2024 ರ ಲೋಕಸಭಾ ಚುನಾವಣೆಯ ಕುರಿತು ವಿಶ್ವದ ಅತಿದೊಡ್ಡ ಚುನಾವಣೆಯ ಕುರಿತು ಭಾರತ ಚುನಾವಣಾ ಆಯೋಗದಿಂದ ದತ್ತಾಂಶ ಪ್ರಕಟಣೆ

Vijayanagara Vani
2024 ರ ಲೋಕಸಭಾ ಚುನಾವಣೆಯ ಕುರಿತು ವಿಶ್ವದ ಅತಿದೊಡ್ಡ ಚುನಾವಣೆಯ ಕುರಿತು ಭಾರತ ಚುನಾವಣಾ ಆಯೋಗದಿಂದ ದತ್ತಾಂಶ ಪ್ರಕಟಣೆ
ಬಳ್ಳಾರಿ,ಡಿ.31
2024 ರ ಲೋಕಸಭಾ ಚುನಾವಣೆ ಮತ್ತು ಜೊತೆಯಲ್ಲಿ ನಡೆದ 4 ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಂಕ್ಷಿಪ್ತ ಡೇಟಾವನ್ನು ಆಯೋಗ ಬಿಡುಗಡೆ ಮಾಡಿದೆ. ಜೊತೆಗೆ ವಿಶ್ವದಾದ್ಯಂತ ಶಿಕ್ಷಣ ತಜ್ಞರು, ಸಂಶೋಧಕರು, ಚುನಾವಣಾ ವೀಕ್ಷಕರು ಸೇರಿದಂತೆ ಮತದಾರರಿಗೆ ಇದು ಅನುಕೂಲವಾಗಬಲ್ಲದು ಎಂದು ಆಯೋಗ ತಿಳಿಸಿದೆ.
ಭಾರತದ ಚುನಾವಣಾ ಆಯೋಗವು 2024 ರ ಲೋಕಸಭಾ ಚುನಾವಣೆಗೆ ಸಂಬoಧಿಸಿದoತೆ 42 ಅಂಕಿಅ0ಶಗಳ ವರದಿಗಳು ಮತ್ತು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೆ 14 ಅಂಕಿಅoಶಗಳ ವರದಿಗಳ ಸಮಗ್ರ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ.
ಆಯೋಗದ ಈ ಸ್ವಯಂ ಪ್ರೇರಿತ ಕಾರ್ಯವು ಭಾರತದ ಚುನಾವಣಾ ವ್ಯವಸ್ಥೆಯ ಆಧಾರವಾಗಿರುವ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿರುತ್ತದೆ. ವ್ಯಾಪಕವಾದ ಸವಿವರವಾದ ದತ್ತಾಂಶ ಬಿಡುಗಡೆಯು, ಶೈಕ್ಷಣಿಕ, ಸಂಶೋಧನೆ ಮತ್ತು ಸಾರ್ವಜನಿಕರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಚುನಾವಣೆಗೆ ಸಂಬAಧಿಸಿದ ದತ್ತಾಂಶದ ಪ್ರತಿ ವಿವರಗಳನ್ನು ಬಹಿರಂಗಪಡಿಸುವಿಕೆಯ ಮೂಲಕ ಹೆಚ್ಚಿನ ಪಾರದರ್ಶಕತೆ ಕಾಪಾಡಿಕೊಳ್ಳುವುದು ಆಯೋಗದ ನೀತಿಯ ಮುಂದುವರಿಕೆಯಾಗಿದೆ.
ಈ ದತ್ತಾಂಶ ವಿವರಗಳು ವಿವಿಧ ರೀತಿಯ ಮಾಹಿತಿಗಳನ್ನು ಒಳಗೊಂಡಿವೆ, ಉದಾಹರಣೆಗೆ ಲೋಕಸಭಾ ಕ್ಷೇತ್ರ/ವಿಧಾನಸಭಾ ಕ್ಷೇತ್ರ/ರಾಜ್ಯವಾರು ಮತದಾರರ ವಿವರಗಳು, ಮತದಾನ ಕೇಂದ್ರಗಳ ಸಂಖ್ಯೆ, ರಾಜ್ಯ/ಲೋಕಸಭಾ ಕ್ಷೇತ್ರವಾರು ಮತದಾರರ ಮತದಾನ, ಪಕ್ಷವಾರು ಮತ ಹಂಚಿಕೆ, ಲಿಂಗ ಆಧಾರಿತ ಮತದಾನದ ನಡವಳಿಕೆ, ರಾಜ್ಯವಾರು ಮಹಿಳಾ ಮತದಾರರ ಭಾಗವಹಿಸುವಿಕೆ, ಪ್ರಾದೇಶಿಕ ವ್ಯತ್ಯಾಸಗಳು, ಕ್ಷೇತ್ರವಾರು ದತ್ತಾಂಶ ಸಾರಾಂಶ ವರದಿ, ರಾಷ್ಟಿçÃಯ/ರಾಜ್ಯ ಪಕ್ಷಗಳು/ಆರ್ಯುಪಿಪಿಗಳ ಕಾರ್ಯಕ್ಷಮತೆ, ವಿಜೇತ ಅಭ್ಯರ್ಥಿಗಳ ವಿಶ್ಲೇಷಣೆ, ಕ್ಷೇತ್ರವಾರು ಸೇರಿದಂತೆ ವಿವರವಾದ ಫಲಿತಾಂಶಗಳು ಮತ್ತು ಇನ್ನೂ ಅನೇಕ ಆಳವಾದ ಒಳನೋಟಗಳು ಮತ್ತು ವಿಶ್ಲೇಷಣೆಗಳನ್ನು ನಡೆಸಲು ಸಿದ್ಧಪಡಿಸಲಾದ ಈ ದತ್ತಾಂಶವನ್ನು ಸಂಶೋಧಕರು, ನೀತಿ ನಿರೂಪಕರು ಮತ್ತು ಪತ್ರಕರ್ತರು ಈಗ ಬಳಸಿಕೊಳ್ಳಬಹುದಾಗಿದೆ.
2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆ ದತ್ತಾಂಶಗಳ ಸವಿವರವಾದ ವರದಿ ಮತ್ತು ಅಂಕಿ-ಅoಶಗಳನ್ನು ಭಾರತ ಚುನಾವಣಾ ಆಯೋಗದ https://www.eci.gov.in/statistical-reports ಲಿಂಕ್ ಮೂಲಕ ಪಡೆದುಕೊಳ್ಳಬಹುದಾಗಿದೆ.
ಹಿಂದಿನ ಚುನಾವಣೆಗಳಿಗೆ ಸಂಬoಧಿಸಿದoತೆ ಇದೇ ರೀತಿಯ ವಿವರವಾದ ದತ್ತಾಂಶಗಳು ಈಗಾಗಲೇ ಆಯೋಗದ ವೆಬ್‌ಸೈಟ್ ನಲ್ಲಿ ಲಭ್ಯವಿರುವುದರಿಂದ, ಈ ವರದಿಗಳು ಚುನಾವಣಾ ಮತ್ತು ರಾಜಕೀಯ ಕುರಿತು ದೀರ್ಘಾವಧಿಯ ದೃಷ್ಟಿಕೋನ ಮತ್ತು ಬದಲಾವಣೆಗಳನ್ನು ಹಾಗೂ ವಿಶ್ಲೇಷಣೆಗೆ ಸಹಕಾರಿಯಾಗುತ್ತದೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬoಧಿಸಿದ 42 ವರದಿಗಳ ಕೆಲವು ಮುಖ್ಯ ಅಂಶಗಳನ್ನು ವರದಿಯಲ್ಲಿ ಗಮನಿಸಬಹುದಾಗಿದೆ.
*ಮತದಾರರ ವಿವರ:*
ಲೋಕಸಭೆ ಚುನಾವಣೆ 2019 ರಲ್ಲಿ 91,19,50,734 ಕ್ಕೆ ಹೋಲಿಸಿದರೆ 2024 ರಲ್ಲಿ 97,97,51,847 ನೋಂದಾಯಿತ ಮತದಾರರಿದ್ದಾರೆ. 2019 ಕ್ಕಿಂತ 2024 ರಲ್ಲಿ ಒಟ್ಟು ಮತದಾರರಲ್ಲಿ ಶೇ.7.43 ಹೆಚ್ಚಳವಾಗಿದೆ. 2024 ರಲ್ಲಿ 64.64 ಕೋಟಿ ಮತಗಳು ಚಲಾವಣೆಯಾಗಿವೆ, 2019 ರಲ್ಲಿ 61.4 ಕೋಟಿ ಮತಗಳು ಚಲಾವಣೆಯಾಗಿದ್ದವು. ಇವಿಎಂ ಮತ್ತು ಅಂಚೆ ಮತಗಳು ಸೇರಿ 64,64,20,869 ಚಲಾವಣೆಯಾಗಿದ್ದವು. ಇದರಲ್ಲಿ 64,21,39,275 ಇವಿಎಂ ಮತಗಳು, 32,93,61,948 ಪುರುಷರು, 31,27,64,269 ಮಹಿಳೆಯರು, 13,058 ತೃತೀಯ ಲಿಂಗತ್ವ ಮತದಾರರ ಮತಗಳು ಚಲಾವಣೆಗೊಂಡಿದ್ದವು. ಹಾಗೂ 42,81,594 ಅಂಚೆ ಮತಪತ್ರಗಳು ಚಲಾವಣೆಯಾಗಿದ್ದವು.
ಅತಿ ಹೆಚ್ಚು ಮತದಾನ ಮಾಡಿರುವ ಲೋಕಸಭಾ ಕ್ಷೇತ್ರವು ಧುಬ್ರಿ (ಅಸ್ಸಾಂ) ಶೇ.92.3 ಮತ್ತು ಅತಿ ಕಡಿಮೆ ಮತದಾನ ಮಾಡಿರುವ ಲೋಕಸಭಾ ಕ್ಷೇತ್ರವು ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) ಶೇ.38.7 ಆಗಿತ್ತು, 2019 ರಲ್ಲಿ ಕೇವಲ ಶೇ.14.4 ರಷ್ಟಾಗಿತ್ತು.
ದೇಶದಲ್ಲಿ ಶೇ.50 ಕ್ಕಿಂತ ಕಡಿಮೆ ಮತದಾನ ಮಾಡಿರುವ ಲೋಕಸಭಾ ಕ್ಷೇತ್ರ ಸಂಖ್ಯೆ 11. 2024 ರಲ್ಲಿ ನೋಟಾಗೆ 63,71,839 (ಶೇ.0.99) ಮತಗಳು ಬಿದ್ದಿದ್ದು, 2019 ರಲ್ಲಿ ಇದು ಶೇ.1.06 ರಷ್ಟಿತ್ತು. ಲಿಂಗಪರಿವರ್ತಿತ ಮತದಾರರು (ತೃತೀಯ ಲಿಂಗಿಗಳು) ಶೇ.27.09 ರಷ್ಟು ಮತದಾನ ಮಾಡಿದ್ದಾರೆ.
*ಮತದಾನ ಕೇಂದ್ರಗಳು:*
2019 ರಲ್ಲಿ 10,37,848 ಕ್ಕೆ ಹೋಲಿಸಿದರೆ 2024 ರಲ್ಲಿ 10,52,664 ಮತಗಟ್ಟೆಗಳು ಸ್ಥಾಪಿಸಲಾಗಿತ್ತು. 40 ಮತಗಟ್ಟೆಗಳಲ್ಲಿ ಮಾತ್ರ ಮರು ಮತದಾನ ಮಾಡಲಾಗಿದೆ. 2019 ರಲ್ಲಿ 540 ಕ್ಕೆ ಹೋಲಿಸಿದರೆ ಮರು ಮತದಾನವಾದ ಒಟ್ಟು ಮತಗಟ್ಟೆಗಳು ಕೇವಲ ಶೇ.0.0038. ಒಂದು ಮತಗಟ್ಟೆಗೆ ಮತದಾರರ ಸರಾಸರಿ ಸಂಖ್ಯೆ 931 ಇರುತ್ತದೆ.
ಅತಿ ಹೆಚ್ಚು ಮತಗಟ್ಟೆ ಹೊಂದಿರುವ ರಾಜ್ಯ ಉತ್ತರ ಪ್ರದೇಶ (1,62,069) ಆಗಿದೆ. ಕಡಿಮೆ ಸಂಖ್ಯೆಯ ಮತಗಟ್ಟೆ ಹೊಂದಿರುವ ರಾಜ್ಯ ಲಕ್ಷದ್ವೀಪ (55 ಮತಗಟ್ಟೆ) ಆಗಿದೆ. 1000 ಗಿಂತ ಕಡಿಮೆ ಮತಗಟ್ಟೆ ಇರುವ ಸಂಸದೀಯ ಕ್ಷೇತ್ರಗಳ ಸಂಖ್ಯೆ 11. 3000 ಗಿಂತ ಹೆಚ್ಚಿನ ಮತಗಟ್ಟೆ ಇರುವ ಸಂಸದೀಯ ಕ್ಷೇತ್ರಗಳ ಸಂಖ್ಯೆ 3. 2019 ಕ್ಕೆ ಹೋಲಿಸಿದರೆ 2024 ರಲ್ಲಿ ಅತಿ ಹೆಚ್ಚು ಹೊಸ ಮತದಾನ ಕೇಂದ್ರಗಳನ್ನು ಹೊಂದಿರುವ ರಾಜ್ಯ ಬಿಹಾರ (4739 ಮತಗಟ್ಟೆಗಳು) ಆಗಿದೆ, ನಂತರ ಪಶ್ಚಿಮ ಬಂಗಾಳ (1731 ಮತಗಟ್ಟೆಗಳು).
*ನಾಮನಿರ್ದೇಶನಗಳು:*
2019 ರಲ್ಲಿ ಸಲ್ಲಿಕೆಯಾಗಿದ್ದ 11,692 ನಾಮಪತ್ರಗಳಿಗೆ ಹೋಲಿಸಿದರೆ 2024 ರಲ್ಲಿ 12,459 ನಾಮಪತ್ರಗಳು ಸಲ್ಲಿಕೆಯಾಗಿವೆ. ದೇಶದಲ್ಲಿಯೇ ಅತಿ ಹೆಚ್ಚು ನಾಮಪತ್ರಗಳನ್ನು ತೆಲಂಗಾಣ ಜಿಲ್ಲೆಯ ಮಲ್ಕಾಜ್‌ಗಿರಿ ಲೋಕಸಭಾ ಮತಕ್ಷೇತ್ರದಲ್ಲಿ 114 ನಾಮಪತ್ರಗಳು ಸ್ವೀಕೃತವಾಗಿದ್ದರೆ, ಆಸ್ಸಾಂ ರಾಜ್ಯದ ದಿಬ್ರುಗಡ್ ಲೋಕಸಭಾ ಕ್ಷೇತ್ರದಲ್ಲಿ 3 ನಾಮಪತ್ರಗಳು ಸಲ್ಲಿಕೆಯಾಗಿವೆ.
2024 ರ ಚುನಾವಣೆಗಳಲ್ಲಿ 8,360 ನಾಮಪತ್ರಗಳನ್ನು ತಿರಸ್ಕರಿಸಿದ ನಂತರ ಮತ್ತು ದೇಶಾದ್ಯಂತ ಸಲ್ಲಿಸಿದ ಒಟ್ಟು 12,459 ನಾಮಪತ್ರಗಳಿಂದ ಹಿಂತೆಗೆದುಕೊoಡ ನಂತರ ಸ್ಪರ್ಧಿಸುವ ಅಂತಿಮ ಅಭ್ಯರ್ಥಿಗಳಾಗಿ ಅರ್ಹತೆ ಪಡೆದರು. 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಂಖ್ಯೆ 8054.
*ಮಹಿಳಾ ಶಕ್ತಿ:*
ನೋಂದಾಯಿತ ಮತದಾರರು: 2024 ರ ಒಟ್ಟು ಮತದಾರರು 97,97,51,847 ರಲ್ಲಿ 47,63,11,240 ಮಹಿಳಾ ಮತದಾರರಿದ್ದರು. 2019 ರಲ್ಲಿ ಶೇ.48.09 ಒಟ್ಟು ಮಹಿಳಾ ಮತದಾರರು 43,85,37,911 ಗೆ ಹೋಲಿಸಿದರೆ 2024 ರಲ್ಲಿ ಶೇ.48.62 ಮಹಿಳಾ ಮತದಾರರು ಇದ್ದಾರೆ. 2024 ರಲ್ಲಿ ಅತಿ ಹೆಚ್ಚು ಮಹಿಳಾ ಮತದಾರರ ಪಾಲನ್ನು ಹೊಂದಿರುವ ರಾಜ್ಯ ಪುದುಚೇರಿ (ಶೇ.53.03 ರಷ್ಟು), ನಂತರ ಕೇರಳ (ಶೇ.51.56).
2024 ರಲ್ಲಿ, ಪ್ರತಿ 1000 ಪುರುಷ ಮತದಾರರಿಗೆ ಮಹಿಳಾ ಮತದಾರರ ಸಂಖ್ಯೆ ಹೊಸ ಗರಿಷ್ಠ ಅಂದರೆ 946. 2019 ರಲ್ಲಿ ಪ್ರತಿ ಸಾವಿರ ಪುರುಷರಿಗೆ 926 ಮಹಿಳಾ ಮತದಾರರಿದ್ದರು.
*ಮತದಾನ:*
ಶೇ.65.55 ಪುರುಷ ಮತದಾರರಿಗೆ ಹೋಲಿಸಿದರೆ ಶೇ.65.78 ಮಹಿಳಾ ಮತದಾರರು 2024 ರಲ್ಲಿ (ಸೂರತ್ ಹೊರತುಪಡಿಸಿ) ಮತ ಚಲಾಯಿಸಿದ್ದಾರೆ. 2019 ರಂತೆಯೇ 2024 ರಲ್ಲಿ ಮಹಿಳೆಯರ ಸಂಖ್ಯೆಯು ಪುರುಷರಿಗಿಂತ ಹೆಚ್ಚಾಗಿದೆ; ಸಾರ್ವತ್ರಿಕ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಇದು ಎರಡನೇ ಬಾರಿ.
ಮಹಿಳಾ ಮತದಾರರಲ್ಲಿ ಅತಿ ಹೆಚ್ಚು ವಿಟಿಆರ್ ಹೊಂದಿರುವ ಸಂಸದೀಯ ಕ್ಷೇತ್ರ ಶೇ.92.17, ಮಹಿಳಾ ಮತದಾನದೊಂದಿಗೆ ಧುಬ್ರಿ (ಅಸ್ಸಾಂ), ಶೇ.87.57 ರೊಂದಿಗೆ ತಮ್ಲುಕ್ (ಪಶ್ಚಿಮ ಬಂಗಾಳ) ನಂತರದ ಸ್ಥಾನದಲ್ಲಿದೆ.
*ಮಹಿಳಾ ಅಭ್ಯರ್ಥಿಗಳು:*
2019 ರಲ್ಲಿ 726 ಮಹಿಳಾ ಸ್ಪರ್ಧಿ ಅಭ್ಯರ್ಥಿಗಳಿಗೆ ಹೋಲಿಸಿದರೆ, 2024 ರಲ್ಲಿ ಮಹಿಳಾ ಸ್ಪರ್ಧಿ ಅಭ್ಯರ್ಥಿಗಳ ಸಂಖ್ಯೆ 800 ಆಗಿತ್ತು. ಅತಿ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಹೊಂದಿರುವ ರಾಜ್ಯ: ಮಹಾರಾಷ್ಟç [111] ನಂತರ ಉತ್ತರ ಪ್ರದೇಶ [80] ಮತ್ತು ತಮಿಳುನಾಡು[77]. ಎಲ್ಲಾ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಹೋಲಿಸಿದಲ್ಲಿ 152 ಲೋಕಸಭಾ ಕ್ಷೇತ್ರಗಳಲ್ಲಿ ಯಾವುದೇ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವುದಿಲ್ಲ.
*ಎಲ್ಲರನ್ನೂ ಒಳಗೊಳ್ಳುವ ಚುನಾವಣೆಗಳು:*
2019 ರಲ್ಲಿ 39,075 ಕ್ಕೆ ಹೋಲಿಸಿದರೆ 2024 ರಲ್ಲಿ 48,272 ತೃತೀಯ ಲಿಂಗ ಮತದಾರರನ್ನು ನೋಂದಾಯಿಸಲಾಗಿದೆ. ಐದು ವರ್ಷಗಳ ಅವಧಿಯಲ್ಲಿ ಶೇ.23.5 ರಷ್ಟು ಹೆಚ್ಚಳವಾಗಿದೆ. ಅತಿ ಹೆಚ್ಚು ನೋಂದಾಯಿತ ತೃತೀಯ ಲಿಂಗ ಮತದಾರರನ್ನು ಹೊಂದಿರುವ ರಾಜ್ಯ ತಮಿಳುನಾಡು (8,467). 2019 ರಲ್ಲಿ 61,67,482 ಗೆ ಹೋಲಿಸಿದರೆ 2024 ರಲ್ಲಿ 90,28,696 ನೋಂದಾಯಿತ ದಿವ್ಯಾಂಗ ಮತದಾರರಿದ್ದಾರೆ.
2019 ರಲ್ಲಿ ಶೇ.14.64 ಕ್ಕೆ ಹೋಲಿಸಿದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಶೇ.27.09 ತೃತೀಯ ಲಿಂಗ ಮತದಾರರು ಮತ ಚಲಾಯಿಸಿದ್ದಾರೆ-ಬಹುತೇಕ ದ್ವಿಗುಣವಾಗಿದೆ.
2019 ರಲ್ಲಿ 99,844 ನೋಂದಾಯಿತ ಸಾಗರೋತ್ತರ ಮತದಾರರಿಗೆ ಹೋಲಿಸಿದರೆ 2024 ರಲ್ಲಿ 1,19,374 ನೋಂದಾಯಿತ ಸಾಗರೋತ್ತರ ಮತದಾರರು [ಪುರುಷ: 1,06,411; ಮಹಿಳೆ: 12,950; ಮೂರನೇ ಲಿಂಗ: 13].
*ಫಲಿತಾಂಶಗಳು:*
2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಒಟ್ಟು 6 ರಾಷ್ಟಿçÃಯ ಪಕ್ಷಗಳು ಭಾಗವಹಿಸಿದ್ದವು. ಈ 6 ಪಕ್ಷಗಳ ಒಟ್ಟು ಮತ ಹಂಚಿಕೆಯು ಒಟ್ಟು ಮಾನ್ಯ ಮತಗಳ ಶೇ.63.35 ಆಗಿತ್ತು. 2019 ರಲ್ಲಿ 6923 ಅಭ್ಯರ್ಥಿಗಳಿಗೆ ಹೋಲಿಸಿದರೆ 2024 ರ ಚುನಾವಣೆಯಲ್ಲಿ 7190 ಅಭ್ಯರ್ಥಿಗಳು ಠೇವಣಿಗಳನ್ನು ಕಳೆದುಕೊಂಡಿದ್ದರು. ಒಂದು ಲೋಕಸಭಾ ಕ್ಷೇತ್ರ -ಸೂರತ್ (ಗುಜರಾತ್) ಅವಿರೋಧವಾಗಿತ್ತು.
ಒಟ್ಟು 3921 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 7 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. ಅದರಲ್ಲಿ 3905 ಸ್ವತಂತ್ರ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತ ಹಂಚಿಕೆ ಒಟ್ಟು ಮಾನ್ಯ ಮತಗಳಲ್ಲಿ ಶೇ.2.79 ಆಗಿತ್ತು. 279 ಸ್ವತಂತ್ರ ಮಹಿಳಾ ಅಭ್ಯರ್ಥಿಗಳಿದ್ದರು.
ಪ್ರತಿ ದತ್ತಾಂಶಗಳ ಸವಿವರವಾದ ವರದಿ ಮತ್ತು ಅಂಕಿ-ಅ0ಶಗಳನ್ನು ಭಾರತ ಚುನಾವಣಾ ಆಯೋಗದ ಲಿಂಕ್ https://www.eci.gov.in/statistical-reports ನಲ್ಲಿ ಪಡೆದುಕೊಳ್ಳಬಹುದು ಎಂದು ಭಾರತ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
Share This Article
error: Content is protected !!
";