Ad image

ಉಚಿತ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕೆ.ಇ ಚಿದಾನಂದಪ್ಪ ಅಭಿಮತ ದಿವ್ಯಾಂಗರಿಗೆ ಗೌರವ ಮತ್ತು ಪ್ರೋತ್ಸಾಹ ಅಗತ್ಯ

Vijayanagara Vani
ಉಚಿತ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕೆ.ಇ ಚಿದಾನಂದಪ್ಪ ಅಭಿಮತ ದಿವ್ಯಾಂಗರಿಗೆ ಗೌರವ ಮತ್ತು ಪ್ರೋತ್ಸಾಹ ಅಗತ್ಯ
ಬಳ್ಳಾರಿ,ಜೂ.10
ದಿವ್ಯಾಂಗಜನರು ಶ್ರೇಷ್ಠರು ಮತ್ತು ದೇವರ ಮಕ್ಕಳಿದ್ದಂತೆ. ಅವರಿಗೆ ಗೌರವ ಮತ್ತು ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಅಭಿಮತ ವ್ಯಕ್ತಪಡಿಸಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೇಂದ್ರದ ವಿಶೇಷ ಅಡಿಪ್ ಯೋಜನೆಯಡಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶೇಷಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುಟ್ಟರಾಜ ಗವಾಯಿ ಮತ್ತು ಅವರ ಗುರು ಪಂಚಾಕ್ಷಾರಿ ಗವಾಯಿಗಳು ಅಂಗವಿಕಲತೆಯನ್ನು ಮೆಟ್ಟಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಧನೆಗಳನ್ನು ಪ್ರೇರಣೆಯಾಗಿ ಪರಿಗಣಿಸಬೇಕು. ಇದಕ್ಕೆ ವಿಶೇಷಚೇತನರು ಮುಖ್ಯವಾಗಿ ಹಿಂಜರಿಕೆ ಮತ್ತು ಕೀಳರಿಮೆ ಬೀಡಬೇಕು. ತಮ್ಮಲ್ಲಿನ ವಿಶೇಷ ಪ್ರತಿಭೆಗಳಿಂದ ತಮ್ಮ ಸಾಮರ್ಥ್ಯ ಅರಿತು ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ವಿಶೇಷಚೇತನರನ್ನು ಕಡೆಗಣಿಸಬಾರದು. ಸಾಮಾಜ್ಯ ಜನರಿಗೆ ಏನಾದರೂ ನೀಡಿದರೆ ಅದು ಸಹಾಯ. ವಿಶೇಷಚೇತನರಿಗೆ ನೀಡಿದರೆ ಅದು ಸೇವೆಯಾಗುತ್ತದೆ. ಅಂತಹ ಸೇವೆಯನ್ನು ಸರ್ಕಾರಗಳು ಮಾಡುತ್ತಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ವಿಶೇಷಚೇತನರು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಲ್ಲಿ ಈ ಕೂಡಲೇ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು, ಯೋಜನೆಗಳನ್ನು ತಲುಪಿಸಲು ವಿಶೇಷ ಮುತುವರ್ಜಿ ವಹಿಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಕೆ.ಹೆಚ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶೇಷಚೇತನರು ತಮ್ಮ ಜೀವನವನ್ನು ಸ್ಪೂರ್ತಿಯಾಗಿ ಸ್ವೀಕರಿಸಬೇಕು. ಇತರರಿಗೂ ಮಾದರಿಯಾಗಬೇಕು. ಸಾಧನ ಸಲಕರಣೆಗಳನ್ನು ಬಳಸಿಕೊಂಡು ಉತ್ತಮ ಜೀವನ ಸಾಗಿಸಬೇಕು ಎಂದು ಹೇಳಿದರು.
ನಗರದಲ್ಲಿ ಬುದ್ಧಿಮಾಂದ್ಯ ಮಕ್ಕಳ ಸರ್ಕಾರಿ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ರೂ.2 ಕೋಟಿ ಅನುದಾನವು ಜಿಲ್ಲಾಧಿಕಾರಿಯವರು ಬಿಡುಗಡೆ ಮಾಡಲಾಗಿದ್ದು, ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಆದ್ಯತೆಯಾಗುವಂತೆ ನೋಡಿಕೊಳ್ಳೋಣ ಎಂದರು.
ಗಾAಧಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿಚಂದ್ರ ಅವರು ಮಾತನಾಡಿ, ಹೋರಾಟದ ಬದುಕಿನಲ್ಲಿ ಅಂಗವೈಕಲ್ಯತೆ ಕಾರಣವಾಗಬಾರದು. ಬದಲಾಗಿ ತಮ್ಮಲ್ಲಿನ ಜ್ಞಾನದ ಸಾಮರ್ಥ್ಯ ಬಳಸಿಕೊಂಡು ಮುನ್ನಡೆಯಬೇಕು. ಸಾಧನೆಯ ಗುರಿ ಕಂಡುಕೊಳ್ಳಬೇಕು ಎಂದರಲ್ಲದೇ, ಬ್ಯಾಟರಿ ಚಾಲಿತ ವಾಹನ ವಿತರಣೆ ಮಾಡಲಾಗುತ್ತಿರುವುದರಿಂದ ತಾವು ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 429 ಫಲಾನುಭವಿಗಳಿಗೆ 931 ವಿವಿಧ ಬಗೆಯ ಸಾಧನ ಸಲಕರಣೆಗಳು ಮಂಜೂರಾಗಿದ್ದು, ತಾಲ್ಲೂಕುವಾರು ಹಂತ-ಹAತವಾಗಿ ವಿತರಿಸಲಾಗುತ್ತದೆ. ಇದೇ ವೇಳೆ ಸಾಂಕೇತಿಕವಾಗಿ ಐದು ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಗೋವಿಂದಪ್ಪ ಹೆಚ್.ಎಂ., ಶಿಕ್ಷಣ ಇಲಾಖೆಯ ಅಧಿಕಾರಿ ಮೆಹಬೂಬ್, ಮಹಾನಗರ ಪಾಲಿಕೆಯ ವಲಯ 02 ರ ಅಧಿಕಾರಿ ಗುರುರಾಜ, ಅಲಿಂಕೋ ಸಂಸ್ಥೆಯ ಮುಖ್ಯಸ್ಥ ಆದರ್ಶ ಸಿಂಗ್, ಸ್ಮೆöÊಲ್ ಸಂಸ್ಥೆಯ ಮುಖ್ಯಸ್ಥ ಪ್ರಭುರಾಜ, ಅನುಗ್ರಹ ಸಂಸ್ಥೆ ಮತ್ತು ಸಮರ್ಥನ್ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ವಿಶೇಷಚೇತನರು ಹಾಗೂ ಮತ್ತೀತರರು ಉಪಸ್ಥಿತರಿದ್ದರು.
————–

Share This Article
error: Content is protected !!
";