Ad image

ದಲಿತ ಪ್ಯಾಂಥರ್ ಸಂಘಟನೆಯಿಂದ ಮೋಹನ್ ಕುಮಾರ್ ದಾನಪ್ಪರಿಗೆ ಸನ್ಮಾನ

Vijayanagara Vani
ದಲಿತ ಪ್ಯಾಂಥರ್ ಸಂಘಟನೆಯಿಂದ ಮೋಹನ್ ಕುಮಾರ್ ದಾನಪ್ಪರಿಗೆ ಸನ್ಮಾನ

ಕಂಪ್ಲಿ:22 ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿ ಕಾರದ ಸದಸ್ಯರಾಗಿ ಮೋಹನ್ ಕುಮಾರ್‌ ದಾನಪ್ಪ ಅವರು ನೇಮಕವಾದ ನಿಮಿತ್ಯ ಭಾರತೀಯ ದಲಿತ ಪ್ಯಾಂಥರ್ ನ ಜಿಲ್ಲಾಧ್ಯಕ್ಷರಾದ ಜೆ. ಕಾಟಂರಾಜ್ ರವರು ಸನ್ಮಾನಿಸಿದರು.

ಮೋಹನ್ ಕುಮಾರ್ ದಾನಪ್ಪ ನವರು ಕಳೆದ 15 ವರ್ಷಗಳಿಂದ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಜನರ ಪರವಾಗಿ ನಿರಂತರ ಹೋರಾಟಗಳನ್ನು ಮಾಡಿಕೊಂಡು ಸಾಮಾನ್ಯ ಕಾರ್ಯಕರ್ತನಾಗಿ ಹಂತ ಹಂತವಾಗಿ ರಾಜ್ಯ ಮಟ್ಟದಲ್ಲಿ ಸಮಾಜ ಸೇವೆ ಹೋರಾಟಗಳನ್ನು ಮಾಡಿಕೊಂಡು ಬಂದು ಇಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರ ಹುದ್ದೆಗೆ ನೇಮಕವಾಗಿರುವುದು ಸಂಘಟನೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಜೆ. ಕಾಟಂರಾಜ್ ರವರು ಹೇಳಿದರು!

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ವಿ.ಗೋವಿಂದರಾಜ್, ಬಿ. ಮಾರೆಪ್ಪ. ಡಿ. ವೆಂಕಟೇಶ್, ಯು.ಸುರೇಶ್, ಜಿ. ಶರಣ ಗೌಡ, ಜಿ, ಪಂಪನಗೌಡ, ಪಾಲ್ಗೊಂಡಿದ್ದರು

Share This Article
error: Content is protected !!
";