Ad image

ಶಾಸನ ಮತ್ತು ವೀರಗಲ್ಲುಗಳನ್ನು ರಕ್ಷಿಸುವ ಉತ್ತರಾಧಿಕಾರಿಯಾಗಿ ವಿದ್ಯಾರ್ಥಿಗಳು ಕೆಲಸ ನಿರ್ವಹಿಸಬೇಕು: ಡಾ. ಎಸ್ ರಾಜೇಂದ್ರಪ್ಪ

Vijayanagara Vani
ಶಾಸನ ಮತ್ತು ವೀರಗಲ್ಲುಗಳನ್ನು ರಕ್ಷಿಸುವ ಉತ್ತರಾಧಿಕಾರಿಯಾಗಿ ವಿದ್ಯಾರ್ಥಿಗಳು ಕೆಲಸ ನಿರ್ವಹಿಸಬೇಕು: ಡಾ. ಎಸ್ ರಾಜೇಂದ್ರಪ್ಪ
ಮಂಡ್ಯ ಜಿಲ್ಲೆಯು ಅದ್ಭುತ ದೇವಾಲಯ ಶಾಸನ ಮತ್ತು ವೀರಗಲ್ಲುಗಳ ನೆಲೆಯಾಗಿದೆ. ಆದರೆ ಕೆಲವು ಕಡೆ ಅವುಗಳ ರಕ್ಷಣೆ ಸರಿಯಾಗಿ ಆಗುತ್ತಿಲ್ಲ ಅವುಗಳನ್ನು ಉಳಿಸಿ ರಕ್ಷಿಸುವ ಉತ್ತರಾಧಿಕಾರಿಯಾಗಿ ವಿದ್ಯಾರ್ಥಿಗಳು ಕೆಲಸ ಮಾಡಬೇಕು ಎಂದು ಬೆಂಗಳೂರು ಇತಿಹಾಸ ತಜ್ಞ ಡಾ. ಎಸ್ ರಾಜೇಂದ್ರಪ್ಪ ಸಲಹೆ ನೀಡಿದರು
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಸೋಮವಾರ ಇತಿಹಾಸ ವಿಭಾಗವು ಏರ್ಪಡಿಸಿದ “ಕರ್ನಾಟಕ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ” ಎಂಬ ವಿಷಯದ ಕುರಿತು ರೂಸಾ 2.0 ಅಡಿಯಲ್ಲಿ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ರೈಲು ನಿಲ್ದಾಣದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಬಲಭಾಗದ ಹಿಂಭಾಗಕ್ಕೆ 15ನೇ ಶತಮಾನದ ವೀರಗಲ್ಲು ಮಾಸ್ತಿಕಲ್ಲು ಇದೆ. ಜೊತೆಗೆ ಭಕ್ತರು ಎಣ್ಣೆ ದೀಪ ಪುಷ್ಪವನ್ನು ಇಟ್ಟು ಪೂಜೆ ಮಾಡುತ್ತಿದ್ದಾರೆ. ಪೇಟೆಯ ವೀರಪ್ಪನ ಗುಡಿ ವೀರಗಲ್ಲು ಕೂಡ ಇಂತಹ ಸ್ಥಿತಿಯಲ್ಲಿದೆ ಇಂತಹ ಸ್ಮಾರಕಗಳನ್ನು ಜಿಲ್ಲಾ ಕಚೇರಿ ಅಥವಾ ಕಾಲೇಜು ಆವರಣದಲ್ಲಿ ತಂದು ರಕ್ಷಿಸಬೇಕು ಆಗ ಮಾತ್ರ ಇವು ಮುಂದಿನ ಜನರಿಗೆ ಇತಿಹಾಸವನ್ನು ಸಾರುವಂಥಾಗುತ್ತವೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆ ಗೆಜೆಟಿಯರ್ 2003 ರಲ್ಲಿ ಪ್ರಕಟವಾಗಿದ್ದು ಇದು ಮಂಡ್ಯ ಜಿಲ್ಲೆಯ ಪ್ರತಿಯೊಂದು ಊರಿನ ಮಾಹಿತಿ ಹೊಂದಿದೆ, ಜೊತೆಗೆ ಮಂಡ್ಯ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗಳು ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತ ವೈವಿಧ್ಯತೆಯ ವಿಷಯಗಳನ್ನು ಒಳಗೊಂಡಿದೆ ಇಂತಹ ವಿಷಯಗಳನ್ನು ವಿದ್ಯಾರ್ಥಿಗಳು ಓದಿದರೆ ಜಿಲ್ಲೆಯ ಬಗ್ಗೆ ಸಂಪೂರ್ಣ ತಿಳುವಳಿಕೆ ಬರುತ್ತದೆ. ಜಿಲ್ಲೆಯಲ್ಲಿರುವ ಬೂದನೂರು, ಬಸರಾಳು, ಅರಕೆರೆ,ನಾಗಮಂಗಲ, ಸಿಂಧಘಟ್ಟ, ಕಿಕ್ಕೇರಿ ದೇವಾಲಯಗಳು ಹೊಯ್ಸಳರ ಅದ್ಭುತ ನೈಪುಣ್ಯತೆಯ ಇತಿಹಾಸವನ್ನು ಸಾರುವಂಥಹವು ಎಂದು ತಿಳಿಸಿದರು.
ನಂತರ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ. ಕೃಷ್ಣೇಗೌಡ ಹೆಚ್ ರವರು ಮಾತನಾಡಿ ಇಂದಿನ ಪೀಳಿಗೆಗೆ ಇತಿಹಾಸದ ಓದು, ಗ್ರಹಿಕೆ ಹಿಂದೆಂದಿಗಿಂತಲೂ ಇಂದು ಪ್ರಸ್ತುತವಾಗಿದೆ ಭಾರತದ ಇತಿಹಾಸ ಪರಂಪರೆ,ಸಂಸ್ಕೃತಿ, ಶ್ರೇಷ್ಠತೆಯನ್ನು ವಿದ್ಯಾರ್ಥಿಗಳು ಅರಿಯಬೇಕು.ಕರ್ನಾಟಕ ರಾಜ್ಯವು ಭಾರತದ ಸಂಸ್ಕೃತಿಗೆ ತನ್ನದೇ ಆದ ವಿಶಿಷ್ಟವಾದ ಸ್ಥಾನಮಾನವನ್ನು ನೀಡಿದೆ ಎಂದು ಶ್ಲಾಘಿಸಿದರು.
ಅಮೆರಿಕ ಯುರೋಪ್ ದೇಶಗಳ ಇತಿಹಾಸಕ್ಕಿಂತಲೂ ನಿಮ್ಮ ಊರಿನ ನಿಮ್ಮ ರಾಜ್ಯದ,ರಾಷ್ಟ್ರದ ಇತಿಹಾಸ ತಿಳಿದುಕೊಳ್ಳುವುದು ಬಹಳ ಮುಖ್ಯ ಆಗ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.
ಮದ್ದೂರಿನ ಸಮೀಪ ಇರುವ ನಾಯಿಶಾಸನ ಮನುಷ್ಯ ಮತ್ತು ಪ್ರಾಣಿ ನಡುವಿನ ಬದುಕನ್ನು ತಿಳಿಸುವ ಹೆಗ್ಗುರುತ್ತಾಗಿದೆ ಇದೇ ರೀತಿ ಪ್ರತಿ ಶಾಸನ ಸ್ಮಾರಕಗಳು ಮಾನವನ ಬದುಕಿನ ಒಂದೊಂದು ಕಥೆ ಹೇಳುವ ಸಾಕ್ಷಿಗಳವಾಗಿವೆ ಎಂದು ತಿಳಿಸಿದರು.
ನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುರಾಜ ಪ್ರಭು ಕೆ ರವರು ಮಾತನಾಡಿ ವಿಜಯನಗರ ಸಾಮ್ರಾಜ್ಯ ಮತ್ತು ಅಶೋಕನ ಶಾಸನಗಳು ಭಾರತದ ಭವ್ಯ ಇತಿಹಾಸವನ್ನು ಹೇಳುವಂಥವು ಸ್ಮಾರಕ ಮತ್ತು ಶಾಸನಗಳ ಅಧ್ಯಯನದ ಮೂಲಕ ಆಳವಾದ ಇತಿಹಾಸವನ್ನು ತಿಳಿಯಬಹುದು. ಆಸ್ಟ್ರೇಲಿಯಾ ದೇಶದಲ್ಲಿ ಹೆಚ್ಚು ವಸ್ತು ಸಂಗ್ರಹಾಲಯಗಳಿವೆ ಅಲ್ಲಿ ಇತಿಹಾಸ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಆದರೆ ನಮ್ಮಲ್ಲಿ ಶಾಸನಗಳು ಅನಾಥವಾಗಿವೆ ಭಾರತದಲ್ಲಿ ಅವುಗಳನ್ನು ಉಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ತಾಳೆಗಾರಿ ಶಾಸನ ತೋರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಗಣ್ಯರು ನೆರವೇರಿಸಿದ್ದು ವಿಶೇಷವಾಗಿತ್ತು ‌
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎನ್ ಎಸ್ ರಂಗರಾಜು ,ಇತಿಹಾಸಕಾರರಾದ ಶ್ರೀ ಮೊಹಮ್ಮದ್ ಖಲೀಮ್ ಮುಲ್ಲಾ, ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಶಿವರಾಮು ಎಸ್. ಸಹ ಪ್ರಾಧ್ಯಾಪಕರಾದ ಡಾ. ಕವಿತಾ ಕೆಎಂ.ಸಹಾಯಕ ಪ್ರಾಧ್ಯಾಪಕರಾದ ಶ್ರೀ ಶಾಂತರಾಜು ಟಿ ಎನ್. ಪತ್ರಾಂಕಿತ ವ್ಯಸ್ಥಾಪಕರಾದ ರವಿಕಿರಣ್ ಕೆಪಿ. ಹೇಮಲತಾ.ರೂಸಾ 2.0 ಸಂಯೋಜಕರಾದ ಡಾ. ಮಂಗಳಮ್ಮ ಕೆ ಎಂ. ಉಪನ್ಯಾಸಕರಾದ ಪ್ರಕಾಶ್ ಜಿಜೆ ಪೂರ್ಣಿಮಾ ಹಾಜರಿದ್ದರು

Share This Article
error: Content is protected !!
";