Ad imageAd image

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಭಾರಿ ಶುಲ್ಕ ದಂದೆಗೆ ಕಡಿವಾಣ ಹಾಕಿ

Vijayanagara Vani

ಬಳ್ಳಾರಿ ಮೇ 23 ಜಿಲ್ಲೆಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಾರಿ ದುಬಾರಿ ಶುಲ್ಕ ದಂದೆಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು ಉಚಿತ ಕಡ್ಡಾಯ ಹಾಗೂ ವೈಜ್ಞಾನಿಕ ಶಿಕ್ಷಣ ಪದ್ಧತಿಯ ಸಮರ್ಪಕ ಜಾರಿಯಾಗಬೇಕು ಜಿಲ್ಲೆಯಲ್ಲಿ ಸರ್ಕಾರಿ ಶಿಕ್ಷಣ ಶಾಲೆ ಕಾಲೇಜುಗಳ ವ್ಯವಸ್ಥೆ ಹದಗೆಟ್ಟಿದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ನಾಯಿ ಕೊಡೆಗಳಂತೆ ತಲೆಯೆತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಬಡ ಮತ್ತು ಮಾಧ್ಯಮ ವರ್ಗದ ಪಾಲಕರ ಮಕ್ಕಳಿಗೆ ಸಹಕಾರಿಯಾಗದೆ ವಿಷಕಾರಿಯಾಗಿ ಬಿಟ್ಟಿವೆ ವ್ಯಾಪಕವಾದ ಕೇಂದ್ರವನ್ನಾಗಿ ಮಾಡಿಕೊಂಡು ಅಕ್ಷರಗಳನ್ನು ಆಯಾ ಸಂಸ್ಥೆಯವರು ತಕ್ಕಡಿಯಲ್ಲಿ ಮಾರಾಟಕ್ಕಿಟ್ಟಿದ್ದಾರೆ ಸರ್ಕಾರದ ಸಂವಿಧಾನಾತ್ಮಕ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಸಮರ್ಪಕವಾಗಿ ಜಾರಿಯಾಗದೆ ನೂರಾರು ಸರ್ಕಾರಿ ಶಾಲೆ ಕಾಲೇಜುಗಳು ಮುಚ್ಚಲಾಗುತ್ತಿವೆ ಏಕೆಂದರೆ ಬಲಿಷ್ಠ ರಾಜಕಾರಣಿ ಶ್ರೀಮಂತ ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಪ್ರಾರಂಭಿಸಿದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಬಡವರ ರಕ್ತ ಹೀರಿಕೊಳ್ಳುತ್ತಿವೆ ಡೊನೇಷನ್ ದುಬಾರಿ ಶುಲ್ಕದ ವಿಷಯದಲ್ಲಿ ಕಿರುಕುಳದಿಂದ ವಿದ್ಯಾರ್ಥಿಗಳ ಪಾಲಕರಿಗೆ ಮಾನಸಿಕ ಹಿಂಸೆ ನೀಡುತ್ತಿವೆ ಸಾಮಾಜಿಕ ಮೌಲ್ಯಾದ್ದಾರಿತ ಸಮ ಸಮಾಜ ವೈಜ್ಞಾನಿಕ ಶಿಕ್ಷಣಕ್ಕೆ ಒತ್ತು ನೀಡದೆ ವ್ಯಾಪಕವಾದ ಕೇಂದ್ರಗಳಾಗಿ ಮಾರ್ಪಟ್ಟಿವೆೆ  ಕೆಲವು ಶಿಕ್ಷಣ ಕ್ಷೇತ್ರದಲ್ಲಿ ಕೆಲವೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಮೂಲಭೂತವಾದತ್ತ ಮುಖ ಮಾಡುವ ಧರ್ಮ ಜಾತಿ ಮತ ಗಳಿಗೆ ಹೊತ್ತು ಕೊಡುತ್ತಾ ಅವೈಜ್ಞಾನಿಕವಾಗಿ ಮೌಡ್ಯಗಳನ್ನು ಮಕ್ಕಳಲ್ಲಿ ಬಿತ್ತುತ್ತ ಆಧುನಿಕ ಕಾಲಘಟ್ಟದಲ್ಲಿ ಪುರಾತನ ಯುಗಕ್ಕೆ ಕರೆದೊಯ್ಯಲಾಗುತ್ತದೆ. ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ದುಬಾರಿ ಶುಲ್ಕದ ದಂದೆ ಮಿತಿಮೀರಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿತ್ತೇವೆ ಎಂದರು 

- Advertisement -
Ad imageAd image

ಪ್ರತಿ ವರ್ಷ ಶೇಕಡ 15ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸರ್ಕಾರಕ್ಕೆ ಪ್ರಸ್ತಾವನೆಗಳು ಸಲ್ಲಿಸುತ್ತವೆ ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಆದೇಶ ಹೊರಡಿಸಿದ್ದು ಇದರ ವಿರುದ್ಧವಾಗಿ ರಾಜ್ಯ ಸರ್ಕಾರ ಹೈಕೋರ್ಟಿನ ಮುಂದೆ ಸಮರ್ಪಕವಾದ ತಜ್ಞ ನ್ಯಾಯವಾದಿಗಳಿಂದ ವಾದವನ್ನು ಮಂಡಿಸದಿರುವುದಕ್ಕೆ ಕಾರಣವಾಗಿದೆ 

ರಾಜ್ಯ ಸರ್ಕಾರವು ಖಾಸಗಿ ಶಾಲೆಗಳೊಂದಿಗೆ ಕೈಜೋಡಿಸಿದೆ ಎಂದು ಅನುಮಾನ ವ್ಯಕ್ತವಾಗುತ್ತದೆ 2024. 25 ನೇ ಶೈಕ್ಷಣಿಕ ವರ್ಷದಲ್ಲಿ ಆದರೂ ಖಾಸಗಿ ಶಾಲೆಗಳ ದುಬಾರಿ ಶುಲ್ಕ ದಂದೆಯಿಂದ ಪೋಷಕರನ್ನು ರಕ್ಷಿಸಲು ಖಾಸಗಿ ಶಿಕ್ಷಣದ ದುಬಾರಿ ವಸೂಲಿ ಶುಲ್ಕವನ್ನು ನಿಯಂತ್ರಣ ಪ್ರಾಧಿಕಾರ ತಡೆ ನೀಡಬೇಕಾಗಿದೆ ಕುರುತು ತಾವುಗಳು ಹೆಚ್ಚಿನ ಗಮನ ಹರಿಸಬೇಕು ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರನ್ನು ಸಭೆ ಕರೆದು ನ್ಯಾಯಾಲಯದ ಆದೇಶದ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಂಡು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಒತ್ತು ನೀಡಿ ನಾಡಿನ ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳ ಪಾಲಕರಿಗೆ ಅನುಕೂಲವನ್ನು ಮಾಡಿ ಕೊಡಬೇಕೆಂದು ಮನವಿ ಮಾಡಿದರು ಸಂದರ್ಭದಲ್ಲಿ

     ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಶಂಕರ್ ನಂದಿಹಾಳ್, ಜಿಲ್ಲಾ ಕಾರ್ಯಧ್ಯಕ್ಷರು ಸಿ ಹನುಮೇಶ್ ಕಟ್ಟಿಮನಿ, ಮಲ್ಲಿಕಾರ್ಜುನ ಬಿ ಗೋನಾಳ್ ಲಕ್ಷ್ಮಿಕಾಂತ ಸೇರಿದಂತೆ ಹಲವಾರು ಜನರಿದ್ದರು ,

 

WhatsApp Group Join Now
Telegram Group Join Now
Share This Article
error: Content is protected !!