ಪರಿಸರಸ್ನೇಹಿ ಮಾರ್ಗೋಪಾಯ, ಸಂಪನ್ಮೂಲಗಳನ್ನೇ ಬಳಿಕೆ

Vijayanagara Vani
ಪರಿಸರಸ್ನೇಹಿ ಮಾರ್ಗೋಪಾಯ, ಸಂಪನ್ಮೂಲಗಳನ್ನೇ ಬಳಿಕೆ

ಮರಿಯಮ್ಮನಹಳ್ಳಿ:ಪರಿಸರಸ್ನೇಹಿ ಮಾರ್ಗೋಪಾಯ, ಸಂಪನ್ಮೂಲಗಳನ್ನೇ ಬಳಿಕೆ ಮಾಡಿಕೊಂಡು ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಡುವ ಮೂಲಕ ವಾತವರಣದಲ್ಲಿ ತಾಪಮಾನ ತಂಪಾಗಿಸುವ ಜೊತೆಗೆ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯವಾಗಲಿದೆ ಎಂದು ಬಿಎಂಎಂ ಇಸ್ಪಾತ್ ಲಿಮಿಟೆಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಮಲ್ ಸಿಂಗ್ ಹೇಳಿದರು.
ಸಮೀಪದ ಡಣಾಪುರಬಳಿಯ ಬಿಎಂಎಂ ಇಸ್ಪಾತ್ ಲಿಮಿಟೆಡ್ ಕಾರ್ಖಾನೆಯ ಆವರಣದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿನೆಟ್ಟು ಉದ್ಘಾಟಿಸಿ ಮಾತನಾಡಿದರು.
  ಪರಿಸರ ಸಮತೋಲನ ಕಾಪಾಡಲು ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು,ಅವುಗಳನ್ನು ಪಾಲನೆ,ಪೋಷಣೆ ಮಾಡಿ ಮರಗಳಾಗಿ ಬೆಳಸುವ ಮೂಲಕ ಗಿಡಗಳನ್ನು ಸಂರಕ್ಷಣೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಬಿಎಂಎಂ ಇಸ್ಪಾತ್ ಲಿಮಿಟೆಡ್‍ನ ಉಪಾಧ್ಯಕ್ಷ ಮನೀಶ್ ಡಿ.ವರ್ಣಿಕರ್ ಮಾತನಾಡಿ,ನಮ್ಮ ಕಾರ್ಖಾನೆಯಲ್ಲಿ ಪ್ರತಿಯೊಬ್ಬರಲ್ಲಿಯೂ ಪರಿಸರ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.ಪ್ರತಿಯೊಬ್ಬರಲ್ಲಿಯೂ ಪರಿಸರಕುರಿತು ಜಾಗೃತಿ ಮೂಡಿಸುವುದು. ಪರಿಸರ ಜಾಗೃತಿಕುರಿತು ವಿವಿಧ ಸ್ಪರ್ಧೆಗಳನ್ನು ನಡೆಸಿ ಅವುಗಳಲ್ಲಿ ವಿಜೇತರಾದವರಿಗೆ ನಮ್ಮ ಕಂಪನಿಯಿಂದ ಬಹುಮಾನಗಳನ್ನು ವಿತರಿಸಲಾಗುತ್ತದೆ. ನಮ್ಮ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಜನ್ಮದಿನದಂದು ಅವರ ಹೆಸರಲ್ಲಿ ಒಂದು ಗಿಡವನ್ನು ನೆಟ್ಟು ಅವುಗಳನ್ನು ಪೋಷಿಸಲಾಗುತ್ತಿದೆ ಎಂದರು.
  ಬಿಎಂಎಂ ಇಸ್ಪಾತ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಮುಖ್ಯಹಣಕಾಸು ಅಧಿಕಾರಿ ವಿ.ವಿ.ವಿ. ರಾಜು ಮಾತನಾಡಿ,ಗಿಡಮರಗಳು ಮನುಷ್ಯನಿಗೆ ಸಾಕಷ್ಟು ಸಹಾಯ ಮಾಡುತ್ತವೆ. ಶುದ್ದ ಗಾಳಿ ನೀಡುತ್ತದೆ. ಪರಿಸರ ಮಾಲಿನ್ಯ ತಡೆಯುತ್ತದೆ.ಈ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಬಿಎಂಎಂ ಇಸ್ಪಾತ್ ಲಿಮಿಟೆಡ್‍ನಿಂದ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನಡೆಸಲಾಗುತ್ತದೆ ಎಂದರು.
ಬಿಎಂಎಂ ಕಂಪನಿಯ ವೈದ್ಯಾಧಿಕಾರಿ ಡಾ. ಪಿ. ವಿಜಯವೆಂಕಟೇಶ್,ಪರಿಸರ ಅಧಿಕಾರಿ ನಾಗವಾಸು ಸೇರಿದಂತೆ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು,ಸಂಸ್ಥೆಯ ಸಿಬ್ಬಂದ್ದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!