ಪಟ್ಟಣದ ಸ.ಮಾ.ಹಿ.ಪ್ರಾ. ಶಾಲೆ ಮೇಗಳಪೇಟೆಯಲ್ಲಿ ಶುಕ್ರವಾರ ಎಲ್.ಕೆ.ಜಿ, ಯುಕೆಜಿ, ಇಸಿಸಿಇ ತರಗತಿಗಳನ್ನು, ಮತ್ತು ದ್ವಿಭಾಷ ತರಗತಿಯಡಿಯಲ್ಲಿ ೧ನೇ ತರಗತಿ ಆಗ್ಲ ಮಾದ್ಯಮಾ ತರಗತಿಯನ್ನ ಹಾಗೂ ೦೧ರಿಂದ ೮ನೇ ತರಗತಿವರೆಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಒಳಗೊಂಡAತೆ ಶಾಲಾ ಪ್ರಾರಂಭೋತ್ಸವವು ಇಂದು ಅದ್ದೂರಿಯಾಗಿ ನಡೆಯಿತು.
ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯು.ಬಸವರಾಜಪ್ಪ ಮಾತನಾಡಿ, ಇಲಾಖೆಯಿಂದ ನೂತನವಾಗಿ ಆಂಗ್ಲ ಮಾಧ್ಯಮ ಪ್ರಾರಂಭ ಮಾಡಿದೆ. ಎಲ್.ಕೆ.ಜಿಗೆ ೩೦, ಯುಕೆಜಿಗೆ ೩೦, ೧ನೇ ತರಗತಿಗೆ -೩೦ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಬಡ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಇದು ಸಹಕಾರಿಯಾಗಿದೆ. ಈ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲು ಇಲಾಖೆ ಆದೇಶದಂತೆ ಆಂಗ್ಲ ಮಾಧ್ಯಮಕ್ಕೆ ೦೩ ಜನ ಅತಿಥಿ ಶಿಕ್ಷಕರ ನೇಮಕ ಮಾಡಿದೆ. ಎಲ್.ಕೆ.ಜಿ./ ಯುಕೆಜಿ ಗೆ ಒಬ್ಬ ಆಯಾ ನೇಮಕ ಮಾಡಿದೆ. ಎಲ್ಲ ಶಿಕ್ಷಕರರು ಸೇತು ಬಂಧ ಕಾರ್ಯಕ್ರಮ ಮಾಡಲು ತಯಾರಿ ಮಾಡಿ ಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಂ.ರೇಖಾ, ಸದಸ್ಯರಾದ ಸತ್ಯಭೋದೆ, ಮುಖ್ಯಗುರುಗಳಾದ ಸಲೀಮ್ ಹೆಚ್, ಶಿಕ್ಷಕರಾದ ಓಉೆನ್.ಜಿ.ಚಿದಾನಂದಪ್ಪ, ಎಂ.ಶಿವಯೋಗಿ, ಅಜಯ್ ಎಸ್. ಗುಡುಗೂರು, ಎಂ. ಅಂಜಿನಪ್ಪ, ಮಂಜಪ್ಪ ಬಣಕಾರ್ ಹಾಗೂ ಎಲ್ಲ ಶಿಕ್ಷಕರು ಹಾಜರಿದ್ದರು. ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಹರಪನಹಳ್ಳಿ ಪಟ್ಟಣದ ಸ.ಮಾ.ಹಿ.ಪ್ರಾ. ಶಾಲೆ ಮೇಗಳಪೇಟೆಯಲ್ಲಿ ಶುಕ್ರವಾರ ಎಲ್.ಕೆ.ಜಿ, ಯುಕೆಜಿ, ಇಸಿಸಿಇ ತರಗತಿಗಳ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯು.ಬಸವರಾಜಪ್ಪ ಚಾಕಲೇಟ್ ನೀಡಿ ಬರಮಾಡಿ ಕೊಂಡರು.