Ad image

ಸೇವಾ ನ್ಯೂನ್ಯತೆ ಎಸಗಿದ ಬೆಂಗಳೂರಿನ ದಿಶಾ ಎಂಟರ್ ಪ್ರೈಸಸ್‍ಗೆ ರೂ.5,93,754/- ದಂಡ ಮತ್ತು ಪರಿಹಾರ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

Vijayanagara Vani
ಸೇವಾ ನ್ಯೂನ್ಯತೆ ಎಸಗಿದ ಬೆಂಗಳೂರಿನ ದಿಶಾ ಎಂಟರ್ ಪ್ರೈಸಸ್‍ಗೆ ರೂ.5,93,754/- ದಂಡ ಮತ್ತು ಪರಿಹಾರ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

 

- Advertisement -
Ad imageAd image

ಧಾರವಾಡ ಸೆ 25: ಹುಬ್ಬಳ್ಳಿಯ ಶ್ರೇಯಾ ನಗರ ವಾಸಿ ಮೆ/ಎಸ್ ಶಿವಸಾಗರ ಟ್ರೇಡರ್ಸನ ಮಾಲೀಕರಾದ ನಿವೇದಿತಾ ಆಡೂರ ಅವರು ತಾವು ಹುಬ್ಬಳ್ಳಿಯಲ್ಲಿ ಅಗರಬತ್ತಿ ತಯಾರಿಸುವ ಉದ್ಯೋಗ ಮಾಡುತ್ತಿದ್ದು ಆ ಅಗರಬತ್ತಿಗಳನ್ನು ಇತರರಿಗೆ ಮಾರಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಹೀಗಿರುವಾಗ ಜುಲೈ 2021-22ರಲ್ಲಿ ತಾವು ತಯಾರಿಸಿದ ಅಗರಬತ್ತಿಗಳನ್ನು ಎದುರುದಾರ ಬೆಂಗಳೂರಿನ ದಿಶಾ ಎಂಟರ್ ಪ್ರೈಸಸ್‍ರವರು ಒಟ್ಟು ರೂ.5,33,754/- ಮೌಲ್ಯದ ಅಗರಬತ್ತಿಗಳನ್ನು ಪೂರೈಸುವಂತೆ ಕೋರಿದ್ದರು. ಅದರಂತೆ ದೂರುದಾರರು ಅಗರಬತ್ತಿಗಳನ್ನು ತಯಾರಿಸಿ ಕೊರಿಯರ್ ಮೂಲಕ ಎದುರುದಾರರಿಗೆ ರವಾನಿಸಿದ್ದರು. ಆ ಅಗರಬತ್ತಿಗಳು ಎದುರುದಾರರಿಗೆ ದಿ:22/07/2021 ರಂದು ತಲುಪಿರುತ್ತವೆ. ಆದರೆ ಸದರಿ ಸರಕು ತಲುಪಿದರೂ ಎದುರುದಾರ ಹಣವನ್ನು ಪಾವತಿಸಿಲ್ಲ. ಆ ಕುರಿತು ಎದುರುದಾರರನ್ನು ಹಲವಾರು ಬಾರಿ ವಿನಂತಿಸಿದರೂ ಅವರು ಹಣ ನೀಡಿಲ್ಲ ಅವರ ಈ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಂಡು ತಮಗೆ ತಮ್ಮ ಹಣದ ಜೊತೆಗೆ ಸೂಕ್ತ ಪರಿಹಾರ ಕೊಡಿಸುವಂತೆ ದೂರುದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:22/02/2024 ರಂದು ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ, ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು.ಸಿ ಹಿರೇಮಠ ಸದಸ್ಯರು ದೂರುದಾರರು ತಯಾರಿಸಿದ ಸರಕು/ಅಗರಬತ್ತಿಗಳನ್ನು ಎದುರುದಾರರ ಕೋರಿಕೆಯಂತೆ ನಿಗದಿತ ಅವಧಿಯಲ್ಲಿ ಕೊರಿಯರ್ ಮೂಲಕ ರವಾನಿಸಿದ್ದರೂ, ಆ ಅಗರಬತ್ತಿಗಳ ಹಣವನ್ನು ಪಾವತಿಸದೇ ನಿರ್ಲಕ್ಷಿಸಿ ಎದುರುದಾರ ದಿಶಾ ಎಂಟರ್ ಪ್ರೈಜಸ್ ಸೇವಾ ನ್ಯೂನ್ಯತೆ ಎಸಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರರಿಗೆ ರೂ.5,33,754/- ಗಳ ಮೇಲೆ ದಿ:22/07/2021 ರಿಂದ ಶೇ.8% ರಂತೆ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿ ಪಿರ್ಯಾದಿ ನಿವೇದಿತಾರವರಿಗೆ ಪಾವತಿಸುವಂತೆ ಆಯೋಗ ಆದೇಶಿಸಿದೆ. ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ರೂ.50,000/- ಪರಿಹಾರ ಮತ್ತು ರೂ.10,000/- ಗಳನ್ನು ರೂಪಾಯಿ ಪ್ರಕರಣದ ಖರ್ಚು ವೆಚ್ಚ ಒಂದು ತಿಂಗಳ ಒಳಗಾಗಿ ಕೊಡುವಂತೆ ದಿಶಾ ಎಂಟರ ಪ್ರೈಸಸ್‍ರವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಸೂಚಿಸಿದೆ.

Share This Article
error: Content is protected !!
";