ರಾಯಚೂರು,ಜೂ.07- ಪ್ರಸ್ತುತ ರಾಯಚೂರು ಜಿಲ್ಲ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮಿನ ಚಟುವಟಿಕೆಗಳು ಚುರುಕು ಗೊಂಡಿರುತ್ತವೆ, ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ನೀಡಲಾದ ಬೀಜಗಳನ್ನು ದಾಸ್ತಾನೀಕರಿಸಿದ್ದು, ಅವುಗಳ ವಿತರಣೆ ನಡೆದಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 1,53,096 ಹೆಕ್ಟರ್ ಹತ್ತಿ ಬೆಳೆಯುವ ಸಮೀಕ್ಷೆಯಿದ್ದು, ಬಿ.ಟಿ ಹತ್ತಿ ಬೀಜಗಳ ಮಾರುಕಟ್ಟೆಗೆ ಸಂಬAಧಿಸಿದAತೆ ಗುಣ ನಿಯಂತ್ರಣ ಕಾರ್ಯಕ್ರಮದಡಿ ಮಾರಾಟ ಮಳಿಗೆಗಳ ಪರಿಶೀಲನೆ, ವಿಶ್ಲೇಷಣೆಗಾಗಿ ಮಾದರಿ ಸಂಗ್ರಹಣೆ ಹಾಗೂ ನಿಗಧಿತ ದರಗಳಲ್ಲಿ ಕೃಷಿ ಪರಿಕರಗಳನ್ನು ರೈತರಿಗೆ ತಲುಪಿಸುವಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈಗಾಗಲೇ ರಾಯಚೂರು ಜಿಲ್ಲೆಯಿಂದ 34 ಹತ್ತಿ ಬೀಜಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಕಳುಹಿಸಿಕೊಡಲಾಗಿರುತ್ತದೆ. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಬಗ್ಗೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿAದ ಜಾಗೃತಿ ಕಾರ್ಯಕ್ರಮಗಳು ಹಾಗೂ ಗಡಿ ಭಾಗಗಳಲ್ಲಿರುವ ನಮ್ಮ ವ್ಯಾಪ್ತಿಯ ಹಳ್ಳಿಗಳಲ್ಲಿ ಲೂಸ್ ಹತ್ತಿ ಬೀಜಗಳ ಸಾಗಾಣಿಕೆ ಹಾಗೂ ಅಂತಹ ಬೀಜಗಳನ್ನು ರೈತರು ಉಪಯೋಗಿಸದೇ, ಅಧಿಕೃತ ಮಾರಾಟಗಾರರಿಂದ ಬೀಜಗಳನ್ನು ಖರೀದಿಸಿಬೇಕೆಂದು ರೈತರಿಗೆ ತರಬೇತಿಗಳ ಮುಖಾಂತರ ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.