Ad image

ಭಾರತ ದೇಶದ ಕೀರ್ತಿಯನ್ನು ಜಾಗತಿಕವಾಗಿ ಉತ್ತುಂಗಕ್ಕೇರಿಸಬೇಕು : ಡಾ. ಜಿ.ಕೆ.ಬಡಿಗೇರ*

Vijayanagara Vani
ಭಾರತ ದೇಶದ ಕೀರ್ತಿಯನ್ನು ಜಾಗತಿಕವಾಗಿ ಉತ್ತುಂಗಕ್ಕೇರಿಸಬೇಕು : ಡಾ. ಜಿ.ಕೆ.ಬಡಿಗೇರ*
ಧಾರವಾಡ  ಆ.15:* ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಧಾರವಾಡ ಇಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಾಂಶುಪಾಲರಾದ ಪೆÇ್ರ. ಜಿ.ಕೆ. ಬಡಿಗೇರ ಅವರು ದ್ವಜಾರೋಹಣವನ್ನು ನೆರವೇರಿಸಿದರು. ನಂತರ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಲವು ಮಹನೀಯರ ತ್ಯಾಗ, ಬಲಿದಾನ, ಹೋರಾಟದ ಫಲವಾಗಿ ಭಾರತ ದೇಶಕ್ಕೆ ಸ್ವಾತಂತ್ರ್ಯಲಭಿಸಿದೆ. ಈ ಸ್ವಾತಂತ್ರ್ಯದ ಎಚ್ಚರ ನಮ್ಮಲ್ಲಿ ಜಾಗೃತವಾಗಿರಬೇಕು. ದೇಶದ ಮುಂದಿರುವ ಸವಾಲುಗಳನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಎದುರಿಸಿ ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಉತ್ತುಂಗಕ್ಕೇರಿಸಬೇಕು. ಅದಕ್ಕಾಗಿ ಯುವಜನತೆ ದೇಶಪ್ರೇಮ, ಸ್ವತಂತ್ರ ವಿಚಾರಶೀಲತೆ, ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಡಿಸಿ ಸದಸ್ಯರಾದ ಮಲ್ಲಿಕಾರ್ಜುನ ಹಡಪದ, ಸುರೇಶ ಯಲಿಗಾರ ಅವರು ಪಾಲ್ಗೊಂಡಿದ್ದರು. ಸಾಂಸ್ಕøತಿಕ ಸಂಚಾಲಕರಾದ ಡಾ. ಗಿರೀಶ ದೇಸೂರ ಅವರು ನಿರೂಪಿಸಿದರು. ರೇಂಜರ್ಸ ಮತ್ತು ರೋವರ್ಸ ಅಧಿಕಾರಿಗಳಾದ ಶಿವಾನಂದ ನರಹಟ್ಟಿ ಹಾಗೂ ಸುಮಿತ್ರಾ ಅಣ್ಣಿಗೇರಿ, ಎನ್.ಎಸ್.ಎಸ್. ಅಧಿಕಾರಿಗಳಾದ ಡಾ. ಡಿ.ಜಿ.ತಾಪಸ್, ಡಾ. ವಿಜಯಲಕ್ಷ್ಮಿ ದಾನರೆಡ್ಡಿ, ಡಾ. ಜಯಾನಂದಹಟ್ಟಿ, ಎನ್.ಸಿ.ಸಿ. ಅಧಿಕಾರಿ ಡಾ. ರೂಪಾ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಎನ್.ಸಿ.ಸಿ. ವಿದ್ಯಾಥಿಗಳು ಶಿಸ್ತುಬದ್ಧವಾಗಿ ಪರೇಡ ಮಾಡಿ ಗೌರವ ಧ್ವಜವಂದನೆ ಸಲ್ಲಿಸಿದರು

Share This Article
error: Content is protected !!
";