ಸಿರುಗುಪ್ಪ.ಆ.05:- ತಾಲೂಕಿನ ಕುಡುದರಹಾಳು ಗ್ರಾಮದ ಸಮೀಪ ಸರ್ಕಾರಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಸರಿಣಾಮ ಸ್ಥಳದಲ್ಲಿಯೇ ದಂಪತಿಗಳು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ಮೊಮ್ಮಲಾಪುರ ಗ್ರಾಮದ ನಾಗಭೂಷಣ (35), ಸಂಧ್ಯಾ (32) ಮೃತ ದುದೈವಿ ದಂಪತಿಗಳಾಗಿದ್ದು, ಸ್ವಗ್ರಾಮ ಬೊಮ್ಮಲಾಪುರದಿಂದ ಕುಡುದರಹಾಳು ಮಾರ್ಗವಾಗಿ ಸಿರುಗುಪ್ಪಕ್ಕೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸಿರುಗುಪ್ಪ ಸಾರಿಗೆ ಡಿಪೋದ ಕೆಎ-34, ಎಫ್-1115 ಬಸ್ ನಾಡಂಗದಿAದ ಕುಡುದರಹಾಳು ಮಾರ್ಗವಾಗಿ ಸಿರುಗುಪ್ಪಕ್ಕೆ ಬರುವ ಸಂದರ್ಭದಲ್ಲಿ ಬೈಕ್ ಸವಾರ ಬಸ್‌ನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಆಯತಪ್ಪಿ ಬಸ್‌ನ ಗಾಲಿಗೆ ಸಿಲುಕಿ ಗಂಡ, ಹೆಂಡತಿ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಡಿವೈಎಸ್‌ಪಿ ಸಂತೋಷ್ ಚೌವ್ಹಾಣ್ ಬೇಟಿನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಂಡರು ಈ ಬಗ್ಗೆ ಹಚ್ಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ಗೆ ಬಸ್‌ಡಿಕ್ಕಿ ದಂಪತಿಗಳ ಸಾವು:
