ಪ್ರಪಂಚದಾದ್ಯಂತ ಮೇ 24 ರಂದು ಪ್ರತೀ ವರ್ಷ “ವಿಶ್ವ ಸ್ಕಿಜೋಪ್ರೀನಿಯಾ ದಿನ” ವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷದ ಘೋಷಣೆ “ಸಮುದಾಯದ ಕೃಪಾ ಶಕ್ತಿಯನ್ನು ಆಚರಿಸುವುದು” ಆಗಿದೆ. ಈ ಸಂದರ್ಭದಲ್ಲಿ ಈ ಒಂದು ಖಾಯಿಲೆ ಬಗ್ಗೆ ಇರುವಂತಹ ಮೂಡನಂಬಿಕೆಗಳು ಸಾಮಾಜಿಕ ಕಳಂಕ, ಮತ್ತು ತಪ್ಪು ತಿಳುವಳಿಕೆಗಳನ್ನು ಹೊಡೆದೊಡಿಸಿ, ಈ ಖಾಯಿಲೆಗೂ ಸಹ ಇತರ ಖಾಯಿಲೆಯಂತೆ ಸೂಕ್ತವಾದ ಚಿಕಿತ್ಸೆ ಇರುತ್ತದೆ, ಅಲ್ಲದೇ ಚಿಕಿತ್ಸೆ ಪಡೆಯುವುದರ ಮೂಲಕ ಖಾಯಿಲೆಯುಳ್ಳ ವ್ಯಕ್ತಿಗಳು ಜನ ಸಾಮಾನ್ಯರಂತೆ ಅರ್ಥಪೂರ್ಣ ಜೀವನವನ್ನು ಸಾಗಿಸಬಹುದು ಎಂಬ ತಿಳುವಳಿಕೆಯನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಒಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಶೇಕಡಾ ೭ 0.3-07ಅಂದರೆ ಅಂದಾಜು 40 ರಿಂದ 7೦ ಲಕ್ಷ ಜನರು ಭಾರತದಲ್ಲಿ ಸ್ಕಿಜೋಪ್ರೀನಿಯಾದಿಂದ ¨ಬಳಲುತ್ತಿದ್ದಾರೆ. ಇದರಲ್ಲಿ 30% ಜನರು ಆತ್ಮಹತ್ಯೆಗೆ ಪ್ರಯತ್ನಿಸಿ. 1೦% ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸ್ಕಿಜೋಪ್ರೀನಿಯಾದಿಂದ ¨ಬಳಲುವವರು ಸಾಮಾನ್ಯ ಜನರಿಗಿಂತ ಸರಿ ಸುಮಾರು 1೦-15 ವರ್ಷಗಳ ಮುನ್ನವೇ ಸಾವನ್ನಪ್ಪುವ ಸಂಭವ ಹೆಚ್ಚು. ಈ ಖಾಯಿಲೆ ನಿರುದ್ಯೋಗ ಸಮಸ್ಯೆಯನ್ನು, ಸಾಮಾಜಿಕ ಕಳಂಕವನ್ನು, ಮತ್ತು ಜಗತ್ತಿನ ಆರ್ಥಿಕ ಸ್ಥಿತಿ-ಗತಿಯಲ್ಲಿ ಏರು-ಪೇರು ಮಾಡುವುದರಲ್ಲಿ ಎರಡು ಮಾತಿಲ್ಲ.
ಈ ಖಾಯಿಲೆ ಲಕ್ಷಣಗಳಲ್ಲಿ ಪ್ರಮುಖವಾಗಿ ಧನಾತ್ಮಕ ಮತ್ತು ಋಣಾತ್ಮಕ ಚಿಹ್ನೆಗಳು ಕಂಡು ಬರುತ್ತವೆ. ಧನಾತ್ಮಕ ಲಕ್ಷಣಗಳಾದ ವಿನಾಕಾರಣ ನಗುವುದು, ಅಳುವುದು, ಒಬ್ಬರೇ ಮಾತಾಡಿಕೊಳ್ಳುವುದು. ಕಾಲ್ಪನಿಕ ಧ್ವನಿ ಕೇಳುವುದು. ಕಾರಣವಿಲ್ಲದೇ ಅನುಮಾನ ಪಡುವುದು. ಮತ್ತು ಹೆಚ್ಚು ಹೆಚ್ಚು ಮದ್ಯ-ಮಾದಕ ವಸ್ತುಗಳ ಸೇವೆನೆ ಮಾಡುವುದು. ಋಣಾತ್ಮಕ ಲಕ್ಷಣಗಳಾದ ಮಂಕಾಗಿರುವುದು, ಯಾರೊಡನೆ ಮಾತಾನಾಡದೇ ಇರುವುದು. ದೈನಂದಿನ ಕೆಲಸದಲ್ಲಿ ನಿರಾಶಕ್ತಿ, ನಿರ್ಲಿಪ್ತತೆ, ಹಾಗೂ ಭಾವನೆಗಳನ್ನು ತೋರದೇ ಇರುವುದು ಅಲ್ಲದೇ ಆತ್ಮಹತ್ಯೆ ವಿಚಾರ ಮಾಡುವುದು.
ಈ ಒಂದು ಖಾಯಿಲೆಗೆ ಇರಬಹುದಾದ ಕಾರಣಗಳನ್ನು ನಾವು ನೋಡುವುದಾದರೆ ಮೊದಲನೇಯದಾಗಿ ಅನುವಂಶೀಯ ಕಾರಣಗಳು , ಮನೋ-ಸಾಮಾಜಿಕ ಸಿದ್ದಾಂತಗಳು, ನರಗಳ ಬೆಳವಣಿಗೆಯಲ್ಲಿ ಆದ ತೊಂದರೆಗಳು, ಮೆದಳಿನಲ್ಲಿ ಆಗುವ ನರವಾಹಕಗಳ (ಡೋಪಾಮಿನ್) ಏರು-ಪೇರು, ಮದ್ಯ ಮತ್ತು ಮಾದಕ ವಸ್ತುಗಳ ಅತಿಯಾದ ಸೇವೆನೆ. ಆದರೆ ಜನಸಾಮಾನ್ಯರಲ್ಲಿ ಸ್ಕಿಜೋಪ್ರೀನಿಯಾ ಬಗ್ಗೆ ಸಾಕಷ್ಟು ತಪ್ಪು ನಂಬಿಕೆಗಳಿವೆ. ಉದಾ: ಹಿಂದಿನ ಜನ್ಮದ ಪಾಪ ಕರ್ಮಗಳಿಂದ ಬರುತ್ತದೆ., ಮಾಟ-ಮಂತ್ರ ದೆವ್ವ-ಭೂತಗಳ ಕಾಟದಿಂದ ಬರುತ್ತದೆ. ಈ ಖಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ. ಅಲ್ಲದೇ ಮದುವೆ ಆದರೆ ಈ ಖಾಯಿಲೆಯು ಗುಣಮುಖವಾಗುತ್ತೆ ಅನ್ನುವ ಮೂಢನಂಬಿಕೆ.
ಮನೋರೋಗಕ್ಕೆ ಮದ್ದುಂಟೇ? ಎಂಬುದು ಹಳೆಯ ಉಕ್ತಿ….. ಆದರೆ ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಆವಿಷ್ಕಾರಗಳ ಮೂಲಕ ಎಲ್ಲಾ ತರಹದ ಮನೋರೋಗಗಳಿಗೆ ಚಿಕಿತ್ಸೆ ಲಭ್ಯವಿದೆ. ಚಿಕಿತ್ಸೆಯ ವಿಧಾನಗಳಲ್ಲಿ ಆಪ್ತಸಮಾಲೋಚನೆ, ಔಷಧಿಗಳು, ವಿದ್ಯುತ್ ಕಂಪನ ಚಿಕಿತ್ಸೆ ನ್ಯೂರೋಮಾಡುಲೇಶನ್, ಅನುಷರಣ ಚಿಕಿತ್ಸೆ ಮುಂತಾದವುಗಳು ಅಲ್ಲದೇ ಪುರ್ನವಸತಿ ಚಿಕಿತ್ಸೆ ಕೂಡ ಲಭ್ಯವಿರುವುದರಿಂದ ಸ್ಕಿಜೋಪ್ರೀನಿಯಾ ದ ಬಗ್ಗೆ ಆತಂಕ ಬೇಡ, ಚಿಕಿತ್ಸೆಯಿಂದ ಸಹಜ ಜೀವನ ಪಡೆಯಬಹುದು.
ರೋಗಿಯ ಆರೈಕೆದಾರ ರಿಗೆ ಕೆಲವು ಕಿವಿಮಾತು ಗಳು ಹೇಳುವುದಾದರೆ ಅವರ ಖಾಯಿಲೆ ಮತ್ತು ಅದರ ತೊಂದರೆಗಳನ್ನು ಒಪ್ಪಿಕೊಳ್ಳಿ. ಒತ್ತಡ ಕಡಿಮೆ ಮಾಡಿಕೊಳ್ಳಿ. (ಒತ್ತಡದಿಂದ ರೋಗ ಲಕ್ಷಣಗಳು ಉಲ್ಬಣಗೊಳ್ಳಬಹುದು.) ವಾಸ್ತವಿಕ ನೀರಿಕ್ಷೆಗಳನ್ನು ಇಟ್ಟುಕೊಳ್ಳಿ. ಸಾವಧಾನತೆ ಮತ್ತು ದೀರ್ಘ ಉಸಿರಾಟದ ವಿಶ್ರಮ ತಂತ್ರಗಳನ್ನು ಅಳವಡಿಸಿಕೊಳ್ಳುವುದು. ದೈನಂದಿನ ವ್ಯಾಯಾಮ ಮಾಡುವುದು, ಆರೋಗ್ಯಕರ ಸಮತೋಲನ ಆಹಾರ ತೆಗೆದುಕೊಳ್ಳುವುದು. ಮದ್ಯ ಮತ್ತು ಮಾದಕ ವಸ್ತುಗಳಿಂದ ದೂರವಿರುವುದು. ಮತ್ತು ನಿಯಮಿತವಾಗಿ ಔಷದಿಗಳನ್ನು ಸೇವಿಸುವುದು. ಹಾಗೂ ವೈದ್ಯರನ್ನು ಬೇಟಿ ಮಾಡುವುದು.
ಡಾ.ಮನೋಹರ್ ವೈ. ಪತ್ತಾರ್
ಹಿರಿಯ ಮನೋರೋಗ ತಜ್ಞರು
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ರಾಯಚೂರು.