Ad image

ಸೋಲು ಜೀವನದ ಅಂತ್ಯವಲ್ಲ- ಡಾ.ಮಧುಸೂದನ ಕಾರಿಗನೂರು

Vijayanagara Vani
ಸೋಲು ಜೀವನದ ಅಂತ್ಯವಲ್ಲ- ಡಾ.ಮಧುಸೂದನ ಕಾರಿಗನೂರು

ದಿನಾಂಕ 18-12-24 ರಂದು ಸಿರುಗುಪ್ಪದ ರಾಜೀವ್ ಗಾಂಧಿ ಮೆಮೋರಿಯಲ್ ವಿದ್ಯಾಸಂಸ್ಥೆಯಲ್ಲಿ ಸೃಜನಾ ಫೌಂಡೇಶನ್ ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ ನಡೆಸಲಾದ ಪ್ರೇರಣಾ ತರಗತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೃಜನಾ ಫೌಂಡೇಶನ್ ಅಧ್ಯಕ್ಷರಾದ ಡಾ.ಮಧುಸೂದನ ಕಾರಿಗನೂರು ಇವರು ಮಕ್ಕಳಿಗೆ ನೆನಪಿಗೆ ವ್ಯಾಯಾಮ ಹಾಗೂ ಸೋತು ಗೆದ್ದ ಸಾಧಕರ ಜೀವನದ ಬಗ್ಗೆ ಉಪನ್ಯಾಸ ನೀಡಿದರು.
ಎಡಮೆದುಳನ್ನು ಒರೆಗೆ ಹಚ್ಚಿ ನೆನಪಿನ ಪುಟಗಳನ್ನು ಹೆಚ್ಚುಮಾಡಿಕೊಳ್ಳುವ ಹಲವಾರು ವ್ಯಾಯಾಮಗಳನ್ನು ಪ್ರೊಜೆಕ್ಟರ್ ಚಿತ್ರಗಳ ಮೂಲಕ ಮಕ್ಕಳಿಗೆ ತೋರಿಸಿ ವಿನೋದದ ಮೂಲಕವೇ ಮೆದುಳನ್ನು ಚುರುಕುಗೊಳಿಸುವ ಸುಲಭ ವಿಧಾನಗಳನ್ನು ತಿಳಿಸಿದರು.

- Advertisement -
Ad imageAd image


ಹಾಗೆಯೇ ಜೀವನದಲ್ಲಿ ಸೋಲು ಸಾಮಾನ್ಯ. ತಮಗೆ ಎದುರಾದ ಎಲ್ಲ ಋಣಾತ್ಮಕ ಸನ್ನಿವೇಶಗಳನ್ನು ಧನಾತ್ಮಕವಾಗಿ ಬದಲಾಯಿಸಿಕೊಂಡು ಯಶಸ್ವಿಗಳಾಗಿರುವ ಹಲವಾರು ಸಾಧಕರ ಏಳು ಬೀಳುಗಳನ್ನು ರಸಪ್ರಶ್ನೆ ರೂಪದಲ್ಲಿ ವಿದ್ಯಾರ್ಥಿಗಳಿಗೆ ವಿವರಿಸಿದರು.
ಐಸಕ್ ನ್ಯೂಟನ್, ಸರ್.ಆಲ್ಬರ್ಟ್ ಐನ್ಸ್ಟೀನ್, ಎ.ಪಿ.ಜೆ. ಅಬ್ದುಲ್ ಕಲಾಂ, ರವಿಂದ್ರನಾಥ್ ಟಾಗೋರ್, ಡಿ.ವಿ. ಗುಂಡಪ್ಪನವರು , ಚಾರ್ಲಿ ಚಾಪ್ಲಿನ್ , ಅಮಿತಾಬಚ್ಚನ್ ಮುಂತಾದ ಯಶಸ್ವೀ ವ್ಯಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ಸೋಲನ್ನು ಅನುಭವಿಸಿದವರೇ ಎಂದು ಹೇಳಿದರು. ಹಾಗೆಯೇ ಯಶಸ್ಸು ನಮ್ಮ ಹತ್ತಿರವೇ ಸುಳಿಯುತ್ತಿರುತ್ತದೆ. ಅದನ್ನು ಹುಡುಕುವ ಕಣ್ಣಿರಬೇಕು ಎಂದು ಹೇಳುತ್ತಾ ವಿಭಿನ್ನರೀತಿಯಲ್ಲಿ ಆಲೋಚಿಸಿದರೆ ಅದು ಸುಲಭವಾಗಿ ದಕ್ಕುತ್ತದೆ ಎಂದು ತಿಳಿಸಿದರು

Share This Article
error: Content is protected !!
";