ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಹೇಳಿಕೆ ಗ್ರಾಮೀಣ ಸಹಕಾರ ಸಂಘಗಳ ನಿರ್ಮಾಣ ಮಹಾತ್ಮಾ ಗಾಂಧೀಜಿ ಕನಸು

Vijayanagara Vani
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಹೇಳಿಕೆ ಗ್ರಾಮೀಣ ಸಹಕಾರ ಸಂಘಗಳ ನಿರ್ಮಾಣ ಮಹಾತ್ಮಾ ಗಾಂಧೀಜಿ ಕನಸು
ಚಿತ್ರದುರ್ಗಜುಲೈ.18:
ಮಹಾತ್ಮ ಗಾಂಧೀಜಿಯವರು ದೇಶದ ಪ್ರತಿ ಹಳ್ಳಿಗಳಲ್ಲಿ ಸಹಕಾರಿ ಸಂಘ, ಶಾಲೆ, ಅಂಗನವಾಡಿ ಇರಬೇಕು ಎಂಬು ಕನಸು ಕಂಡಿದ್ದರು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಹೇಳಿದರು.
ನಗರದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಸಹಕಾರ ವಿಷಯದ ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಚರ್ಚಾಸ್ಪರ್ಧೆ ಕಾರ್ಯಕ್ರಮದ ಅಧ್ಯಕತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಆಶಯದಂತೆ ಸಹಕಾರ ಸಂಘ ಮತ್ತು ಸಹಕಾರಿ ಬ್ಯಾಂಕು ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಸಾಲ ನೀಡುವುದರ ಜೊತೆಗೆ ಅಭಿವೃದ್ದಿಗೂ ಕೊಡುಗೆ ನೀಡುತ್ತಿವೆ. ಸಮಾಜದ ದುರ್ಬಲ ವರ್ಗದವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇಂದಿನ ಮಕ್ಕಳೇ, ಮುಂದಿನ ಪ್ರಜೆಗಳು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಬೇಕು, ಜಾತ್ಯಾತೀತವಾಗಿ ಪ್ರತಿಯೊಬ್ಬರು ಉತ್ತಮ ಪ್ರಜೆಗಳಾಗಬೇಕೆಂದರೆ ಶಿಕ್ಷಣ ಬಹಳ ಮುಖ್ಯ. ವಿದ್ಯಾರ್ಥಿ ದೆಸೆಯಲ್ಲಿಯೇ ಸಹಕಾರದ ಬಗ್ಗೆ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಸಿ ಮಾತನಾಡಿದ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್, ಒಂದು ಕುಟುಂಬದಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿ ನೀಡುವ ಸಹಕಾರ ಪ್ರಕ್ರಿಯೆ ನಡೆಯುತ್ತದೆ. ಸಹಕಾರಿ ತತ್ವ ಅಳವಡಿಸಿಕೊಳ್ಳಲು ಕುಟುಂಬ ವ್ಯವಸ್ಥೆ ಮಾದರಿಯಾಗಿದೆ. ಇದೇ ರೀತಿ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರ ತತ್ವ ಬಹಳ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಸಹಕಾರ ತತ್ವವನ್ನು ಜಾಗೃತಿ ಮೂಡಿಸುವಂತಹ ಕಾರ್ಯ ಈ ದಿವಸ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ಮುಖಾಂತರ ನಡೆಸಲಾಗಿದೆ ಎಂದರು.
ಸಹಕಾರ ಮಂಡಳಿಯಿಂದ ಸಹಕಾರ ವಿಷಯ ಕುರಿತು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ಏರ್ಪಡಿಸಿ, ವಿದ್ಯಾರ್ಥಿಗಳಿಗೆ ಸಹಕಾರ ಕುರಿತು ಜ್ಞಾನಾಭಿವೃದ್ದಿ ಹಾಗೂ ಸಹಕಾರ ಕುರಿತು ಅರಿವು ಮೂಡಿಸಲು ಪ್ರಯತ್ನಿಸುತ್ತಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹೆಚ್.ವಿ. ಪ್ರತಾಪ ಸಿಂಹ, ನಿರ್ದೇಶಕ ಕೆ.ಹೆಚ್.ಜಗನ್ನಾಥ್, ತರಳಬಾಳು ಬೃಹನ್ಮಠ ವಿದ್ಯಾಸಂಸ್ಥೆ ಸಲಹೆಗಾರ ಮಹಲಿಂಗಪ್ಪ, ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಎಸ್. ಭಾಗ್ಯಲಕ್ಷ್ಮಿ ಭಾಗವಹಿಸಿದ್ದರು. ಚರ್ಚಾಸ್ಪರ್ಧೆ ತೀರ್ಪುಗಾರರಾಗಿ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ಸಂಜಯ್ರಾಮ್, ಅರ್ಥಶಾಸ್ತ್ರ ಉಪನ್ಯಾಸಕರಾದ ಸಿ.ಅಣ್ಣಪ್ಪ, ಉದಯಕುಮಾರ್, ಪ್ರಬಂಧ ಸ್ಪರ್ಧೆ ಮೌಲ್ಯಮಾಪಕರಾಗಿ ಶಿಕ್ಷಕಿ ಶಬಿನಾ ಬಾನು, ಆರೀಪ್ ಪಾಷ ಕಾರ್ಯನಿರ್ವಹಿಸಿದರು. ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಪಾಟೀಲ್, ಕಾರ್ಯಕ್ರಮ ನಿರೂಪಿಸಿ ಸರ್ವವರನ್ನು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆ ಮಾಡಲಾಯಿತು.
ವಿಜೇತ ವಿದ್ಯಾರ್ಥಿಗಳ ವಿವರ: ಸಹಕಾರಿ ವಿಷಯದ ಪರವಾಗಿ ಚಿತ್ರದುರ್ಗ ತಾಲ್ಲೂಕು ಕುಂಚಿಗನಾಳ್ ಮುರಾರ್ಜಿದೇಸಾಯಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ರುಹಯ್ಯ್ತಾಜ್ ಪ್ರಥಮ ಹಾಗೂ ಚಿತ್ರದುರ್ಗ ಎಸ್.ಆರ್.ಎಸ್. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ವರ್ಷಎಸ್. ರೆಡ್ಡಿ ದ್ವೀತಿಯ ಸ್ಥಾನ ಗಳಿಸಿದರು.
ವಿಷಯದ ವಿರೋಧವಾಗಿ ಹೊಸದುರ್ಗ ನಿಜಲಿಂಗಪ್ಪ ಪದವಿ ಪೂರ್ವಕಾಲೇಜು ವಿದ್ಯಾರ್ಥಿನಿ ರಮ್ಯ ಪ್ರಥಮ, ಚಿತ್ರದುರ್ಗ ಎಸ್.ಜೆ.ಎಂ. ಪದವಿ ಪೂರ್ವಕಾಲೇಜು ವಿದ್ಯಾರ್ಥಿನಿ ಅನುಷ, ದ್ವಿತೀಯ ಸ್ಥಾನ ಗಳಿಸಿದರು.
ಪ್ರಬಂಧ ಸ್ಪರ್ಧೆಯಲ್ಲಿ ಹೊಳಲ್ಕೆರೆ ಟಿಪಿಸಿಕೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸೈದಾ ಅರ್ಫ ಪ್ರಥಮ, ಚಿತ್ರದುರ್ಗ ಶ್ರೀ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿ ಕೀರ್ತನಾ ದ್ವೀತಿಯ ಕುರುಬರಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅಲಿಯಾ ಪರ್ವಿಸ್ ತೃತೀಯ ಸ್ಥಾನ ಪಡೆದರು.
WhatsApp Group Join Now
Telegram Group Join Now
Share This Article
error: Content is protected !!