Ad image

78 ನೇ ಸ್ವಾತಂತ್ರ್ಯ ದಿನಾಚರಣೆ…. 7ನೇ ವೇತನ ಆಯೋಗ ಜಾರಿ ಮಾಡಿದ ಸರ್ಕಾರಕ್ಕೆ ಅಭಿನಂದನೆ : ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡರ

Vijayanagara Vani
78 ನೇ ಸ್ವಾತಂತ್ರ್ಯ ದಿನಾಚರಣೆ…. 7ನೇ ವೇತನ ಆಯೋಗ ಜಾರಿ ಮಾಡಿದ ಸರ್ಕಾರಕ್ಕೆ ಅಭಿನಂದನೆ : ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡರ
ಧಾರವಾಡ ಅಗಸ್ಟ್ 15:*ಜಿಲ್ಲಾ ಸರಕಾರಿ ನೌಕರರ ಸಂಘದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಧ್ವಜಾರೋಹಣವನ್ನು ನೆರವೇರಿಸಿದರು.ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಎಲ್ಲನೌಕರರ ಭಾಂಧವರಿಗೆ ಮೊದಲಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಭ ಕೋರಿದರು. ರಾಜ್ಯ ಸರ್ಕಾರಿ ನೌಕರರು ದಕ್ಷತೆಯಿಂದ ಸೇವೆಸಲ್ಲಿಸುತ್ತಿರುವ ಕಾರಣದಿಂದಾಗಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಅಭಿವೃಧಿಯಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕ ಸರಕಾರ ಸರಕಾರಿ ನೌಕರರಿಗಾಗಿ 7ನೇ ವೇತನ ಆಯೋಗವನ್ನು ಯಥಾವತ್ತಾಗಿ ಜಾರಿ ಮಾಡಿದ ಮಾನ್ಯ ಮುಖ್ಯ ಮಂತ್ರಿಯವರಿಗೆ ಹಾಗೂ ಉಪ ಮುಖ್ಯ ಮಂತ್ರಿಯವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವೃಂದ ಸಂಘಗಳ ವತಿಯಿಂದ ದಿನಾಂಕ:17/08/2024 ರಂದು ಬೆಂಗಳೂರು ನಗರದ ಅರಮನೆ ಆವರಣದಲ್ಲಿ ಅಭಿನಂದನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ , ಸರ್ಕಾರಕ್ಕೆ ಹಳೆ ಪಿಂಚಣಿಯೋಜನೆ ಮರು ಜಾರಿ, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮತ್ತು ಪಿಎಸ್ಟಿ ಪಧವೀದರ ಶಿಕ್ಷಕರ ವೃಂದ ಮತ್ತು ನೇಮಕಾತಿ ತಿದ್ದುಪಡಿ ಕುರಿತು ಮನವಿ ಸಮರ್ಪಣೆಯನ್ನು ಹಮ್ಮಿಕೊಳ್ಳಲಾಗಿದ್ದು ನೌಕರ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.
2023-24 ನೇ ಸಾಲಿನ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಧರ್ಧೆಗಳನ್ನು ದಿನಾಂಕ:17/08/2024 ರಿಂದ 19/08/2024 ರ ವರೆಗೆ ಮೂರು ದಿನ ಬೆಂಗಳೂರು ನಗರದಲ್ಲಿ ಆಯೋಜಿಸಲು ತಿರ್ಮಾನಿಸಲಾಗಿದೆ. ಆದ್ದರಿಂದ ಧಾರವಾಡ ಜಿಲ್ಲೆಯಿಂದ ವಿಜೇತರಾದ ಕ್ರೀಡಾಪಟುಗಳು ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಲು ಕೋರಿದರು.
ಮುಖ್ಯಅತಿಥಿಗಳಾಗಿ ನಿಕಟ ಪೂರ್ವ ಅಧ್ಯಕ್ಷ ಎಸ್.ಕೆ.ರಾಮದುರ್ಗ ನಿಕಟ ಪೂರ್ವ ಕಾರ್ಯದರ್ಶಿ ಎಸ್.ಜಿ.ಸುಬ್ಭಾಪೂರಮಠ ಆಗಮಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಯಡಳ್ಳಿ ಖಜಾಂಚಿ ರಾಜಶೇಖರ ಬಾಣದ,ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ನೌಕರ ಭವನ ಕಾರ್ಯದರ್ಶಿ ಗಿರೀಶ ಚೌಡಕಿ, ಸಂಘದ ಪದಾಧಿಕಾರಿಗಳಾದ ರಾಜೇಶ ಕೋನರಡ್ಡಿ, ವಿನಯ ಮೂಶನ್ನವರ ಡಾ. ಬಿ. ಎಚ್.ಕುರಿಯವರ, ರಂಜಾನಸಾಬ ಕೊಟಬಾಗಿ, ಅಮೀತ ಕಲ್ಯಾಣಶೆಟ್ಟರ, ರೇಣುಕಾ ಮದಭಾವಿ, ಚಂದ್ರಿಕಾ ದಮ್ಮಳ್ಳಿ, ಆರ್.ಸಿ. ದೇಸಾಯಿ ವಿವಿಧ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ನೌಕರರ ಭಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಮಂಜುನಾಥ ದೊಡ್ಡಮನಿ, ಧ್ವಜ ವಂದನೆ ಗೌರವ ಸಲ್ಲಿಸಿದರು.

Share This Article
error: Content is protected !!
";