ತೂತು ಬಿದ್ದ ಕೊಡ ಆಗದೇ ಇರಿ ! ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು, ಉತ್ತಮ ಜೀವನ ಕಟ್ಟಿಕೊಳ್ಳಿ: ಡಾ. ಹೆಚ್.ಎಂ.ಚಂದ್ರಶೇಖರ್ ಶಾಸ್ತ್ರಿ.

Vijayanagara Vani
ತೂತು ಬಿದ್ದ ಕೊಡ ಆಗದೇ ಇರಿ ! ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು, ಉತ್ತಮ ಜೀವನ ಕಟ್ಟಿಕೊಳ್ಳಿ: ಡಾ. ಹೆಚ್.ಎಂ.ಚಂದ್ರಶೇಖರ್ ಶಾಸ್ತ್ರಿ.

ವಿದ್ಯಾರ್ಥಿಗಳು ‘ತೂತು ಬಿದ್ದ ಕೊಡ’ ಆಗದೇ ಗುರಿಯನ್ನು ಇಟ್ಟುಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಿ ಎಂದು ವಿಶಾಂತ್ರ ಪ್ರಾಧ್ಯಾಪಕ ಡಾ.ಹೆಚ್.ಎಂ ಚಂದ್ರಶೇಖರ ಶಾಸ್ತ್ರಿ ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ನಗರದ ಶ್ರೀ ಶಂಕರ್ ಆನಂದಸಿಂಗ್ ಸರ್ಕಾರಿ‌ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಬೆಳಿಗ್ಗೆ 2023 ಮತ್ತು 2024 ನೇ ಸಾಲಿನ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಹಾಗೂ ಅಂತಿಮ ವರ್ಷದ ಬಿ.ಎ, ಬಿ.ಕಾಂ ಹಾಗೂ ಬಿಎಸ್ಸಿ,ಬಿಸಿಎ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಸಮಾರಂಭವನ್ನು ವಿಶಾಂತ್ರ ಪ್ರಾಧ್ಯಾಪಕರಾದ ಡಾ.ಹೆಚ್.ಎಂ ಚಂದ್ರಶೇಖರ್ ಶಾಸ್ತ್ರ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಡಾ.ಹೆಚ್.ಎಂ ಚಂದ್ರಶೇಖರ್ ಶಾಸ್ತ್ರೀ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮಾನವೀಯ ಮೌಲ್ಯಗಳು ಬಹಳ ಮುಖ್ಯ, ಉತ್ತಮ ಸ್ನೇಹಿತರು ಜೀವನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಹಾಗಾಗಿ ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಜೀವನ ಮಾಡಬೇಕು ಎಂದರು. ವಿದ್ಯಾರ್ಥಿಗಳು ತೂತು ಬಿದ್ದ ಕೊಡ ಆಗಬಾರದು, ವಿದ್ಯಾರ್ಥಿಗಳು ಗುರಿಯನ್ನು ಇಟ್ಟುಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಿ ಎಂದರು‌.

ಶಾಸಕ ಹೆಚ್.ಆರ್ ಗವಿಯಪ್ಪ ಅವರ ಮಗ ವಿರೂಪಾಕ್ಷ ಮಾತನಾಡಿದ ಅವರು ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಅಭ್ಯಾಸ ಮಾಡಬೇಕು. ಸರ್ಕಾರಿ ಕಾಲೇಜಿನಲ್ಲಿ ಹೊಸ ಹೊಸ ಕೋರ್ಸ್ ಗಳನ್ನು ಹಾಗೂ ಮುಖ್ಯವಾಗಿ ಹೋಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಆರಂಭ ಮಾಡಬೇಕು.‌
ಮುಂದಿನ ದಿನಗಳಲ್ಲಿ ವಿಜಯನಗರ ಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ ಆ ಸೌಲಭ್ಯಗಳನ್ನು ಬಹಳಸಿಕೊಳ್ಳಿ ಎ.ದರು. ಕಾಲೇಜಿಗೆ ಬೇಕಾದ ಸೌಲಭ್ಯಗಳನ್ನು ನೀಡಲು ನಾವು ಸಿದ್ದರಿದ್ದವೆ ಎಂದರು.

ನಂತರ ಪ್ರಾಂಶುಪಾಲರಾದ ಪ್ರೊ.ಕೆ ಶಿವಪ್ಪ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧನೆ ಮಾಡಬೇಕು.ಉತ್ತಮ ಪ್ರಜೆಗಳಾಗಿರ ಬೇಕೆಂದರು.

ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವೇದಿಕೆ ಮೇಲಿನ ಗಣ್ಯರು ನೀಡಿದರು.

ವಿವಿಧ ವಿಭಾಗದ ಉಪನ್ಯಾಸಕರಾದ ಡಾ.ಎರಿಸ್ವಾಮಿ, ಗುಜ್ಜಲ್ ಹುಲುಗಪ್ಪ, ಮುರುಳಿಧರ, ಗಿರೀಶ್ ಕುಮಾರ್ ಗೌಡ, ನಾಗಾರ್ಜುನ, ಸುಂಕಣ್ಣ, ನಾಗಭೂಷಣ, ಪ್ರಶಾಂತ, ಜಿತೇಂದ್ರ, ನವೀನ್, ವೀರ ಬಸವಂತಸ್ವಾಮಿ, ಡಾ.ಶಿವರಾಜ್, ದೀಪಕ್, ಡಾ. ವೀರೇಶ್, ಅಕ್ಕಿ ಮಲ್ಲಿಕಾರ್ಜುನ , ಪಿ.ವಿಜಯ ಕುಮಾರ್, ಕುಸುಮ, ಶ್ವೇತಾ ಜೋಶಿ, ವಿಜಯಲಕ್ಷ್ಮಿ, ಸುಕನ್ಯಾ, ನಾಗವೇಣಿ, ಅಮೃತ್ ನಾಯ್ಕ್, ಮಂಜುನಾಥ ಗಂಗಾವತಿ, ಮಲ್ಲಯ್ಯ, ಕೊಟ್ರೇಶ್.ಎಂ, ಹೇಮಣ್ಣ ಪೂಜಾರಿ, ಜಯಶ್ರೀ, ಸೌಮ್ಯ,
ಸೋಮಶೇಖರ್, ಡಾ.ಷಣ್ಮುಖಪ್ಪ, ಪದ್ಮಜಾ, ಡಾ.ಅಕ್ತಾರ ಖಾನ್, ರಾಕೇಶ್,‌ ಶರಣೇಶ್, ಚರಣ್ ರಾಜ್ , ಡಾ.ದೊಡ್ಡ ಉಜ್ಜಪ್ಪ, ಡಾ.ಗಿರಿಜಾ, ಡಾ.ದ್ವಾರಕಸ್ವಾಮಿ, ಡಾ. ಬಾಬುರಾಜೇಂದ್ರ ಪ್ರಸಾದ್, ಡಾ.ಜಯಣ್ಣ, ಡಾ.ಹೆಬ್ಸುರ್, ಡಾ. ಮಲ್ಲಿಕಾರ್ಜುನ ಕಪಿ, ಸುರೇಶ್, ಡಾ.ವೀರಭಧ್ರಪ್ಪ, ಡಾ.ಹರೀಶ್, ರಾಜಾವಲಿ, ಗುರುರಾಜ್ ಭಾಗವಹಿಸಿದರು. ‌

ಬೋಧಕೇತರ ಸಿಬ್ಬಂದಿಗಳಾದ ಕಾಲೇಜು ಅಧೀಕ್ಷಕಿ ಜಿ.ಎನ್, ಶೀಲಾ, ಟೈಪಿಸ್ಟ್ ಎನ್. ಮಂಗಳ, ಗಾಯಿತ್ರಿ, ಅರುವೇಣಿ, ಸುನೀಲಾ, ಭಾರ್ಗವಿ, ಶ್ರೀನಿವಾಸ್, ಹನುಮಂತ, ಸುಭಾನ್, ವಿಶ್ವನಾಥ, ಗಂಗಮ್ಮ, ರೂಪ ಹಾಜರಿದ್ದರು.

ಪ್ರಾರ್ಥನೆ ಅನಿತ, ಸ್ವಾಗತ ಡಾ.ಮಲ್ಲಿಕಾರ್ಜುನ ಕಪ್ಲಿ,
ವಂದನಾರ್ಪಣೆ ಅಕ್ಕಿ ಮಲ್ಲಿಕಾರ್ಜುನ, ನಿರೂಪಣೆ ಡಾ. ರೇಖಾ ನೆರವೇರಿಸಿದರು.
ಬಿ.ಎ, ಬಿಕಾಂ ಹಾಗೂ ಬಿಎಸ್ಸಿ, ಬಿಸಿಎ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.

WhatsApp Group Join Now
Telegram Group Join Now
Share This Article
error: Content is protected !!