ಮತದಾರಪಟ್ಟಿ ಪರಿಷ್ಕರಣೆ ವೀಕ್ಷಕರಾದ ಎನ್.ಜಯರಾಂ ಭೇಟಿ ; ಅಧಿಕಾರಿಗಳೊಂದಿಗೆ ಸಭೆ

Vijayanagara Vani
ಮತದಾರಪಟ್ಟಿ ಪರಿಷ್ಕರಣೆ ವೀಕ್ಷಕರಾದ ಎನ್.ಜಯರಾಂ ಭೇಟಿ ; ಅಧಿಕಾರಿಗಳೊಂದಿಗೆ ಸಭೆ
ಧಾರವಾಡ ) ಜನವರಿ 04: ಧಾರವಾಡ ಜಿಲ್ಲೆಯ ಮತದಾರ ಪಟ್ಟಿ ಪರಿಷ್ಕರಣೆ ವೀಕ್ಷಕರಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್.ಜಯರಾಂ ಅವರು ಇಂದು ಧಾರವಾಡ ಜಿಲ್ಲೆಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಮಾಡಿದರು.
ಅವರು ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಜಿಲ್ಲೆಯ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ನಿಯಮಾನುಸಾರ ಜರುಗಬೇಕು. ಸಹಾಯಕ ಚುನಾವಣಾಧಿಕಾರಿಗಳು ಮತದಾರ ಪಟ್ಟಿ ಪರಿಷ್ಕರಣೆ ಮೇಲುಸ್ತುವಾರಿ ವಹಿಸಿ, ಪರಿಶೀಲಿಸಬೇಕು. ಮತದಾರರ ಹೆಸರು, ಅಡ್ಡಹೆಸರು, ವಯಸ್ಸು ಅರ್ಜಿ ನಮೂನೆ-8 ರ ಅನುಸಾರ ದಾಖಲಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಉತ್ತಮವಾಗಿ ಜರುಗಿದ್ದು, ಅಂತಿಮ ಮತದಾರ ಪಟ್ಟಿ ಪ್ರಕಟಿಸುವ ಪೂರ್ವದಲ್ಲಿ ಮತ್ತೊಮ್ಮೆ ಸಂಬಂಧಿಸಿದ ಮತದಾರ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರ ನೋಂದಣಿ ಅಧಿಕಾರಿಗಳು ಪರಿಶೀಲಿಸಬೇಕೆಂದು ಎನ್.ಜಯರಾಂ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮತದಾರ ನೋಂದಣಿ ಅಧಿಕಾರಿ ಆಗಿರುವ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಮತದಾರ ನೋಂದಣಿ ಅಧಿಕಾರಿ ಡಾ. ಈಶ್ವರ್ ಉಳ್ಳಾಗಡ್ಡಿ, ಸಹಾಯಕ ಮತದಾರ ನೋಂದಣಿ ಅಧಿಕಾರಿಗಳು ಹಾಗೂ ತಹಶಿಲ್ದಾರರಾದ ಡಾ. ದೊಡ್ಡಪ್ಪ ಹೂಗಾರ, ಕಲಗೌಡ ಪಾಟೀಲ, ಬಿ.ಜಿ ಮಜ್ಜಗಿ, ವಿರೇಶ ಮುಳಗುಂದಮಠ, ರಾಜು ಮಾವರಕರ, ಸುಧೀರ ಸಾಹುಕಾರ, ಬಸವರಾಜ ಬೆಣ್ಣಿಶಿರೂರ, ಮಂಜುನಾಥ ದಾಸಪ್ಪನವರ ಹಾಗೂ ಇತರರು ಇದ್ದರು
Share This Article
error: Content is protected !!
";