ಪ್ರಥಮ, ಮಲ್ಲೇಶ್ ಮೈಲಾಪುರ್, ದ್ವಿತೀಯ ಮುತ್ತಣ್ಣ ಮರ್ಲನಹಳ್ಳಿ,ಕೃತಿಯ ದೇವಪ್ಪ ನಾಯಕ್.
ಕಾರಟಗಿ : ತಾಲೂಕಿನ ಉಳೆನೂರು ಗ್ರಾಮದಲ್ಲಿ ಗುರುವಾರ ದಸರಾ ಹಬ್ಬ ಹಾಗೂ ದೇವಿ ಪುರಾಣ ಮಹಾಮಂಗಲ ಅಂಗವಾಗಿ ಏರ್ಪಡಿಸಲಾಗಿದ್ದ ಎತ್ತಿನಗಾಡಿ ಓಟದ ಸ್ಪರ್ಧೆ ವೀಕ್ಷಣೆಗೆ ಸಾವಿರಾರು ಜನರು ಆಗಮಿಸಿದ್ದರು. ಸ್ಪರ್ಧಿಗಳ ಜತೆಗೆ ಅವರ ಊರಿನ ಜನ ಸಮೂಹವೇ ಬಂದಿತ್ತು. ಹೀಗಾಗಿ ಸ್ಪರ್ಧೆ ಬಹಳ ಪೈಪೋಟಿಯಿಂದ ಕೂಡಿತ್ತು. 12 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರಥಮ ಬಹುಮಾನ 11,000. ದ್ವಿತೀಯ ಬಹುಮಾನ 5,000 ತೃತೀಯ ಬಹುಮಾನ 3,000. ಮತ್ತು ಇನ್ನುಳಿದ ಎತ್ತುಗಳಿಗೆ ಸಮಾನ ಬಹುಮಾನ ಗೊಂಡೆ ನೀಡಿದರು.
ಒಂದು ಕಿಲೋ ಮೀಟರ್ ದೂರ ಹೋಗಿ ವಾಪಾಸ್ ಬರಬೇಕು ಯಾವ ಜೋಡಿಗಳು ಕಡಿಮೆ ಸಮಯ ತೆಗೆದುಕೊಳ್ಳುತ್ತವೆ ಎನ್ನುವ ಆಧಾರದ ಮೇಲೆ ಆಯ್ಕೆ ಮಾಡಲಾಯಿತು. ಇನ್ನು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮಲ್ಲೇಶ ಮೈಲಾಪುರ, ದ್ವಿತೀಯ ಸ್ಥಾನ ಮುತ್ತಣ್ಣ ಮರ್ಲನಹಳ್ಳಿ, ತೃತೀಯ ಸ್ಥಾನ ದೇವಪ್ಪ ನಾಯಕ ಅವರ ಎತ್ತುಗಳು ಬಹುಮಾನ ಪಡೆದವು.
ಈ ಸಂದರ್ಭದಲ್ಲಿ ಪ್ರಥಮ ಬಹುಮಾನ ನೀಡಿದವರು ಹಿರೇ ಸುಂಕಲಯ್ಯ, ದ್ವಿತೀಯ ಬಹುಮಾನ ನೀಡಿದವರು, ಕೇಬಲ್ ಆಪರೇಟರ್ ವಾಸಣ್ಣ, ತೃತಿಯ ಬಹುಮಾನ ನೀಡಿದವರು ಯಮನೂರ್ ಕಾರಟಗಿ, ಮುಖಂಡರು ಹೊನ್ನೂರಪ್ಪ ನಾಯಕ್, ಹುಲಗಪ್ಪ ಪಾಳೆ, ದೇವರಾಜ ಕಟ್ಟಿಮನಿ, ಸಣ್ಣ ದೇವಣ್ಣ ಮೈಲಾಪುರ್, ಹನುಮಂತಪ್ಪ ಕಾರಟಗಿ, ಮಾರೇಪ್ಪ ಹರಿಜನ, ಈರಣ್ಣ ಈಡಿಗೇರ, ಯಮನೂರ ಕಾರಟಗಿ,ನಿರುಪಾದಿ, ಮತ್ತು ಉಳೆನೂರು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನ ಇದ್ದರು.