ಜಿಲ್ಲಾ ಕ್ರೀಡಾಂಗಣದಲ್ಲಿ ಸಾಂಸ್ಕøತಿಕ ಸಿರಿವೈಭವ:* *ಪ್ರೇಕ್ಷಕರ ಮನ ಗೆದ್ದ, ಸ್ವಾತಂತ್ರ್ಯ ಧಾರೆಯ ಸಮರ ಧೀರರು, ನೃತ್ಯ ರೂಪಕ

Vijayanagara Vani
ಜಿಲ್ಲಾ ಕ್ರೀಡಾಂಗಣದಲ್ಲಿ ಸಾಂಸ್ಕøತಿಕ ಸಿರಿವೈಭವ:* *ಪ್ರೇಕ್ಷಕರ ಮನ ಗೆದ್ದ, ಸ್ವಾತಂತ್ರ್ಯ ಧಾರೆಯ ಸಮರ ಧೀರರು, ನೃತ್ಯ ರೂಪಕ
ಧಾರವಾಡ ಅಗಸ್ಟ್ 15:* ಸ್ವಾತಂತ್ರ್ಯ ದಿನಾಚರಣೆಯ ವುಶೇಷ ಆಚರಣೆ ಮೂಲಕ ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಗಳನ್ನು ಜನರಿಗೆ ಮತ್ತಮ್ಮೊ ಕಟ್ಟಿಕೊಡುವ ಮಹಾದಾಸೆಯಿಂದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಶಾಲಾ ಶಿಕ್ಷಣ ಇಲಾಖೆ ಪ್ರಸ್ತುತ ಪಡಿಸಿದ, ಪದವಿ ಪೂರ್ವ ಶಿಕ್ಷಣ ಇಲಾಖೆ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದ ಸ್ವಾತಂತ್ರ್ಯ ಧಾರೆಯ ಸಮರ ಧೀರರು ಎಂಬ ನೃತ್ಯ ರೂಪಕ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ರೇಕ್ಷರ ಮನ ಗೆದ್ದಿತು.
ಶಂಕರ್ ಹಲಗತ್ತಿ ಸಂಚಾಲಕತ್ವದ ಮತ್ತು ನಟ, ಸಂಗೀತಗಾರ ಗದಿಗಯ್ಯ ಹಿರೇಮಠ ಅವರು ರಚಿಸಿ, ಸಂಗೀತ ಸಂಯೋಜಿಸಿ, ಪ್ರಧಾನ ನಿರ್ದೇಶನ ಮಾಡಿದ್ದ ಈ ರೂಪಕಕ್ಕೆ ಗದಿಗಯ್ಯ ವಿ ಹಿರೇಮಠ, ಡಾ.ರಾಮು ಮೂಲಗಿ, ಡಾ.ಲಿಂಗರಾಜ ರಾಮಾಪೂರ, ಲಾಲಸಾಬ ನದಾಫ್ ಅವರು ಸಾಹಿತ್ಯ ರಚಿಸಿದ್ದರು.
ಸ್ವಾತಂತ್ರ್ಯ ಧಾರೆಯ ಸಮರ ಧೀರರು ಎಂಬ ನೃತ್ಯ ರೂಪಕದಲ್ಲಿ ಧಾರವಾಡ ನಗರದ ರಾಜೀವ್ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಕ್ಕಳಿಂದ ಪ್ರಮೀಳಾ ಜಕ್ಕಣ್ಣವರ ನಿರ್ದೇಶನದ ಕಿತ್ತೂರು ರಾಣಿ ಚೆನ್ನಮ್ಮ ರೂಪಕ ಮತ್ತು ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಕ್ಕಳಿಂದ ಸಿಕಂದರ ದಂಡಿನ ನಿರ್ದೇಶನದ ಮುಂಡರಗಿ ಭೀಮರಾಯ ರೂಪಕ ಮತ್ತು ಕಿಟಲ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಮಕ್ಕಳಿಂದ ಸೋಮಶೇಖರ ಕಾರಿಗನೂರ ನಿರ್ದೇಶನದ ನರಗುಂದದ ಬಾಬಾ ಸಾಹೇಬ್ ರೂಪಕ ಮತ್ತು ಮಹೇಶ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಮಕ್ಕಳಿಂದ ಲಾಲಸಾಬ ನದಾಫ ನಿರ್ದೇಶನದ ಧಾರವಾಡದ ಖಿಲಾಪತ್ ಚಳವಳಿ ರೂಪಕ ಹಾಗೂ ಶ್ರೀ ಸತ್ಯಸಾಯಿ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದ ಮಕ್ಕಳಿಂದ ಶೃತಿ ಹುರಳಿಕೊಪ್ಪ ನಿರ್ದೇಶನದ ಮೈಲಾರ ಮಹಾದೇವಪ್ಪ ರೂಪಕಗಳು ಪ್ರದರ್ಶನವಾದವು.
ಈ ಐದು ರೂಪಕಗಳಲ್ಲಿ ಒಟ್ಟು 500 ವಿದ್ಯಾರ್ಥಿಗಳು ಅಭಿನಯಿಸಿದರು. ರಾಘವ ಕಮ್ಮಾರ ಅವರು ಸಂಗೀತ ಸಂಯೋಜಿಸಿ, ವಿಶ್ವರಾಜ ರಾಜಗುರು ಅವರೊಂದಿಗೆ ಗಾಯನ ಪ್ರಸ್ತುತ ಪಡಿಸಿದರು. ಜಾನಪದ ಗಾಯನವನ್ನು ಡಾ.ರಾಮೂ ಮೂಲಗಿ ಅವರು, ನೃತ್ಯ ಸಂಯೋಜನೆಯನ್ನು ವಿಜೇತಾ ವರ್ಣೇಕರ ಮತ್ತು ಮಲ್ಲನಗೌಡ ಪಾಟೀಲ ಅವರು, ವಸ್ತ್ರ ವಿನ್ಯಾಸವನ್ನು ಮುಕ್ತಾ ವರ್ಣೇಕರ ಅವರು ಮಾಡಿದ್ದರು.
ಈ ರೂಪಕಗಳನ್ನು ತಯ್ಯಾರಿಸುವಲ್ಲಿ ಗದಿಗಯ್ಯ ಹಿರೇಮಠ,ಮಾಯಾ ಚಿಕ್ಕೆರೂರ, ಆರತಿ ದೇವಶಿಖಾಮಣಿ, ಸಿ ಎಸ್ ಪಾಟೀಲ ಕುಲಕರ್ಣಿ, ಎನ್ ಬಿ ದ್ಯಾಪೂರ, ರಾಘವ ಕಮ್ಮಾರ, ಬಿ ಆರ್ ಜಕಾತಿ, ವಿಶ್ವರಾಜ್ ರಾಜಗುರು , ಸಿಕಂದರ್ ದಂಡಿನ, ಶೃತಿ ಹುರಳಿಕೊಪ್ಪ, ಸೋಮಶೇಖರ ಕಾರಿಗನೂರ, ಲಾಲಸಾಬ ನದಾಫ, ಬಾಬಜಾನ್ ಮುಲ್ಲಾ, ಪವನ ಕುಲಕರ್ಣಿ, ಸ್ಟ್ಯಾಂಡಲಿ ಕಲ್ಲೂರ ಕಲಾವಿದರು ಶ್ರಮಿಸಿದ್ದರು.
*ಬಾಲಬಳಗ ಮಕ್ಕಳಿಂದ ಖಾದಿ ನೂಲು ತೆಗೆಯುವ ಪ್ರಾತ್ಯಕ್ಷಿಕೆ:* ಧಾರವಾಡ ಬಾಲಬಳಗ ಶಾಲೆಯ ಸುಮಾರು 50 ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥ ಡಾ. ಸಂಜಿವ ಕುಲಕರ್ಣಿ ನೇತೃತ್ವದಲ್ಲಿ ಮುಖ್ಯ ವೇದಿಕೆಯ ಮುಂಭಾಗದಲ್ಲಿ ಚರಕದ ಮೂಲಕ ಖಾದಿ ನೂಲು ತೆಗೆಯುವ ಪ್ರಾತ್ಯಕ್ಷಿಕೆಯನ್ನು ನೀಡಿ, ಸಾರ್ವಜನಿಕರಲ್ಲಿ ಖಾದಿ ಮಹತ್ವ, ಜಾಗೃತಿ ಮೂಡಿಸಿದರು.
*ಪಥ ಸಂಚಲನದ ಸ್ಪರ್ಧೆ ವಿಜೇತರು:* ಇದೇ ಮೊದಲಬಾರಿಗೆ ಜಿಲ್ಲಾಡಳಿತದಿಂದ ಪಥಸಂಚಲನದಲ್ಲಿ ಉತ್ತಮ್ಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ನೀಡಲಾಯಿತು. 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಏರ್ಪಡಸಲಾಗಿದ್ದ ಕವಾಯತು ಪಥ ಸಂಚಲನದಲ್ಲಿ ಧಾರವಾಡ ಶಹರದ ಶ್ರೀ. ಎನ್.ಎ ಮುತ್ತಣ್ಣ ಪೆÇೀಲಿಸ್ ಮಕ್ಕಳ ವಸತಿ ಶಾಲೆಗೆ ಪ್ರಥಮ ಬಹುಮಾನ, ಕಲಘಟಗಿ ತಾಲೂಕಿನ ಆಸ್ತಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದ್ವಿತೀಯ ಬಹುಮಾನ ಹಾಗೂ ಧಾರವಾಡ ಶಹರದ ಆದರ್ಶ ವಿದ್ಯಾಲಯಕ್ಕೆ ತೃತೀಯ ಬಹುಮಾನವನ್ನು ನೀಡಿ, ಪ್ರಮಾಣ ಪತ್ರದೊಂದಿಗೆ ಗೌರವಿಸಲಾಯಿತು.
*ಸ್ವಾತಂತ್ರ್ಯ ದಿನಾಚರಣೆ: ನೆಲದ ಮೇಲೆ ಕುಳಿತು ರೂಪಕ ಕಾರ್ಯಕ್ರಮ ವೀಕ್ಷಿಸಿದ ಕಾರ್ಮಿಕ ಸಚಿವ ಸಂತೋμï ಲಾಡ್:* 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋμï ಲಾಡ್ ಅವರು ನೆಲದ ಮೇಲೆ ಕುಳಿತು ಮೈದಾನದಲ್ಲಿ ನಡೆದ ರೂಪಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಶಾಲಾ ಮಕ್ಕಳು ಮೈದಾನದಲ್ಲಿ ಕಿರುನಾಟಕ, ನೃತ್ಯ, ದೇಶಭಕ್ತಿ ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಧ್ವಜಾರೋಹಣ ನೆರವೇರಿಸಿದ ನಂತರ ಸಚಿವ ಲಾಡ್ ಅವರು, ಈ ಎಲ್ಲಾ ಕಾರ್ಯಕ್ರಮಗಳನ್ನು ನೆಲದ ಮೇಲೆ ಸಾಮಾನ್ಯರಂತೆ ಕುಳಿತು ವೀಕ್ಷಿಸಿದರು. ಸಚಿವರೇ ತಮ್ಮೊಂದಿಗೆ ಕುಳಿತದ್ದು ಕಂಡ ಮಕ್ಕಳು ಹೆಚ್ಚಿನ ಸಂತೋಷಗೊಂಡರು. ಸಚಿವರ ಈ ಸರಳತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.
WhatsApp Group Join Now
Telegram Group Join Now
Share This Article
error: Content is protected !!