ಧಾರವಾಡ ಮೇ.20: ಅಣ್ಣಿಗೇರಿಯ ನಿವಾಸಿ ಪಿ.ಎಷ್. ರಜಪುತ ಇವರು ಹುಬ್ಬಳ್ಳಿ-ಧಾರವಾಡದಲ್ಲಿ ಕೆಂಪು ಮೆನಸಿನಕಾಯಿ ವ್ಯಾಪಾರ ಮಾಡುತ್ತಿದ್ದರು. 2017 ರಲ್ಲಿ ಖರೀದಿಸಿದ ಕೆಂಪು ಮೆನಸಿನಕಾಯಿಗಳನ್ನು ಅಣ್ಣಿಗೇರಿಯ ಉಗ್ರಾಣದಲ್ಲಿ ಬಾಡಿಗೆ ಪಡೆದು ಕಾಯ್ದಿರಿಸಿದ್ದರು. ದೂರುದಾರರು ಅವುಗಳ ಮೇಲೆ ಕೆನರಾ ಬ್ಯಾಂಕಿನಲ್ಲಿ ರೂ.12,90,000 ಲೋನ್ನ್ನು ಪಡೆದಿದ್ದರು. ಲೋನ್ ನಿಯಮದಂತೆ ದೂರುದಾರರು ಕಂತಿನ ಹಣ ತುಂಬದೇ ಅವರ ಖಾತೆಯನ್ನು ಎನ್.ಪಿ.ಎ ಮಾಡಿದ್ದರು. ಇದನ್ನು ಪ್ರಶ್ನಿಸಿ ದೂರುದಾರರು ತಾನು ಇಟ್ಟಂತಹ ಕೆಂಪು ಮೆನಸಿನಕಾಯಿಯ ಮೊತ್ತ ಅಂದಾಜು ರೂ.42 ಲಕ್ಷ ಇದ್ದು ಅದನ್ನು ಸರಿಪಡಿಸಿಕೊಳ್ಳದೇ ತನ್ನ ಖಾತೆಯನ್ನು ಎನ್.ಪಿ.ಎ ಮಾಡಿರುವುದನ್ನು ಪ್ರಶ್ನಿಸಿ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ಆಯೋಗ ದೂರುದಾರರು ಉಗ್ರಾಣದ ಬಾಡಿಗೆ ಹಣವನ್ನು ತುಂಬಿರಲಿಲ್ಲ. ಕೊನೆಗೆ ಉಗ್ರಾಣದ ಸಿಬ್ಬಂದಿ ನೋಟಿಸ್ ನೀಡಿ ಅವರು ಇಟ್ಟಂತಹ ಕೆಂಪು ಮೆನಸಿನಕಾಯಿಯನ್ನು ಹರಾಜಿಗೆ ಹಚ್ಚಿ ತಮ್ಮ ಬಾಡಿಗೆ ಹಣವನ್ನು ಪಡೆದಿರುತ್ತಾರೆ. ಆದರೆ ದೂರುದಾರರು ಬ್ಯಾಂಕಿನಿಂದ ಪಡೆದಂತಹ ಸಾಲಕ್ಕೆ ಕಂತನ್ನು ತುಂಬದೇ ಇದ್ದ ಕಾರಣ ಅವರ ಖಾತೆಯನ್ನು ಎನ್.ಪಿ.ಎ ಮಾಡಿರುವುದು ಸರಿ ಅಂತಾ ಆಯೋಗ ಅಭಿಪ್ರಾಯಪಟ್ಟಿದೆ. ಅಲ್ಲದೇ ಬ್ಯಾಂಕಿಗೆ ಮೋಸ ಮಾಡುವದುರುದ್ದೇಶದಿಂದ ಈ ರೀತಿ ಸುಳ್ಳು ದೂರನ್ನು ದಾಖಲಿಸಿರುವುದು ಕಂಡು ಬರುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು, ದೂರು ದಾಖಲಿಸಿದ ಫಿರ್ಯಾದಿ ಕೆನರಾ ಬ್ಯಾಂಕಿಗೆ ರೂ.25,000 ಗಳ ದಂಡವನ್ನು ಖರ್ಚಿನ ಪರಿಹಾರವಾಗಿ ನೀಡುವಂತೆ ಆದೇಶಿಸಿ ಅವರ ದೂರನ್ನು ವಜಾ ಮಾಡಿ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ ಅ. ಬೋಳಶೆಟ್ಟಿ ಮಹಿಳಾ ಸದಸ್ಯರು ತೀರ್ಪು ನೀಡಿದ್ದಾರೆ