಮೆಅನಧೀಕ್ರತವಾಗಿ ಕಟ್ಟಡಗಳನ್ನು ನಿರ್ಮಿಸದಂತೆ ಎಚ್ಚರಿಕೆ ನೀಡಿದರು.ಈ ಕಾರ್ಯಾಚರಣೆಯಲ್ಲಿ ವಲಯ ಕಚೇರಿಯ 5ರ ಕಿರಿಯ ಅಭಿಯಂತರರಾದ ಅಭಿಷೇಕ್ , ಹಿರಿಯ ಆರೋಗ್ಯ ನಿರೀಕ್ಷಕರಾದ ಸುರೇಶ್ ರಾಠೋಡ ಹಾಗೂ ಎಲ್ಲಾ ಕಿರಿಯ ಆರೋಗ್ಯ ನಿರೀಕ್ಷಕರು, ಜಮಾದಾರ್/ಸೂಪರ್ವೈಸರ್ ಮತ್ತು ಪೌರಕಾರ್ಮಿಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Share This Article
error: Content is protected !!
";