ರಾಯಚೂರು ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ,& ಪ್ರಥಮ ಸೆಮಿಸ್ಟರ್ ಡಿಪ್ಲೋಮ ಪ್ರವೇಶಾತಿಗೆ ದಿನಾಂಕ ವಿಸ್ತರಣೆ

Vijayanagara Vani
ರಾಯಚೂರು ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ,& ಪ್ರಥಮ ಸೆಮಿಸ್ಟರ್ ಡಿಪ್ಲೋಮ ಪ್ರವೇಶಾತಿಗೆ ದಿನಾಂಕ ವಿಸ್ತರಣೆ

ಗಬ್ಬೂರು ಮೌಲಾನಾ ಆಜಾದ ಶಾಲೆ: ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಜೂ.18ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಮೌಲಾನಾ ಆಜಾದ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವಿಧ ವಿಷಯಗಳ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.     

ಆಸಕ್ತರು ಕನ್ನಡ ವಿಷಯ-01, ಇಂಗ್ಲೀಷ ವಿಷಯ-01, ಉರ್ದು ಅಥವಾ ಹಿಂದಿ ವಿಷಯ-01, ಗಣಿತ  ವಿಷಯ-01, ಸಾಮಾನ್ಯ ವಿಜ್ಞಾನ ವಿಷಯ-01, ಸಮಾಜ ವಿಜ್ಞಾನ ವಿಷಯ-01 ಅತಿಥಿ ಶಿಕ್ಷಕರ ಹುದ್ದೆಗಳ ಖಾಲಿಯಿದ್ದು, ಜೂನ್.24ರೊಳಗಾಗಿ ಅಗತ್ಯ ದಾಖಲಾತಿಗಳು ಹಾಗೂ ಸ್ವ-ವಿವರದೊಂದಿಗೆ ಅರ್ಜಿಯನ್ನು ಶಾಲೆಯ ಮುಖ್ಯಗುರುಗಳಿಗೆ ಸಲ್ಲಿಸಬಹುದಾಗಿದೆ.  

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9945121187ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಗಬ್ಬೂರು ಮೌಲಾನ ಆಜಾದ ಮಾದರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ದೇವದುರ್ಗದ ಪಾಲಿಟೆಕ್ನಿಕ್ ಕಾಲೇಜ್: ಪ್ರಥಮ ಸೆಮಿಸ್ಟರ್ ಡಿಪ್ಲೋಮ ಪ್ರವೇಶಾತಿಗೆ ದಿನಾಂಕ ವಿಸ್ತರಣೆ

ರಾಯಚೂರು:- ಜಿಲ್ಲೆಯ ದೇವದುರ್ಗದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2024-25ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮ ಕೋರ್ಸಿಗೆ ಪ್ರವೇಶಾತಿ ದಿನಾಂಕವನ್ನು ಪುನರ್ ವಿಸ್ತರಿಸಲಾಗಿದ್ದು, ಆರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ದೇವದುರ್ಗದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿoಗ್, ಮೆಕ್ಯಾನಿಕಲ್ ಇಂಜಿನಿಯರಿoಗ್, ಎಲೆಕ್ಟಾçನಿಕ್ಸ್ ಆ್ಯಂಡ್ ಕಮುನಿಕೇಷನ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳ ಲಭ್ಯವಿದ್ದು, ಆಸಕ್ತರು ಜೂ.29ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9448842465ಗೆ ಸಂಪರ್ಕ ಮಾಡಬಹುದಾಗಿದೆ ಎಂದು ದೇವದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಟಿ.ಶಿವಕುಮಾರ ಅವರು ಪ್ರಕಟಣೆಯಲಿ

WhatsApp Group Join Now
Telegram Group Join Now
Share This Article
error: Content is protected !!