Ad image

ಅಕ್ಟೋಬರ್. 29 ರಿಂದ 31 ರವರೆಗೆ ಕೊಪ್ಪಳ ಜಿಲ್ಲೆಗೆ ಉಪ ಲೋಕಾಯುಕ್ತರ ಭೇಟಿ, ಹೆಚ್ಚಿನ ಪ್ರಚಾರ ನೀಡಿ- ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ

Vijayanagara Vani
ಅಕ್ಟೋಬರ್. 29 ರಿಂದ 31 ರವರೆಗೆ ಕೊಪ್ಪಳ ಜಿಲ್ಲೆಗೆ ಉಪ ಲೋಕಾಯುಕ್ತರ ಭೇಟಿ, ಹೆಚ್ಚಿನ ಪ್ರಚಾರ ನೀಡಿ- ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ

ಕೊಪ್ಪಳ ಅಕ್ಟೋಬರ್ 10  ಅಕ್ಟೋಬರ್ 29. ರಿಂದ 31 ರವರೆಗೆ ನಾವು ಕೊಪ್ಪಳ ಜಿಲ್ಲೆಗೆ ಭೇಟಿ ನೀಡುತ್ತಿರುವ ಮಾಹಿತಿಯನ್ನು ಸ್ಥಳೀಯವಾಗಿ ಆಯಾ ತಾಲ್ಲೂಕಿನ ತಹಶೀಲ್ದಾರರು ಮತ್ತು ಗ್ರಾಮ ಪಂಚಾಯತಿ ಹಂತದಲ್ಲಿ ಹೆಚ್ಚಿನ ಪ್ರಚಾರ ಮಾಡಿ ಈ ಮಾಹಿತಿ ಜನರಿಗೆ ತಿಳಿಯುವಂತಾಗಬೇಕೆAದು ಗೌರವಾನ್ವಿತ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.
ಅವರು ಗುರುವಾರ ಲೋಕಾಯುಕ್ತ ಕಚೇರಿ ಬೆಂಗಳೂರಿನಿಂದ ಕೊಪ್ಪಳ ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ಲೋಕಾಯುಕ್ತ ಕಛೇರಿಯಲ್ಲಿ ಕೊಪ್ಪಳ ಜಿಲ್ಲೆಯ 105 ಕೇಸಗಳು ಪೆಂಡಿಂಗ್ ಇವೆ. ಕಂದಾಯ ಇಲಾಖೆ, ತಹಶಿಲ್ದಾರರು, ಸಹಾಯಕ ಆಯುಕ್ತರು ಸೇರಿದಂತೆ ಎಲ್ಲಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಅವುಗಳನ್ನು ಕ್ಲಿಯರ್ ಆಗಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಮಾತ್ರೆಗಳು ಸಿಗದಿದ್ದರೆ ಹೊರಗಡೆ ಬರೆದು ಕೊಡುತ್ತಾರೆ, ಹಾಗೆ ಆಗಭಾರದು. ಆಸ್ಪತ್ರೆಯಲ್ಲಿ ಔಷಧಿಗಳನ್ನು ಕೊಡಬೇಕು. ಕೆಲವು ವೈದ್ಯರು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಅಂಬುಲೆನ್ಸ್ ಇವೆಯಾ. ಜಿಲ್ಲೆಯಲ್ಲಿ ಎಷ್ಟು ನಕಲಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಪಟ್ಟಿ ಮಾಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸರಿಯಾಗಿ ಆಹಾರ ವಿತರಿಸುವುದರ ಜೊತೆಗೆ ಸ್ವಚ್ಚತೆ ಇರುವಂತೆ ನೋಡಿಕೊಳ್ಳಬೇಕು. ಶಿಕ್ಷಣ ಇಲಾಖೆಯಲ್ಲಿ ಶಾಲೆಯ ಎಷ್ಟು ಕಟ್ಟಡಗಳು ಮಳೆಯಿಂದ ಬಿದ್ದು ಹೋಗಿವೆ. ನಗರಸಭೆಯವರು ಎಷ್ಟು ಖಾಸಗಿ ಭೂಮಿ ಅತಿಕ್ರಮಣ ಆಗಿದೆ ಎನ್ನುವುದರ ಮಾಹಿತಿ ನೀಡಬೇಕು. ಆಹಾರ ಸುರಕ್ಷತೆಯ ಅಧಿಕಾರಿಗಳು ಹೋಟೆಲ ಮತ್ತು ರಸ್ತೆಯ ಪಕ್ಕದಲ್ಲಿ ಆಹಾರ ತೈಯಾರಿಸುವವರು ಜನರು ತಿನ್ನುವ ಆಹಾರದಲ್ಲಿ ಕಲರ್ ಹಾಕುತ್ತಾರೆ ಅದೆಲ್ಲವನ್ನು ಹಾಕಬಾರದು ಇದನ್ನು ಎಲ್ಲಾ ಕಡೆ ಹೋಗಿ ಪರಿಶೀಲನೆ ಮಾಡಬೇಕೆಂದು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹೇಳಿದರು.
ಕೆಲವೊಂದು ಗ್ರಾಮ ಪಂಚಾಯತಿಗಳಲ್ಲಿ ಸರಿಯಾದ ದಾಖಲೆಗಳನ್ನು ನಿರ್ವಹಿಸುತ್ತಿಲ್ಲ. ಒಂದು ಬೋರವೆಲ್ ವರ್ಷದಲ್ಲಿ ಎಷ್ಟು ಸಲ ಕೆಡಬಹುದು ಆದರೆ ಇವರು ತಿಂಗಳಲ್ಲಿ ಎರಡು ಸಲ ಕೆಟ್ಟಿದೆ ಎಂದು ಅನಾವಶ್ಯಕವಾಗಿ ಬಿಲ್ಲುಮಾಡಿ ದುಡ್ಡು ಹೊಡೆಯುವ ಮೂಲಕ ಪಿಡಿಒ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿ ಜನರು ಕಟ್ಟಿದ ತೆರಿಗೆಯಲ್ಲಿ ಇವರು ಹಗಲು ದರೋಡೆ ಮಾಡುತ್ತಾರೆ. ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸಾರ್ವಜನಿಕರ ಪ್ರತಿ ನಿಧಿಗಳು. ಈ ಕುರಿತು ಮಾಹಿತಿ ಪಡೆಯುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರಣ್ಯ ಇಲಾಖೆಯ ಸರಕಾರಿ ಭೂಮಿ ಜಿಲ್ಲೆಯಲ್ಲಿ ಎಷ್ಟು ಒತ್ತುವರಿಯಾಗಿದೆ. ಜಿಲ್ಲೆಯಲ್ಲಿ ಎಷ್ಟು ಫ್ಯಾಕ್ಟರಿಗಳು, ಕ್ವಾರಿ, ಗಣಿಗಳಿವೆ, ಇದರಲ್ಲಿ ಲೀಗಲ್, ಇಲ್ಲಿಗಲ್ ಎಷ್ಟಿವೆ. ಜಿಲ್ಲೆಯಲ್ಲಿ ಎಷ್ಟು ವಾಹನಗಳಿವೆ ಎನ್ನುವುದರ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಬೇಕು. ಕೃಷಿ ಇಲಾಖೆಯಲ್ಲಿ ಜನರು ಅರ್ಜಿ ಹಾಕಿದವರಿಗೆ ಲೋನ ಕೊಡಲ್ಲ. ಅರ್ಜಿ ಹಾಕದವರಿಗೆ ಲೋನ ಕೊಡುತ್ತಿರಾ. ಬೆಳೆ ಪರಿಹಾರವನ್ನು ಹಾಗೆ ಮಾಡುತ್ತಿರಾ, ಬೆಳೆ ಹಾಳಾದವರಿಗೆ ಪರಿಹಾರ ಬಂದಿರುವುದಿಲ್ಲ. ಆದರೆ ಪಕ್ಕದ ಹೊಲದವರಿಗೆ ಪರಿಹಾರ ಬಂದಿರುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಕಾರ್ಮಿಕ ಇಲಾಖೆಯಿಂದ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಲೇಬರ್ ಕಾರ್ಡ ವಿತರಿಸಿದ್ದಿರಾ. ಎಷ್ಟು ಜನ ಕಾರ್ಮಿಕರಿದ್ದಾರೆ. ಅವರಿಗೆ ಇಎಸ್‌ಐ ಮತ್ತು ಪಿ.ಎಫ್ ಮಾಡಿಸಲಾಗಿದೆಯಾ. ಅವರಿಗೆ ಇನ್ಸೂರೆನ್ಸ್ ಸಹ ಮಾಡಿಸಬೇಕು. ಎಪಿಎಂಸಿ ಹಮಾಲರಿಗೂ ಇನ್ಸೂರೆನ್ಸ ಮಾಡಿಸಿ ಎಂದು ಕಾರ್ಮಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೊಲೀಸರು ಸಿವಿಲ್ ಡಿಸಪ್ಯೂಟಗಳಲ್ಲಿ ಎಂಟರ್ ಆಗುತ್ತಾರೆ, ಅವರಿಗೆ ಇದರಲ್ಲಿ ಭಾಗಿಯಾಗದಂತೆ ನಿರ್ದೆಶನ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೇಳಿದರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕುರಿತು ಎಲ್ಲಾ ಅಧಿಕಾರಿಗಳನ್ನು ಕರೆಸಿ ಮತ್ತೆ ಸಭೆ ಮಾಡಿ ಯಾವುದೇ ಕೇಸಗಳನ್ನು ಕೊಪ್ಪಳ ಜಿಲ್ಲೆಯಲ್ಲಿ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು ಮತ್ತು ಈ ಕುರಿತು ಹೆಚ್ಚಿನ ಪ್ರಚಾರ ನೀಡಬೇಕೆಂದು ಹೇಳಿದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿAದ ವಿಡಿಯೋ ಸಂವಾದಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, ಜಿಲ್ಲೆಯಿಂದ ತಮ್ಮಲ್ಲಿ ದಾಖಲಾದ 105 ಕೇಸಗಳನ್ನು ಪೆಂಡಿಂಗ್ ಉಳಿಯದಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇತರೆ ಎಲ್ಲಾ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೆವೆ ಹಾಗೂ ತಾವು ಅಕ್ಟೋಬರ್ 29 ರಿಂದ 31 ರವರೆಗೆ ಜಿಲ್ಲೆಗೆ ಆಗಮಿಸುವ ಮಾಹಿತಿಯನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಲಾಗುವುದು ಎಂದು ಹೇಳಿದರು.
ಈ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಜಿಲ್ಲಾ ಪಂಚಾಯತ ನೋಜನಾ ನಿರ್ದೆಶಕ ಪ್ರಕಾಶ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಅಜ್ಜಪ್ಪ ಸೊಗಲದ ಸೇರಿದಂತೆ ಜಿಲ್ಲಾ ಮಟ್ಟದ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
error: Content is protected !!
";