ಧಾರವಾಡ ಫೆ.25:
ಜಿಲ್ಲೆಯಲ್ಲಿ ಇಂದಿನಿಂದ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವಸಿದ್ದತಾ ಪರೀಕ್ಷೆಗಳು ಆರಂಭವಾಗಿದ್ದು, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಬೆಳಿಗ್ಗೆ ಧಾರವಾಡ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಪ್ರಜಂಟೇಶನ್ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲಾ ಪರೀಕ್ಷೆ ಕೇಂದ್ರಕ್ಕೆ ತೆರಳಿ ಪರೀಕ್ಷಾ ಕೊಠಡಿ, ಸಿಸಿಟಿವಿ ವ್ಯವಸ್ಥೆ ಪರಿಶೀಲಿಸಿದರು. ಇಂದು ಮೊದಲ ದಿನದ ಪರೀಕ್ಷೆ ಆಗಿದ್ದು, ಭಾಷಾ ವಿಷಯದ ಪರೀಕ್ಷೆ ಇದೆ. ಎಸ್.ಎಸ್.ಎಲ್.ಸಿ ಪ್ರಶ್ನೆಪತ್ರಿಕೆ ಕಠಿಣತೆ, ವಿದ್ಯಾರ್ಥಿಗಳ ಸ್ಪಂದನೆ, ಬರವಣೆಗೆ ನೋಡಿ, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
ಪ್ರಜಂಟೇಶನ್ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿಗೆ 297 ವಿದ್ಯಾರ್ಥಿಗಳು ನೋಂದಾಯತರಾಗಿದ್ದಾರೆ. ವಾರ್ಷಿಕ ಪರೀಕ್ಷೆಗೆ ಸೆಂಟ್ ಜೋಷಫ್, ಯುಪಿಎಸ್.ಸಿ, ಒ್ರೌಢಶಾಲೆ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈ ಕೇಂದ್ರಕ್ಕೆ ಹಾಜರಾಗುತ್ತಾರೆ.
ಪರೀಕ್ಷಾ ಹಾಲ್ ದಲ್ಲಿ ವಿದ್ಯಾರ್ಥಿಗಳು ನಿರ್ಭಯವಾಗಿ, ಯಾವುದೇ ಗೊಂದಲಗಳಿಲ್ಲದೆ ಪರೀಕ್ಷೆ ಬರೆಯುತ್ತಿರುವುದನ್ನು ವಿವಿಧ ಕೊಠಡಿಗಳಿಗೆ ತೆರಳಿ ಖಚಿತ ಪಡಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರಜಂಟೇಶನ್ ಪ್ರೌಢಶಾಲೆ ಮುಖ್ಯೋಪಾಧ್ಯಯರಾದ ಸಿಸ್ಟರ್ ಶಾಲ್ಲಿ ಬಿ.ಎಸ್, ಪರೀಕ್ಷಾ ಅಧೀಕ್ಷಕರ ಎನ್.ಎನ್.ಭಟ್ಟ ಹಾಗೂ ಶಿಕ್ಷಕರು, ಸಿಬ್ಬಂದಿಗಳು ಇದ್ದರು.
ನಂತರ ಜಿಲ್ಲಾಧಿಕಾರಿಗಳು ಗಾಂಧಿ ನಗರ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಎಸ್.ಎಸ್.ಎಲ್.ಸಿ. ಪೂರ್ವಸಿದ್ದತಾ ಪರೀಕ್ಷೆಗಳನ್ನು ಪರಿಶೀಲಿಸಿದರು.